ಸಾರಾಂಶ
ಇತಿಹಾಸದಲ್ಲಿನ ನೈಜ ಘಟನೆಗಳನ್ನು ಸೃಜನಶೀಲನೆಯಿಂದ ತೋರಿಸುವಂತ ಕೃತಿಯನ್ನು ಬರೆದಿರುವ ಎಂ.ಮದನ್‌ಗೋಪಾಲ ಅವರು ಸಮಾಜಕ್ಕೆ ಒಬ್ಬ ಮಾದರಿ ಹಾಗೂ ಆದರ್ಶದ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ.
ರಾಯಚೂರು: ಇತಿಹಾಸದಲ್ಲಿನ ನೈಜ ಘಟನೆಗಳನ್ನು ಸೃಜನಶೀಲನೆಯಿಂದ ತೋರಿಸುವಂತ ಕೃತಿಯನ್ನು ಬರೆದಿರುವ ಎಂ.ಮದನ್‌ಗೋಪಾಲ ಅವರು ಸಮಾಜಕ್ಕೆ ಒಬ್ಬ ಮಾದರಿ ಹಾಗೂ ಆದರ್ಶದ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದು ಹಿರಿಯ ಪತ್ರಕರ್ತ ಶ್ರೀನಿವಾಸ ಶಿರನೂರಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಐಎಂಎ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಎಂ.ಮದನ್ ಗೋಪಾಲ ಬರೆದ ಮಾವೋನಿಂದ ಮಹರ್ಷಿವರೆಗೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯ ಪರಿಚಯಿಸಿ ಮಾತನಾಡಿದರು.ಎಂ.ಮದನಗೋಪಾಲ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಐಪಿಎಸ್ ಎಂಬುವುದನ್ನು ಭಾರತೀಯ ಸಾರ್ವಜನಿಕರ ಸೇವೆ ಎಂಬ ಭಾವನೆಯನ್ನು ಅಳವಡಿಸಿಕೊಂಡಿದ್ದರು ಎಂದು ಹೇಳಿದರು.
ಮಾವೋ ಎಂದರೆ ಹೋರಾಟ ರಕ್ತಪಾತ, ಕ್ರಾಂತಿಕಾರಿ ಹೋರಾಟಗಳೆಂದು ಜನರಿಗೆ ಭಾವನೆ ಮೂಡುತ್ತದೆ. ಮಹರ್ಷಿ ಎಂದರೆ ಆಧಾತ್ಮಿಕ, ಭಕ್ತ, ಧಾರ್ಮಿಕ ಎಂಬ ಭಾವನೆಯನ್ನು ಜನರು ಹೊಂದಿದ್ದಾರೆ. ಮದನ್ಗೋಪಾಲ ಅವರು 1975ರ ತುರ್ತು ಪರಿಸ್ಥಿತಿಯನ್ನು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಅಲ್ಲದೇ ಕಮ್ಯೂನಿಸಂ ಎಂಬುವುದು ಹಂತ ಹಂತವಾಗಿ ಭ್ರಮನಿರಸನ ಮಾಡಿದೆ ಎಂದು ತಿಳಿಸಿದರು.ಕೃತಿ ಲೋಕಾರ್ಪಣೆ ಮಾಡಿದ ಹಿರಿಯ ಹೋರಾಟಗಾರ ಬಂಡೂರಾವ್ ಚಾಗಿ ಹಾಗೂ ಕೃತಿ ರಚನೆಕಾರ ಎಂ.ಮದನಗೋಪಾಲ ಮಾತನಾಡಿದರು. ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಜಯಲಕ್ಷ್ಮೀ ಮಂಗಳಮೂರ್ತಿ, ರಾಮಣ್ಣ ಹವಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಘವೇಂದ್ರ ಕುಷ್ಟಗಿ, ತ್ರಿವಿಕ್ರಮ ಜೋಶಿ, ಎನ್.ಶಂಕರಪ್ಪ ವಕೀಲ ಡಿಎಚ್ಒ ಡಾ.ಸುರೇಂದ್ರಬಾಬು, ಅಯ್ಯಪ್ಪಯ್ಯ ಹುಡಾ, ಮಲ್ಲಿಕಾರ್ಜುನ ಶಿಖರಮಠ, ರುದ್ರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ಅರುಣಾ ಹಿರೇಮಠ ನಿರೂಪಿಸಿದರು.