ಚಂದ್ರಗ್ರಹಣ: ಇಂದು ಉಡುಪಿ ಕೃಷ್ಣಮಠದಲ್ಲಿ 1008 ಕೃಷ್ಣಮಂತ್ರ ಜಪ

| Published : Sep 07 2025, 01:01 AM IST

ಚಂದ್ರಗ್ರಹಣ: ಇಂದು ಉಡುಪಿ ಕೃಷ್ಣಮಠದಲ್ಲಿ 1008 ಕೃಷ್ಣಮಂತ್ರ ಜಪ
Share this Article
  • FB
  • TW
  • Linkdin
  • Email

ಸಾರಾಂಶ

ಬೇರೆ ದಿನಗಳಲ್ಲಿ ಮಧ್ಯಾಹ್ನ 12.30ರಿಂದ 3.30ರ ವರೆಗೆ ಅನ್ನಪ್ರಸಾದ ನಡೆಯುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ಗ್ರಹಣದ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಅಜೀರ್ಣವಾದ ಆಹಾರವಿರಬಾರದು ಎಂಬ ಕಾರಣಕ್ಕೆ ಗ್ರಹಣಕ್ಕೆ 6 ಗಂಟೆ ಮೊದಲು ಅನ್ನಪ್ರಸಾದ ವಿತರಣೆ ಮುಗಿಯಲಿದೆ.

ಮಧ್ಯಾಹ್ನ 12 ಗಂಟೆಯೊಳಗೆ ಅನ್ನಪ್ರಸಾದ, ಸಂಜೆಯೊಳಗೆ ಪೂಜೆ ಸಂಪನ್ನಕನ್ನಡಪ್ರಭ ವಾರ್ತೆ ಉಡುಪಿಇಂದು ಖಗ್ರಾಸ ಚಂದ್ರಗ್ರಹಣದ ಪ್ರಯುಕ್ತ ಉಡುಪಿ ಮಠದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ಸಮಯವನ್ನು ಬದಲಾಯಿಸಲಾಗಿದೆ. ಬೆಳಗ್ಗೆ 10.30 ರಿಂದ 12 ಗಂಟೆಯ ನಡುವೆ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ.

ಬೇರೆ ದಿನಗಳಲ್ಲಿ ಮಧ್ಯಾಹ್ನ 12.30ರಿಂದ 3.30ರ ವರೆಗೆ ಅನ್ನಪ್ರಸಾದ ನಡೆಯುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ಗ್ರಹಣದ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಅಜೀರ್ಣವಾದ ಆಹಾರವಿರಬಾರದು ಎಂಬ ಕಾರಣಕ್ಕೆ ಗ್ರಹಣಕ್ಕೆ 6 ಗಂಟೆ ಮೊದಲು ಅನ್ನಪ್ರಸಾದ ವಿತರಣೆ ಮುಗಿಯಲಿದೆ.ಅಲ್ಲದೇ ಗ್ರಹಣ ಕಾಲದಲ್ಲಿ ಕೃಷ್ಣ ಮಠದಲ್ಲಿ ಗ್ರಹಣ ಶಾಂತಿ ಹವನಗಳನ್ನು ಆಯೋಜಿಸಲಾಗಿದೆ. ಗ್ರಹಣ ರಾತ್ರಿ ನಡೆಯಲಿರುವುದರಿಂದ ಅದಕ್ಕೂ ಮೊದಲೇ ಕೃಷ್ಣನ ರಾತ್ರಿಯ ಎಲ್ಲ ಪೂಜೆಗಳು ಮುಗಿಯಲಿವೆ. ಗ್ರಹಣ ಆರಂಭಕ್ಕೂ ಮೊದಲು ದೇವರಿಗೆ ಮಾಡಿದ ಎಲ್ಲ ಅಲಂಕಾರವನ್ನು ತೆಗೆಯಲಾಗುತ್ತದೆ. ಗ್ರಹಣದ ಮಧ್ಯಕಾಲದಲ್ಲಿ ಕೃಷ್ಣನಿಗೆ ಪರ್ಯಾಯ ಶ್ರೀಗಳು ಆರತಿ ಬೆಳಗಲಿದ್ದಾರೆ.ಗ್ರಹಣ ಸ್ಪರ್ಶ ಕಾಲ ಮತ್ತು ಅಂತ್ಯ ಕಾಲದಲ್ಲಿ ಭಕ್ತರಿಗೆ ಮಠದ ಮಧ್ವ ಸರೋವರದಲ್ಲಿ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದರ ನಡುವೆ ಭಕ್ತರು ಮಠದೊಳಗೆ, ರಥಬೀದಿ ಮತ್ತು ಮಧ್ವ ಸರೋವರದ ಸುತ್ತ ಜಪ ನಡೆಸಲಿದ್ದಾರೆ.

ಗ್ರಹಣದ ದೋಷ ನಿವಾರಣೆಗೆ ಕೃಷ್ಣಮಠದಲ್ಲಿ ಸೆ.7ರಂದು ಬೆಳಗ್ಗೆ 10ರಿಂದ 11 ಗಂಟೆ ವರೆಗೆ 1008 ಜನರಿಂದ 1008 ಬಾರಿ ಕೃಷ್ಣಮಂತ್ರ ಜಪ ನಡೆಯಲಿದೆ.ಮೂಕಾಂಬಿಕೆಗೆ ನಿರಂತರ ಅಭಿಷೇಕ:

ಚಂದ್ರಗ್ರಹಣದ ಪ್ರಯುಕ್ತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆಯಲ್ಲಿ ಕೆಲ ವ್ಯತ್ಯಯಗಳಾಗಲಿವೆ. ದೇವರ ರಾತ್ರಿ ಬಲಿ ಮತ್ತು ಉತ್ಸವಗಳು ಚಂದ್ರಗ್ರಹಣ ಆರಂಭವಾಗುವುದಕ್ಕೆ ಮುಂಚಿತವಾಗಿ ಸಂಜೆಯೇ ನಡೆಸಲಾಗುತ್ತದೆ.

ಗ್ರಹಣ ಕಾಲದುದ್ದಕ್ಕೂ ಲೋಕಕಲ್ಯಾಣಾರ್ಥವಾಗಿ ಮೂಕಾಂಬಿಕಾ ದೇವಿಗೆ ಅರ್ಚಕರು ನಿರಂತರವಾಗಿ ಅಭಿಷೇಕಗಳನ್ನು ನಡೆಸಲಿದ್ದಾರೆ. ಗ್ರಹಣ ಮುಕ್ತಿಯಾದ ಮೇಲೆ ಮಂಗಳಾರತಿ ಸಲ್ಲಿಸುತ್ತಾರೆ.