ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಮಧಬಾವಿ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 2 ಬಣಗಳ ಪೈಕಿ ಒಂದು ಬಣಕ್ಕೆ ಗೆಲುವಾದರೆ, ಬಿಜೆಪಿ ಬೆಂಬಲಿತರು ಹೀನಾಯ ಸೋಲು ಅನುಭವಿಸಿದೆ. ಹಾಲಿ ಅಧ್ಯಕ್ಷ ಮುರಿಗೆಪ್ಪ ಮಗದುಮ್ ಪರಾಭವಗೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಮಾಜಿ ಡಿಸಿಎಂ, ಹಾಲಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ ನೇತೃತ್ವದ ರೈತ ಸಹಕಾರಿ ಗುಂಪಿನ 10 ಅಭ್ಯರ್ಥಿಗಳು ಗೆಲುವು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.ಕಾಂಗ್ರೆಸ್‌ನಲ್ಲೇ ಎರಡು ಬಣಗಳಾಗಿದ್ದವು. ಕಾಂಗ್ರೆಸ್ ಬೆಂಬಲಿತ ಎರಡು ಗುಂಪು ಹಾಗೂ ಬಿಜೆಪಿ ಬೆಂಬಲಿತ ಒಂದು ಗುಂಪು ಹೀಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ನೇತೃತ್ವದ ವಿನಾಯಕ ಬಾಗಡಿ ಸಾರಥ್ಯದ ರೈತ ಸಹಕಾರಿ ಗುಂಪಿನ ಅಭ್ಯರ್ಥಿಗಳು 10 ಅಭ್ಯರ್ಥಿಗಳು ಗೆಲುವು ಸಾದಿಸಿದ್ದಾರೆ. ಬಿಜೆಪಿಯ ಇಬ್ಬರು ಗೆಲುವು ಪಡೆದಿದ್ದಾರೆ.
ರೈತ ಸಹಕಾರಿ ಗುಂಪಿನಿಂದ ನಿಜಗುಣಿ ಮಗದುಮ್, ಅರ್ಜುನ ಇಬ್ರಾಹಿಂಪುರ, ಅಶೋಕ ಪುಜಾರಿ, ಭೀಮು ಚೌಗುಲಾ, ಪ್ರಮೀಳಾ ಮೆಂಡಿಗೇರಿ, ಭಾಗ್ಯಶ್ರೀ ಸೂರ್ಯವಂಶಿ, ಮಲ್ಲಪ್ಪ ದೇವಕತೆ, ಮನೋಹರ ಪೂಜಾರಿ ವಿಠ್ಠಲ ಅವಳೆ, ಸಿದ್ರಾಯ ಪತಂಗೆ ಕಾಂಗ್ರೆಸ್ ಬೆಂಬದಿಂದ ಗೆಲುವು ಸಾಧಿಸಿದರೆ, ಬಿಜೆಪಿ ಬೆಂಬಲದಿಂದ ಅಮಸಿದ್ದ ರೋಗಿ, ಹಾಗೂ ರಾವಸಾಬ ಮಗದುಮ್ ಗೆಲುವು ಸಾಧಿಸಿ ಎರಡೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.ಈ ವೇಳೆ ಮಾತನಾಡಿದ ವಿನಾಯಕ ಬಾಗಡಿ, ಹಣ ಬಲದ ಮುಂದೆ ಜನ ಬಲದ ಗೆಲುವು ಸಾಧಿಸಿದೆ. ಕಳೆದ ಹಲವು ವರ್ಷಗಳಿಂದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಜೋಡೆತ್ತುಗಳಾಗಿ ಮಾಡಿದ ಅಭಿವೃದ್ಧಿ ಕಾರ್ಯದ ಫಲವೇ ಈ ಗೆಲುವಿಗೆ ಕಾರಣ ಎಂದರು.
ತಾಪಂ ಮಾಜಿ ಅಧ್ಯಕ್ಷ ನಿಜಗುಣಿ ಮಗದುಮ್ ಮಾತನಾಡಿ, ಇದು 7 ಗ್ರಾಮಗಳ ರೈತ ಬಾಂಧವರ ಗೆಲುವು. ಈ ಗೆಲುವಿನ ಹಿಂದೆ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ, ವಿನಾಯಕ ಬಾಗಡಿ ಹಾಗೂ ಮತದಾರರ ಪರಿಶ್ರಮ ಇದೆ ಎಂದರು. ಚುನಾವಣಾ ಅಧಿಕಾರಿಗಳಾಗಿ ರಾಘವೇಂದ್ರ ನೂಲಿ ಕಾರ್ಯನಿರ್ವಹಿಸಿದರು.ಈ ವೇಳೆ ರೈತ ಮುಖಂಡ ಸಂಜಯ ಅದಾಟೆ, ಕಾಮಗೌಡ ಪಾಟೀಲ, ಪ್ರಕಾಶ ಕುಟ್ಟೆ, ರಾಮಣ್ಣ ಮಗದುಮ್, ಶಿವಾನಂದ ಮಗದುಮ್, ಉದಯ ಪವಾರ, ಅಪ್ಪಾಸಾಬ ಚೌಗುಲೆ, ಪರಗೌಡ ಮುಧೋಳ, ರಾವಸಾಬ ಕಾಳೇಲಿ, ಸುನೀಲ ಮಾನೆ, ಸಾತಪ್ಪ ನಿವಲಗಿ, ಸೋಮಲಿಂಗ ಮಗದುಮ್, ಬಾಹುಸಾಬ ಚವಾನ್, ಪ್ರವೀಣ ನಾಯಿಕ, ಅಸ್ಲಂ ಮುಲ್ಲಾ, ಸಿದರಾಯ ತೋಡಕರ, ದಿಲೀಪ ಪುಜಾರಿ, ಸಂಜಯ ಕಾಂಬಳೆ, ಸುರೇಶ ಖುಟ್ಟೆ, ಪ್ರಭುಗೌಡ ಪಾಟೀಲ, ಸತ್ಯಪ್ಪ ಕೆಂಪವಾಡೆ, ಸುರೇಶ ಪುಜಾರಿ, ಮನೋಹರ ಪುಜಾರಿ, ಬಾಹುಬಲಿ ಉಮದಿ, ಭರತೇಶ ಚಿಪ್ಪರಗಿ, ಗಿರಮಲ್ಲ ಇಬ್ರಾಹಿಂಪುರ, ಪ್ರವೀಣ ಭಂಡಾರೆ, ಹಣಮಂತ ತಿಗಣಿ, ಶ್ರೀಶೈಲ ಮಾಳಿ, ಹಣಮಂತ ಬಜಂತ್ರಿ, ಪರಸು ರಾಜಮಾನೆ, ಸಂದೀಪ ಕಾಂಬಳೆ, ಬಳಿರಾಮ ಕೊಡತೆ, ರಂಜೀತ ಪುಜಾರಿ, ಮಹಾಂತೇಶ ಹೊನಕಾಂಡೆ, ರಮೇಶ ಕಾಂಬಳೆ, ಹಣಮಂತ ಕಾಂಬಳೆ, ಮಾರುತಿ ಗಾಡಿವಡ್ಡರ, ಅಶೋಕ ಬಾಡಗಿ, ಮೋಹನ ಬಾಗಡಿ, ಸುಕದೇವ ಬಾಗಡಿ, ಅವಿನಾಶ ಬಾಗಡಿ, ಖಂಡು ಬಾಗಡಿ, ಬಂಡು ಜಾಧವ, ಸೇರಿದಂತೆ ಅನೇಕರು ಇದ್ದರು.