ಬಸವನಬಾಗೇವಾಡಿ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ 8,215 ಪ್ರಕರಣಗಳಲ್ಲಿ 2,218 ಪ್ರಕರಣ ಕೈಗೆತ್ತಿಕೊಂಡು 1,450 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ 8,215 ಪ್ರಕರಣಗಳಲ್ಲಿ 2,218 ಪ್ರಕರಣ ಕೈಗೆತ್ತಿಕೊಂಡು 1,450 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಲಾಯಿತು.ಅಪರಾಧ, ಎಂವಿಸಿ, ಚೆಕ್ ಬೌನ್ಸ್, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ಲಿ ದಾವೆಗಳು, ಎಲ್.ಎ.ಸಿ.ಇಪಿ, ಎಮ್.ವಿ. ಸಿ. ಇ.ಪಿ, ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಪೂರ್ವದಾವೆ ಪ್ರಕರಣಗಳಲ್ಲಿ ಟ್ರಾಫಿಕ್ ಚಲನ್, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಬ್ಯಾಂಕಿನ ಪ್ರಕರಣಗಳು ಹಾಗೂ ಹೆಸ್ಕಾಂ ವಿಭಾಗದ ವಿದ್ಯುತ್ ಬಾಕಿ ಪಾವತಿ ಪ್ರಕರಣಗಳು ಒಟ್ಟು ಸೇರಿ 8,70,890 ಪ್ರಕರಣಗಳಲ್ಲಿ 7,96,744 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.

ಪ್ರಕರಣಗಳನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ,ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಎಂ. ಗೌಡ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮಂಜುಳಾ ಡಿ, ಸದಸ್ಯ ಕಾರ್ಯದರ್ಶಿ ಅಮಿತ ಘಟ್ಟಿ ಹಾಗೂ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಈರಪ್ಪ ಢವಳೇಶ್ವರ ಅವರು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿದರು.

ಲೋಕ ಅದಾಲತ್‌ನಲ್ಲಿ ಸಂಧಾನಕಾರರಾಗಿ ಐ.ಎ.ಪರಮಗೊಂಡ, ಕೆ.ಜಿ. ಕಂದಗಲ, ಶಿಲ್ಪಾ ಮುಚಖಂಡಿ,ರೇಣುಕಾ ಅಣಿಗೇರಿ, ವಿವಿಧ ವಕೀಲರು, ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕರು ಹಾಗೂ ನ್ಯಾಯಾಲಯ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಇಲಾಖೆಯ ಸಿಬ್ಬಂದಿ, ಕಕ್ಷಿದಾರರು ಭಾಗವಹಿಸಿದ್ದರು.