ಸಾರಾಂಶ
ಎಚ್. ಸಿದ್ದನಂಜಪ್ಪ- ಡಿ.ಸಿ. ಶ್ರೀಕಂಠಪ್ಪ ಅವರಿಗೆ ಸತತ 3ನೇ ಬಾರಿ ಗೆಲುವು,
ಆರ್.ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಸಾರ್ವತ್ರಿಕ ಚುನಾವಣೆ ಅಖಾಡ ಸಿದ್ಧವಾಗುತ್ತಿದ್ದಂತೆ ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಹಲವು ವಿಶೇಷಗಳು ನೆನಪಿಗೆ ಬರುತ್ತವೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಈ ರೀತಿಯ ವಿಶೇಷತೆಗಳು ಕಂಡು ಬರುತ್ತವೆ.ವಿಧಾನಸಭೆ ಮಾತ್ರವಲ್ಲ, ಲೋಕಸಭಾ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಹೀರೊ ಎನಿಸಿಕೊಂಡಿರುವವರು ರಾಜಕಾರಣದಲ್ಲಿ ಇದ್ದು ತೆರೆ ಮರೆಗೆ ಸರಿಸಿದ್ದಾರೆ. ಈ ಸಾಲಿನಲ್ಲಿದ್ದವರು ಎಚ್. ಸಿದ್ದನಂಜಪ್ಪ ಹಾಗೂ ಡಿ.ಸಿ. ಶ್ರೀಕಂಠಪ್ಪ.
ಜಿಲ್ಲೆಯಲ್ಲಿ 1952 ರಿಂದ ಈವರೆಗೆ 19 ಲೋಕಸಭೆ ಚುನಾವಣೆಗಳು ನಡೆದಿವೆ. ಇವುಗಳಲ್ಲಿ ತಕ್ಷಣದ ಬೆಳವಣಿಗೆಯಿಂದಾಗಿ 2 ಉಪ ಚುನಾವಣೆಗಳು ನಡೆದಿದ್ದರೆ, ಇನ್ನೊಂದು ಚುನಾವಣೆಯಲ್ಲಿ ಅವಿರೋಧ ಆಯ್ಕೆಯೂ ಕೂಡ ಆಗಿದೆ. ಇನ್ನುಳಿದಂತೆ ಚುನಾವಣೆಗಳು ನಡೆದಿವೆ.ಕೈ ಹಿಡಿದ ಮತದಾರರು:ದೇಶದಲ್ಲಿ ಮೊದಲ ಲೋಕಸಭಾ ಚುನಾವಣೆ 1952ರಲ್ಲಿ ನಡೆದ ಸಂದರ್ಭದಲ್ಲಿ ಹಾಸನ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಹಾಸನ ಜಿಲ್ಲೆಯವರಾದ ಎಚ್. ಸಿದ್ದನಂಜಪ್ಪ ಜಯಗಳಿಸಿದರು. 1957ರ ಚುನಾವಣೆಯಲ್ಲಿ ಸಿದ್ದನಂಜಪ್ಪ ಅವರೇ ಅವಿರೋಧ ಆಯ್ಕೆಯಾದರು. 1962 ರಲ್ಲಿ ಮೂರನೇ ಬಾರಿಗೆ ಸಿದ್ದನಂಜಪ್ಪ ಜಯಗಳಿಸಿ ಹ್ಯಾಟ್ರಿಕ್ ಹೀರೊ ಸಾಲಿನಲ್ಲಿ ಸ್ಥಾನ ಪಡೆದರು. 1967 ರಲ್ಲಿ ಲೋಕಸಭಾ ಚುನಾವಣೆಯ ವೇಳೆಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕವಾದ ಕ್ಷೇತ್ರದ ಸ್ಥಾನ ಸಿಕ್ಕಿತು. ಹಾಗಾಗಿ ಕಾಂಗ್ರೆಸ್ ಪಕ್ಷದಿಂದ ಎ.ಎಂ. ಬಸವೇಗೌಡ ಸ್ಪರ್ಧೆ ಮಾಡಿದರು. ಪಿಎಸ್‌ಪಿಯಿಂದ ಸ್ಪರ್ಧೆ ಮಾಡಿದ್ದ ಎಂ. ಹುಚ್ಚೇಗೌಡ ಅವರು ಜಯಗಳಿಸಿದರು.ಅರಳಿದ ಕಮಲ:
