ದಾಬಸ್‌ಪೇಟೆಯ ಸೋಂಪುರ ಗ್ರಾಮ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ

| Published : Aug 09 2024, 12:35 AM IST

ದಾಬಸ್‌ಪೇಟೆಯ ಸೋಂಪುರ ಗ್ರಾಮ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ ಪಟ್ಟಣದ ಸೋಂಪುರ ಗ್ರಾಮ ಪಂಚಾಯತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಮಧ್ಯಾಹ್ನ ದಾಳಿ ನಡೆಸಿ ಹಲವಾರು ದಾಖಲಾತಿ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರ ದೂರು ಹಿನ್ನೆಲೆ ಬೆಂಗ್ರಾ ಜಿಲ್ಲೆಯಾದ್ಯಂತ 18 ಕಡೆ ದಾಳಿ । ದಾಖಲೆಗಳ ಪರಿಶೀಲನೆಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಪಟ್ಟಣದ ಸೋಂಪುರ ಗ್ರಾಮ ಪಂಚಾಯತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಮಧ್ಯಾಹ್ನ ದಾಳಿ ನಡೆಸಿ ಹಲವಾರು ದಾಖಲಾತಿ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಇಲಾಖೆಯ ಮುಖ್ಯಸ್ಥರು, ಉಪಲೋಕಾಯುಕ್ತರ ಆದೇಶ ಮತ್ತು ಸಾರ್ವಜನಿಕರ ದೂರಿನ ಹಿನ್ನಲೆ ದಾಳಿ ನಡೆದಿದೆ, ಬೆಂಗಳೂರು ಗ್ರಾ.ಜಿಲ್ಲೆಯಾದ್ಯಂತ 18 ಕಡೆ ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಉಪ ನಿಬಂಧಕರು, ಡಿವೈಎಸ್ಪಿ, ಇನ್ಸ್ ಪೆಕ್ಟರ್, ಸಿಬ್ಬಂದಿ ಸೇರಿದಂತೆ ಒಟ್ಟು 20 ಜನರ ತಂಡ ದಾಳಿ ಮಾಡಿ 5 ಗಂಟೆಗಳ ಕಾಲ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ.

ಆಡಳಿತ ಯಂತ್ರಕ್ಕೆ ಚಾಟಿ: ಪಂಚಾಯತಿಗಳಲ್ಲಿ ಸರ್ಕಾರಿ ಕೆರೆ, ಗುಂಡುತೋಪು, ಗೋಮಾಳ ಒತ್ತುವರಿ ಸೇರಿದಂತೆ, ಖಾತೆ ವರ್ಗಾವಣೆ, ಸ್ವಚ್ಛತೆ, ಅನಧಿಕೃತ ಕಟ್ಟಡ ನಿರ್ಮಾಣ, ಪಂಚಾಯತಿ ಜನಪ್ರತಿನಿಧಿಗಳ ಸಂಬಂಧಿಗಳಿಗೆ ಕಾಮಗಾರಿ ನೀಡಿಕೆ, ಬೇರೆ ಹೆಸರಲ್ಲಿ ಹಣ ವರ್ಗಾವಣೆ, ಕಾನೂನು ಪಾಲಿಸದೆ ಇರುವುದು ಇಂತಹ ಹಲವಾರು ದೂರುಗಳು ಲೋಕಾಯುಕ್ತಕ್ಕೆ ಬಂದ ಹಿನ್ನಲೆ ದಾಳಿಯಾಗಿದೆ, ಜಿಲ್ಲಾ ಲೋಕಾಯುಕ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದು, ಆಡಳಿತ ಯಂತ್ರಕ್ಕೆ ಚಾಟಿ ಬೀಸಿದ್ದಾರೆ.

ದೊಡ್ಡ ಪಂಚಾಯತಿ:

ತಾಲೂಕಿನಲ್ಲೇ ಅತೀ ದೊಡ್ಡ ಪಂಚಾಯತಿಯಾದ ಸೋಂಪುರ, 11 ಗ್ರಾಮಗಳನ್ನು ಒಳಗೊಂಡು, 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹಾಗೂ ಅನಿವಾಸಿಯರು ಹೆಚ್ಚಾಗಿದ್ದು, ಕಸದ ಸಮಸ್ಯೆ, ಪಂಚಾಯತಿ ಮೇಲ್ದರ್ಜೆಗೆ, ಇನ್ನೀತರ ಹಲವು ವಿಚಾರದ ದಾಖಲೆ ಪಡೆದು ಪಿಡಿಒ ರವಿಶಂಕರ್ ರಿಂದ ಮಾಹಿತಿ ಪಡೆದರು.

ಬೂದಿಹಾಳ್ ಗ್ರಾಪಂ ಮೇಲೆ ದಾಳಿ:

ಇನ್ನೊಂದು ಲೋಕಾಯುಕ್ತರ ತಂಡವೊಂದು ನೆಲಮಂಗಲ ತಾಲೂಕಿನ ಬೂದಿಹಾಲ್ ಗ್ರಾಪಂ ಮೇಲೆ ದಾಳಿ ಮಾಡಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.