ರಾಜ್ಯ ಸರ್ಕಾರ ಹಾಗೂ ಇಲಾಖೆ ಯಾರನ್ನೋ ರಕ್ಷಿಸಲು ಹೋಗಿ ಅಮಾಯಕರು ಬಲಿಯಾಗಬಾರದು. ಹಿಂದು ಸಮಾಜದ ಸಹನೆಯನ್ನು ಪರೀಕ್ಷೆ ಮಾಡಬಾರದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ:
ಹಿಂದೆ ಲವ್ ಜಿಹಾದ್ ನಡೆಯುತ್ತಿದ್ದವು. ಈಗ ಜಿಮ್ ಜಿಹಾದ್‌ಗಳಾಗಿ ಪರಿವರ್ತನೆ ಹೊಂದಿದೆ. ಕಾಲೇಜುಗಳಲ್ಲಿ ಇಂತಹ ಘಟನೆಗಳು ಮೊದಲಿಗಿಂತಲೂ ಈಗ ಹೆಚ್ಚಾಗಿವೆ. ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇನ್ಮುಂದಾದರೂ ಜನತೆ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಇವುಗಳ ತಡೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಇಲಾಖೆ ಯಾರನ್ನೋ ರಕ್ಷಿಸಲು ಹೋಗಿ ಅಮಾಯಕರು ಬಲಿಯಾಗಬಾರದು. ಹಿಂದು ಸಮಾಜದ ಸಹನೆಯನ್ನು ಪರೀಕ್ಷೆ ಮಾಡಬಾರದು. ಇದೇ ರೀತಿಯಾಗಿ ಮುಂದುವರಿದಲ್ಲಿ ಮುಂದೆ ಆಗುವ ಅನಾಹುತಕ್ಕೆ ಸರ್ಕಾರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದರೂ ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಈ ಕುರಿತು ಒಂದೇ ಒಂದು ಹೇಳಿಕೆ ನೀಡಿಲ್ಲ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ನಡೆದಾಗ ಎಲ್ಲ ಪಕ್ಷಗಳು, ಸಮಾಜ, ಜಾತಿಗಳು ವಿರೋಧಿಸಬೇಕು. ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾವು ಇಷ್ಟಕ್ಕೆ ಇದನ್ನು ನಿಲ್ಲಿಸುವುದಿಲ್ಲ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೋರಾಟ ಹಮ್ಮಿಕೊಳ್ಳುತ್ತೇವೆ. ಗೃಹ ಸಚಿವರು ಒಳ್ಳೆಯವರಿದ್ದು, ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ಆಗ್ರಹಿಸಿದರು.