ಸಾರಾಂಶ
ನಿವೇಶನವನ್ನು ವರ್ಗಾಯಿಸಿಕೊಡಲು ₹2,500ಕ್ಕೆ ಬೇಡಿಕೆ ಇಟ್ಟಿದ್ದ ಪಾಲಿಕೆ ಪ್ರಥಮ ದರ್ಜೆ ಸಹಾಯಕನೊಬ್ಬ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
- ನಿವೇಶನ ವರ್ಗಾವಣೆಗೆ ₹2,500 ಕೇಳಿದ್ದ ಪಾಲನಾಯಕ
- - - ಕನ್ನಡಪ್ರಭ ವಾರ್ತೆ, ದಾವಣಗೆರೆನಿವೇಶನವನ್ನು ವರ್ಗಾಯಿಸಿಕೊಡಲು ₹2,500ಕ್ಕೆ ಬೇಡಿಕೆ ಇಟ್ಟಿದ್ದ ಪಾಲಿಕೆ ಪ್ರಥಮ ದರ್ಜೆ ಸಹಾಯಕನೊಬ್ಬ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ನಗರದ ಪಾಲಿಕೆ ವಲಯ ಕಚೇರಿ-2ರ ಪ್ರಥಮ ದರ್ಜೆ ಸಹಾಯಕ ಪಾಲನಾಯಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದ ಆರೋಪಿ. ನಗರದ ಜಿ.ಯು.ಬಸವನಗೌಡ ಎಂಬುವರು ಆವರಗೆರೆ ವಾರ್ಡ್ ನಂ.30ರ ಬಾಡಾ ಕ್ರಾಸ್‌ನ ಮೋದಿ ನಗರದ ಖಾಲಿ ನಿವೇಶನ- ಡೋರ್ ನಂಬರ್ 338/21 ರ 30-40 ಅಳತೆ ನಿವೇಶನವನ್ನು ತಮ್ಮ ತಂಗಿ ಜಿ.ಯು.ಕಾವ್ಯ ಹೆಸರಿಗೆ ಪಾಲು ವಿಭಾಗ ಯಾನೆ ಪಾರೀಖತ್ ಪತ್ರದ ಮುಖಾಂತರ ನೋಂದಣಿ ಮಾಡಿಸಿದ್ದರು.ಈ ಆಸ್ತಿ ಕಾವ್ಯ ಹೆಸರಿಗೆ ನಿವೇಶನ ಖಾತೆ ವರ್ಗಾವಣೆ ಮಾಡಿಕೊಡಲು ಪಾಲನಾಯಕ ₹2500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಾಲು ವಿಭಾಗದಲ್ಲಿ ಮಾಡಿಕೊಂಡ ನಿವೇಶನ ಸಹೋದರಿಗೆ ಹೆಸರಿಗೆ ವರ್ಗಾಯಿಸಿಕೊಡಲು ಲಂಚ ಕೊಡಲು ಬಸವನಗೌಡ ಇಷ್ಟಪಡಲಿಲ್ಲ. ಬದಲಿಗೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪಾಲನಾಯಕನ ವಿರುದ್ಧ ದೂರು ನೀಡಿ, ಕ್ರಮ ಜರಿಗಿಸಲು ಕೋರಿದ್ದರು. ಪಾಲಿಕೆ ವಲಯದ ಕಚೇರಿ-2ರ ತಮ್ಮ ಕೊಠಡಿಯಲ್ಲಿ ಶುಕ್ರವಾರ ಪಿರ್ಯಾದಿ ಬಸವನಗೌಡರಿಂದ ಪ್ರಥಮ ದರ್ಜೆ ಸಹಾಯಕ ಪಾಲ ನಾಯಕ ₹2,500 ಲಂಚದ ಪಡೆಯುವಾಗ ಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಮುಸ್ತಾಕ್ ಅಹಮ್ಮದ್, ಲೋಕಾಯುಕ್ತ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪಾಲನಾಯಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.- - - -14ಕೆಡಿವಿಜಿ1.ಜೆಪಿಜಿ:
ಪಾಲನಾಯಕ