ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವುದರ ಜೊತೆಗೆ ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಲೊಯೋಲ ವಿಕಾಸ ಕೇಂದ್ರ, ಹಾನಗಲ್ಲ ಹಾಗೂ ಬೆಂಗಳೂರಿನ ಸೇಂಟ್‌ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಹಯೋಗದಲ್ಲಿ ಹಾನಗಲ್ಲ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರಿನ ಸೇಂಟ್‌ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹಕಾರಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವುದರ ಜೊತೆಗೆ ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಲೊಯೋಲ ವಿಕಾಸ ಕೇಂದ್ರ, ಹಾನಗಲ್ಲ ಹಾಗೂ ಬೆಂಗಳೂರಿನ ಸೇಂಟ್‌ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಹಯೋಗದಲ್ಲಿ ಹಾನಗಲ್ಲ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಲೊಯೋಲ ವಿಕಾಸ ಕೇಂದ್ರದ ಸಮಾಜ ಕಾರ್ಯಕರ್ತರು ಶಾಲೆಗಳಿಗೆ ಭೇಟಿ ನೀಡಿ, ಮುಖ್ಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ, ಶಾಲೆಗಳ ಅಗತ್ಯಗಳನ್ನು ಗುರುತಿಸಿದ ನಂತರ ಈ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದಾರೆ.

೨೦೨೬ನೇ ಸಾಲಿನಲ್ಲಿ ದಶರಥಕೊಪ್ಪ ಮತ್ತು ಹೊತನಹಳ್ಳಿ ಶಾಲೆಗಳಿಗೆ ಬಣ್ಣ ಬಳಿಯುವ ಕಾರ್ಯ, ಶಿರಗೋಡ ಶಾಲೆಗೆ ಕುಡಿಯುವ ನೀರಿನ ಫಿಲ್ಟರ್, ಬಾಳೆಹಳ್ಳಿ ಶಾಲೆಗೆ ೨೦ ಬೆಂಚು ಮತ್ತು ೨೦ ಡೆಸ್ಕ್‌ಗಳು, ಶೃಂಗೇರಿ ಶಾಲೆಗೆ ಪ್ರಿಂಟರ್ ಹಾಗೂ ಸಾವಿಕೇರಿ ಶಾಲೆಗೆ ಸ್ಮಾರ್ಟ್ ಬೋರ್ಡ್‌ ಒದಗಿಸಲಾಗಿದೆ.

ಈ ಕಾರ್ಯಗಳಲ್ಲಿ ಸ್ಥಳೀಯ ಸಮುದಾಯದ ಸಹಭಾಗಿತ್ವವೂ ವಿಶೇಷವಾಗಿತ್ತು. ದಶರಥಕೊಪ್ಪ ಮತ್ತು ಹೋತನಹಳ್ಳಿಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಬಣ್ಣ ಬಳಿಯುವ ಕೆಲಸದ ಕೂಲಿ ವೆಚ್ಚವನ್ನು ಭರಿಸುವ ಮೂಲಕ ಸಹಕರಿಸಿದ್ದಾರೆ. ಸಾವಿಕೇರಿ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಬಳಕೆಗೆ ಅಗತ್ಯವಾದ ಇನ್ವರ್ಟರ್ ವ್ಯವಸ್ಥೆಯನ್ನೂ ಗ್ರಾಮಸ್ಥರು ಒದಗಿಸಿದ್ದಾರೆ. ಇದರಿಂದ ಶಾಲೆಯ ಅಭಿವೃದ್ಧಿ ಕೇವಲ ಹೊರಗಿನ ಸಂಸ್ಥೆಗಳ ಜವಾಬ್ದಾರಿಯಾಗಿರದೆ, ಅದು ಇಡೀ ಸಮುದಾಯದ ಹೊಣೆಗಾರಿಕೆಯೂ ಹೌದು ಎಂಬ ಆಶಯಕ್ಕೆ ಬಲ ದೊರೆತಿದೆ.

ಇದಕ್ಕೂ ಮುನ್ನ ೨೦೨೫ನೇ ಸಾಲಿನಲ್ಲಿ ಇನಾಂನೇರಲಗಿ ಶಾಲೆಗೆ ಸ್ಮಾರ್ಟ್ ಬೋರ್ಡ್ ಮತ್ತು ಧ್ವಜಸ್ತಂಭವನ್ನು ಒದಗಿಸಲಾಗಿತ್ತು. ಕತ್ರಿಕೊಪ್ಪ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವ ಕಾರ್ಯವನ್ನೂ ಕೈಗೊಳ್ಳಲಾಗಿತ್ತು.

ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ಸುಮಾರು ೭.೫೦ ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗಿದ್ದು, ಬೆಂಗಳೂರಿನ ಸೇಂಟ್‌ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಉದಾರವಾಗಿ ಆರ್ಥಿಕ ನೆರವು ನೀಡಿದೆ

ಶಾಲೆಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವುದರ ಜೊತೆಗೆ, ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರು, ಪೋಷಕರು ಮತ್ತು ಸ್ಥಳೀಯ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಬೆಳೆಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಶಾಲೆಯು ಕೇವಲ ಮಕ್ಕಳ ಕಲಿಕೆಯ ಸ್ಥಳವಲ್ಲ; ಅದು ಇಡೀ ಗ್ರಾಮದ ಭವಿಷ್ಯವನ್ನು ರೂಪಿಸುವ ಕೇಂದ್ರ ಎಂಬ ಅರಿವು ಸಮುದಾಯದಲ್ಲಿ ಮೂಡಿದಾಗ ಮಾತ್ರ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸುಸ್ಥಿರವಾಗಲು ಸಾಧ್ಯ.ಈ ಯೋಜನೆಯ ಉದ್ದೇಶ ನಮ್ಮ ಹಳ್ಳಿಗಳ ಶಾಲೆಗಳು ಸುಸ್ಥಿರವಾಗಬೇಕು. ಮೂಲಸೌಕರ್ಯಗಳ ಜೊತೆಗೆ ಆಧುನಿಕ ವ್ಯವಸ್ಥೆಗಳು ಹಳ್ಳಿಗೆ ತಲುಪಬೇಕು. ಖಾಸಗಿ ಸಂಸ್ಥೆಗಳ ಜೊತೆಗೆ ಹಳ್ಳಿಯ ಜನರುಇಂತಹ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು, ಇದು ನಮ್ಮಉದ್ದೇಶ

ವಿನ್ಸೆಂಟ್‌ಜೈಸನ್, ನಿರ್ದೇಶಕರು, ಎಲ್.ವಿ.ಕೆ, ಹಾನಗಲ್ನಮ್ಮ ಸಂಸ್ಥೆಯಿಂದ ಲೊಯೋಲ ವಿಕಾಸ ಕೇಂದ್ರದ ಮುಖಾಂತರ ಹಾನಗಲ್‌ ತಾಲೂಕಿನ ಶಾಲೆಗಳಿಗೆ ಆರ್ಥಿಕ ಸಹಾಯ ಮಾಡಿದ್ದೇವೆ. ಈ ಮುಖಾಂತರ ನಾವು ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲೆಂದು ಆಶೀಸುತ್ತೇವೆ

ಫಾದರ್‌ರೋಶನ್ ಪಿರೇರಾ, ನಿರ್ದೇಶಕರು, ಸೇಂಟ್‌ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್.