ದೆಹಲಿಯಲ್ಲಿ ಅರಳಿದ ಕಮಲ, ಬಿಜೆಪಿ ವಿಜಯೋತ್ಸವ

| Published : Feb 09 2025, 01:17 AM IST

ಸಾರಾಂಶ

ಭ್ರಷ್ಟಾಚಾರ ನಿರ್ಮೂಲನೆ ನೆಪದಲ್ಲಿ ಅಧಿಕಾರಕ್ಕೆ ಬಂದ ಆಮ್ ಆಮ್ ಆದ್ಮಿ ಪಕ್ಷ ಅದೇ ಭ್ರಷ್ಟಾಚಾರದಿಂದ ಸಿಎಂ ಕ್ರೇಜ್ರಿವಾಲ್ ಸೇರಿದಂತೆ ಅನೇಕರು ಜೈಲು ಪಾಲಾದರು.

ಗದಗ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ 27 ವರ್ಷಗಳ ನಂತರ ಅಧಿಕಾರದ ಗದ್ದುಗೆ ಹಿಡಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಜಿಲ್ಲಾ ಬಿಜೆಪಿ, ಗದಗ ಶಹರ ಬಿಜೆಪಿ ಘಟಕ, ಜಿಲ್ಲಾ ಯುವ ಮೋರ್ಚಾ, ಮಹಿಳಾ ಮೋರ್ಚಾದಿಂದ ನಗರದ ಹುಯಿಲಗೋಳ ನಾರಾಯಣರಾವ್ (ಟಾಂಗಾಕೂಟ್) ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಹಿರಿಯ ಮುಖಂಡ ಎಂ.ಎಸ್. ಕರಿಗೌಡ್ರ ಮಾತನಾಡಿ, ಬಿಜೆಪಿ ಕಾರ್ಯಕರ್ತರಿಗೆ ಹಬ್ಬದ ದಿನವಾಗಿದೆ. ದೆಹಲಿಯಲ್ಲಿ 15 ವರ್ಷ ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಹಾಗೂ 10 ವರ್ಷ ಆಮ್ ಆದ್ಮಿ ಪಕ್ಷ ಅಧಿಕಾರ ನಡೆಸಿದ್ದವು.ಆದರೆ ಅವರ ಭ್ರಷ್ಟಾಚಾರದಿಂದ ಬೇಸತ್ತಿದ್ದ ದೆಹಲಿ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ.ಭ್ರಷ್ಟಾಚಾರ ನಿರ್ಮೂಲನೆ ನೆಪದಲ್ಲಿ ಅಧಿಕಾರಕ್ಕೆ ಬಂದ ಆಮ್ ಆಮ್ ಆದ್ಮಿ ಪಕ್ಷ ಅದೇ ಭ್ರಷ್ಟಾಚಾರದಿಂದ ಸಿಎಂ ಕ್ರೇಜ್ರಿವಾಲ್ ಸೇರಿದಂತೆ ಅನೇಕರು ಜೈಲು ಪಾಲಾದರು.

ಅಣ್ಣಾ ಹಜಾರೆ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಆಮ್ ಆದ್ಮಿ ಭ್ರಷ್ಟಾಚಾರದಲ್ಲಿ ಮುಳುಗಿ ಅಣ್ಣಾ ಹಜಾರೆಯವರ ಶಾಪದಿಂದ ಅಧಿಕಾರ ಕಳೆದುಕೊಂಡಿದೆ.ಅಭಿವೃದ್ಧಿ ಬಿಟ್ಟು ಕೇವಲ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಿದ್ದಕ್ಕೆ ದೆಹಲಿ ಜನ ತಕ್ಕಪಾಠ ಕಲಿಸಿದ್ದಾರೆ. ನರೇಂದ್ರ ಮೋದಿ ಭಾರತದ ಸರ್ವೊಚ್ಚ ನಾಯಕ ಅಂತ ಜನತೆ ನಿರ್ಮಾಣ ಮಾಡಿ ಬಿಜೆಪಿ ಕೈ ಹಿಡಿದಿದ್ದಾರೆ ಎಂದರು.

ವಿಜಯೋತ್ಸವದಲ್ಲಿ ನಗರಸಭೆ ಸದಸ್ಯ ಮುತ್ತಣ್ಣ ಮುಶಿಗೇರಿ, ಹಿರಿಯ ಮುಖಂಡ ಅಶೋಕ ನಲಗುಂದ, ಶ್ರೀಪತಿ ಉಡುಪಿ, ಗಂಗಾಧರ ಮೇಲಗೆರಿ, ಶಂಕರ ಮಲ್ಲಸಮುದ್ರ, ಇರ್ಷಾದ್ ಮಾನ್ವಿ, ರಮೇಶ್ ಸಜ್ಜಗಾರ, ವಿನಾಯಕ ಹಬೀಬ, ಜಗನ್ನಾಥಸಾ ಭಾಂಡಗೆ, ಬಿ.ಎಚ್.ಲದ್ವಾ, ಬಸವಣೆಪ್ಪ ಚಿಂಚಲಿ, ವಿಜಯಲಕ್ಷ್ಮೀ ಮಾನ್ವಿ, ಸುರೇಶ ಹೆಬಸೂರ, ಜಯಶ್ರೀ ಅಣ್ಣಿಗೇರಿ, ಗಂಗಾಧರ ಹಬೀಬ, ರಮೇಶ ಹತ್ತಿಕಾಳ, ಕುಮಾರ ಮಾರನಬಸರಿ, ಕೆ. ಪಿ ಕೋಟಿಗೌಡ್ರ, ಲಿಂಗರಾಜ ಪಾಟೀಲ, ಶಿವರಾಜಗೌಡ ಹಿರೇಮನಿಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಜನಪ್ರೀಯತೆ ವಿಶ್ವದ ಮುಂದೆ ಮತ್ತೊಮ್ಮೆ ಸಾಬೀತಾಗಿದೆ. ಆಮ್ ಆದ್ಮಿ ದುರಹಂಕಾರದಿಂದ ಅಧಿಕಾರ ಕಳೆದುಕೊಂಡರೇ,ಇತ್ತ ಕಾಂಗ್ರೆಸ್ ಸೊನ್ನೆ ಸುತ್ತುವ ಮೂಲಕ ಸಾಧನೆ ಮಾಡಿದೆ. ಈಗಲಾದರೂ ಮೋದಿ ಮತ್ತು ಬಿಜೆಪಿಯನ್ನು ಟೀಕೆ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಿ ಜನತೆಯ ವಿಶ್ವಾಸ ಗಳಿಸಲಿ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದ್ದಾರೆ.