ಸಮಾನತೆಗೆ ದುಡಿದಾಗ ಮಾತ್ರ ಉತ್ತಮ ಸಮಾಜ

| Published : Feb 11 2024, 01:50 AM IST

ಸಾರಾಂಶ

ಸಮಾನತೆಯ ಜ್ಞಾನಜ್ಯೋತಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಕಾಯಕ ನಿಷ್ಠೆ ಮತ್ತು ಅಕ್ಷರದ ಸತ್ಯವನ್ನು 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಜನ ಸಮುದಾಯಕ್ಕೆ ಸಂದೇಶ ಸಾರಿದ ಅಗ್ರಜ ಬಸವಣ್ಣ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ತಳ ಸಮುದಾಯುದ ಕಾಯಕ ಯೋಗಿಗಳನ್ನು ವಚನಗಳ ಮೂಲಕ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ,ಸಮಾಗಾರ ಹರಳಯ್ಯ ತೋರಿದ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಬೆಳೆಸಿಕೊಂಡಾಗ ಸಂವಿಧಾನದ ಅಶಯಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾಯಕ ಶರಣರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಮಾಜದಲ್ಲಿ ಸಮಾನತೆಗೆ ದುಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾನತೆಯ ಜ್ಞಾನಜ್ಯೋತಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಕಾಯಕ ನಿಷ್ಠೆ ಮತ್ತು ಅಕ್ಷರದ ಸತ್ಯವನ್ನು 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಜನ ಸಮುದಾಯಕ್ಕೆ ಸಂದೇಶ ಸಾರಿದ ಅಗ್ರಜ ಬಸವಣ್ಣ. ಹೀಗಾಗಿ, ಶರಣರ ಮಾತನ್ನ ಅರ್ಥೈಸಿಕೊಂಡು ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.

ಮುಖಂಡ ಪ್ರಕಾಶ ಗುಡಿಮನಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಜಾತಿ ತಾರತಾಮ್ಯ,ಲಿಂಗ ತಾರತಾಮ್ಯ ಭಕ್ತಿ ತಾರತಾಮ್ಯ ಹೋಗಲಾಡಿಸಲು, ಕಟ್ಟಕಡೆ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರಲು, ಮೌಲ್ಯವರ್ಧಿತ ಸಮಾಜ ಕಟ್ಟಲು ಶ್ರಮಿಸಿದರು. ಅಲ್ಲದೇ, ಅದಕ್ಕೆ ನೆರವಾದ ಶರಣರಲ್ಲಿ ಮಾದರ ಚೆನ್ನಯ್ಯ,ಡೋಹರ ಕಕ್ಕಯ್ಯ,ಸಮಾಗಾರ ಹರಳಯ್ಯ,ಕಲ್ಯಾಣಮ್ಮ ಉರಿಲಿಂಗ ಪೆದ್ದಿ, ಸತ್ಯಕ್ಕ ಇಂತಹ ಶರಣರು ತಮ್ಮ ಕಾಯಕ ನಿಷ್ಥೆಯಿಂದ ಬಸವಣ್ಣನವರ ಅನುಭವ ಮಂಟಪದಲ್ಲಿ ಮನುಕುಲದ ಉದ್ದಾರದ ತೊಡಗಿದ್ದವರು. ಇಂತಹವರ ವಚನಗಳ ಸಂದೇಶವನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಸಮಾಜ ಕಟ್ಟಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕಂದಾಯ ನಿರೀಕ್ಷಕ ಸುರೇಶ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಎಡಿ ಶಾಂತಗೌಡ ನ್ಯಾಮಣ್ಣವರ,ಪಪಂ ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಸಮುದಾಯದ ಮುಖಂಡರಾದ ಪ್ರಕಾಶ ಚೌಗಲೆ, ರಾಮಸ್ವಾಮಿ ಚೌಗಲೆ, ಶರಣಪ್ಪ ಚೌಗಲೆ,ಅನಿಲ್ ಚೌಗಲೆ, ಗಂಗಾರಾಮ ಚೌಗಲೆ, ಬಸವರಾಜ ಇಂಗಳಗಿ ಸೇರಿ ಪಟ್ಟಣದ ಪ್ರಮುಖರು ಹಾಗೂ ಕಚೇರಿಯ ಸಿಬ್ಬಂದಿ ಹಾಜರಿದ್ದರು.