ಕಾಫಿಯ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿದ್ದು ಲೋಕಸಭೆ ಚುನಾವಣೆಯಲ್ಲಿ. ಹಿಂದಿನ ಲೋಕಸಭೆ ಮಾತ್ರವಲ್ಲ, ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಗೆ ತನ್ನ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. 1998ರಲ್ಲಿ ಡಿ.ಸಿ. ಶ್ರೀಕಂಠಪ್ಪ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿ ಜಯಗಳಿಸಿದರು. ಇದು, ಬಿಜೆಪಿ ಇತಿಹಾಸ. 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಕಂಠಪ್ಪ ಅವರು ಎರಡನೇ ಬಾರಿಗೆ ಸ್ಪರ್ಧೆ ಮಾಡಿದಾಗಲೂ ಜಯಗಳಿಸಿದರು. 2004 ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡಿ ಜಯಗಳಿಸಿದರು. ಇವರು ಕೂಡ ಸೋಲಿಲ್ಲದ ಸರದಾರ, ಹ್ಯಾಟ್ರಿಕ್ ಹೀರೊ ಪಟ್ಟಿಯಲಿ ಸ್ಥಾನ ಪಡೆದರು.ಡಿ.ಸಿ. ಶ್ರೀಕಂಠಪ್ಪ ಅವರು ಅಜಾತಶತ್ರು, ಅವರು ಯಾರೇ ಬಂದರೂ ಪಕ್ಷದ ದೃಷ್ಟಿಯಿಂದ ನೋಡುತ್ತಿರಲಿಲ್ಲ. ಸರ್ಕಾರದ ಮಟ್ಟದಲ್ಲಿ ತಮ್ಮ ಕೈಯಲ್ಲಿ ಆಗುವ ಕೆಲಸವನ್ನು ಎಲ್ಲಾ ಜಾತಿ, ಧರ್ಮದವರಿಗೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರನ್ನು ಕ್ಷೇತ್ರದ ಜನರು ಇಷ್ಟ ಪಡುತ್ತಿದ್ದರು, ಸತತ ಮೂರನೇ ಬಾರಿ ಗೆಲುವಿಗೆ ಇದೆ ಕಾರಣ ಎಂಬ ಮಾತನ್ನು ಯಾರೂ ಕೂಡ ಅಲ್ಲಗಳೆಯುವುದಿಲ್ಲ.
ಸತತ ಎರಡನೇ ಬಾರಿಗೆ ಗೆದ್ದವರೂ ಕೂಡ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇದ್ದಾರೆ. ಡಿ.ಬಿ. ಚಂದ್ರೇಗೌಡ ಹಾಗೂ ಶೋಭಾ ಕರಂದ್ಲಾಜೆ ಅವರು ಕೂಡ ಎರಡು ಬಾರಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಹೀಗೆ ಚಿಕ್ಕಮಗಳೂರು ಕ್ಷೇತ್ರ ಹಲವು ವಿಶೇಷತೆಯನ್ನು ಹೊಂದಿದೆ.ಪೋಟೋ ಫೈಲ್ ನೇಮ್ 7 ಕೆಸಿಕೆಎಂ 5ಎಚ್.ಸಿದ್ದನಂಜಪ್ಪಪೋಟೋ ಫೈಲ್ ನೇಮ್ 7 ಕೆಸಿಕೆಎಂ 6ಡಿ.ಸಿ. ಶ್ರೀಕಂಠಪ್ಪ