ಶಿವಮೊಗ್ಗದಲ್ಲಿ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ: ಬೃಹತ್‌ ಮೆರವಣಿಗೆ

| Published : Nov 05 2023, 01:18 AM IST

ಶಿವಮೊಗ್ಗದಲ್ಲಿ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ: ಬೃಹತ್‌ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಸ್ವೀಕಾರ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಈಚೇಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಾಂಕೇತಿಕವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ಶ್ರೀಕಾಂತ್‌ ಶನಿವಾರ ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಎಂ.ಶ್ರೀಕಾಂತ್‌ ಕಾಂಗ್ರೆಸ್‌ ಸೇರ್ಪಡೆಗೂ ಮುನ್ನ ನಗರದಲ್ಲಿ ಬೃಹತ್‌ ಮೆರವಣಿಗೆ ನಡೆಯಿತು. ಬೆಳಗ್ಗೆ ಶುಭ ಮಂಗಳದಿಂದ ಹೊರಟ ಬೃಹತ್ ಮೆರವಣಿಗೆ ಶುಭಮಂಗಳ, ವಿನೋಬ ನಗರ ಚೌಕಿ, ಲಕ್ಷ್ಮೀ ಚಲನಚಿತ್ರ ಮಂದಿರ ಜೈಲ್ ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ ಮೂಲಕ ಕಾಂಗ್ರೆಸ್ ಕಚೇರಿ ತಲುಪಿತು.

ಪಟಾಕಿ ಸಿಡಿಸಿ, ವಾದ್ಯಗಳ ಬಾರಿಸುವ ಮೂಲಕ ಮೆರವಣಿಗೆ ಸಾಗಿತು. ಕಾಂಗ್ರೆಸ್‌ ಕಚೇರಿ ಬಳಿ ಅಭಿಮಾನಿಗಳು ಎಂ.ಶ್ರೀಕಾಂತ್‌ ಅವರಿಗೆ ಬೃಹದಾಕಾರದ ಸೇಬು ಹಾಗೂ ಹೂವಿನ ಹಾರವನ್ನು ಹಾಕಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು, ವಿರೋಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ. ಜಿಲ್ಲೆಯಲ್ಲಿಯೂ ಹಲವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಈಗ ಎಂ.ಶ್ರೀಕಾಂತ್‌ ಪಕ್ಷ ಸೇರಿರುವುದು ಕಾಂಗ್ರೆಸ್‌ಗೆ ಇನ್ನಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಎಂ.ಶ್ರೀಕಾಂತ್‌ ಅವರು ರಾಜಕೀಯ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಅವರು ತೊಡಗಿಕೊಂಡಿದ್ದಾರೆ. ಬಡವರ ಪರ ತುಡಿತ ಇರುವ ಎಂ.ಶ್ರೀಕಾಂತ್‌ ಅವರು ಕಾರ್ಮಿಕ ವಲಯ, ಕ್ಷಮಿಕ ವಲಯ ಹೀಗೆ ಎಲ್ಲರ ಏಳಿಗೆಗೂ ಶ್ರಮಿಸುವ ಮನೋಭಾವ ಹೊಂದಿದ್ದಾರೆ. ಹೀಗಾಗಿ ಅವರು ಅಪಾರ ಜನ ಬೆಂಬಲ ಗಳಿಸಿದ್ದಾರೆ. ಅವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು ಪಕ್ಷದ ಬಲ ಹಿಮ್ಮಡಿಗೊಳಿಸಿದೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮಾತನಾಡಿ, ಎಂ.ಶ್ರೀಕಾಂತ್‌ ಅವರು ಸೇರ್ಪಡೆಯಿಂದ ಪಕ್ಷಕ್ಕೆ ಬಲ ಹೆಚ್ಚಿಸಿದೆ. ನಾವು ಸುಮ್ಮನೆ ಭಾಷಣ ಮಾಡುತ್ತಾ ಕುಳಿತರೇ ಆಗುವುದಿಲ್ಲ. ಮನೆ-ಮನೆಗೆ ಭೇಟಿ ಕೊಡಬೇಕು. ಜನರಿಗೆ ನಮ್ಮ ಪಕ್ಷದ ಸಾಧನೆ, ತತ್ವ-ಸಿದ್ದಾಂತದ ಬಗ್ಗೆ ಮನವರಿಕೆ ಮಾಡಿ ಅವರನ್ನು ಪಕ್ಷದತ್ತ ಸೆಳಶ್ಲು ಶ್ರಮಿಸಬೇಕು. ಆಗ ಮಾತ್ರ ಪಕ್ಷದ ಗೆಲುವು ಸುಲಭ ಎಂದರು.

ವಿಪ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ‌ ಆರ್.ಎಂ.ಮಂಜುನಾಥ್ ಗೌಡ , ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್ , ಪಾಲಿಕೆ ಸದಸ್ಯ ಎಚ್‌.ಸಿ.ಯೋಗೇಶ್‌, ಕಲಗೋಡು ರತ್ನಾಕರ್‌, ಕೆ.ದೇವೇಂದ್ರಪ್ಪ, ಗಿರೀಶ್‌, ವಿಶ್ವನಾಥ್‌ ಕಾಶಿ, ಮತ್ತಿತರರು ಇದ್ದರು.

- - - -4ಎಸ್‌ಎಂಜಿಕೆಪಿ02: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಶನಿವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡ ಎಂ.ಶ್ರೀಕಾಂತ್‌ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದರು.

-4ಎಸ್‌ಎಂಜಿಕೆಪಿ02: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಕಾಂಗ್ರೆಸ್‌ ಸೇರ್ಪಡೆಗೂ ಮುನ್ನ ಎಂ.ಶ್ರೀಕಾಂತ್‌ ಬೃಹತ್‌ ಮೆರವಣಿಗೆಯಲ್ಲಿ ಸಾಗಿದರು.