ಕುರುಬೂರು ಕ್ರೀಡಾಪಟುಗಳು ಮೇಲುಗೈ

| Published : Oct 20 2025, 01:02 AM IST

ಸಾರಾಂಶ

ಬಾಲಕರ ವಿಭಾಗದಲ್ಲಿ ಮಹಾಜನ ಪಿಯು ಕಾಲೇಜಿನ ಕೆ.ಯು. ಓಂಕಾರ್‌ ಪ್ರಥಮ, ವಿದ್ಯಾಜ್ಯೋತಿ ಕಾಲೇಜಿನ ವರು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಅಥ್ಲೆಟಿಕ್ಸ್‌ ಕ್ಲಬ್‌ ಆಯೋಜಿಸಿದ್ದ ಕೆ.ಬಿ. ಗಣಪತಿ ಸ್ಮರಣಾರ್ಥ ರಸ್ತೆ ಓಟದ ಸ್ಪರ್ಧೆಯ ಪಿಯುಸಿ ವಿಭಾಗದಲ್ಲಿ ಕುರುಬೂರಿನ ಕ್ರೀಡಾಪಟುಗಳು ಮೇಲುಗೈ ಸಾಧಿಸಿದ್ದಾರೆ.

ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಆರಂಭವಾದ 2 ಕಿ.ಮೀ. ಓಟ ಬಾಲಕಿಯರ ವಿಭಾಗದಲ್ಲಿ ಕುರುಬೂರಿನ ಎನ್‌. ಮಾನಸ, ಎಸ್‌. ಅಂಕಿತಾ, ದೀಪಶ್ರೀ, ಎಂ. ಅನನ್ಯಾ ಮತ್ತು ಮಾನಸ ಅವರು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಮೈಸೂರಿನ ಎನ್‌. ವೈಷ್ಣವಿ ಆರನೇ ಸ್ಥಾನಪಡೆದರು.

ಬಾಲಕರ ವಿಭಾಗದಲ್ಲಿ ಮಹಾಜನ ಪಿಯು ಕಾಲೇಜಿನ ಕೆ.ಯು. ಓಂಕಾರ್‌ ಪ್ರಥಮ, ವಿದ್ಯಾಜ್ಯೋತಿ ಕಾಲೇಜಿನ ವರುಣ್‌ದ್ವಿತೀಯ, ವಿವೇಕಾನಂದ ಪಿಯು ಕಾಲೇಜಿನ ಎಂ. ದಿಲೀಪ್‌ತೃತೀಯ, ಆರ್‌. ಸೃಜನ್‌ನಾಲ್ಕು, ಪಿ. ಯಶ್ವಂತ್‌ಐದು ಮತ್ತು ವಿಜಯವಿಠಲ ಕಾಲೇಜಿನ ಆರ್‌. ಕೌಶಿಕ್‌ಆರನೇ ಸ್ಥಾನ ಪಡೆದಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ 1500 ಮೀ. ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ವಿಜಯವಿಠಲ ವಿದ್ಯಾಶಾಲೆಯ ಲಸಿತ್‌ಕಿಶೋರ್‌ಪ್ರಥಮ, ರೋಟರಿ ವೆಸ್ಟ್‌ ನ ಎಸ್‌. ಶ್ರೇಯಸ್‌ದ್ವಿತೀಯ, ವಿವಿಎಸ್‌ನ ಎಚ್‌.ವಿ. ಚಿರಾಗ್‌ತೃತೀಯ, ಕೆ.ಎನ್‌.ಸಿ.ಐಜಿ.ಎಸ್‌ನ ಚಿರಂತ್‌ಜಿ. ಗೌಡ ನಾಲ್ಕು, ಕ್ಯಾಪಿಟಲ್‌ಪಬ್ಲಿಕ್‌ಶಾಲೆಯ ವಿ. ಸುದರ್ಶನ್‌ಜೈನ್‌ಐದು ಮತ್ತು ಕೆ.ಪಿ. ಕಾನ್ವೆಂಟ್‌ನ ಎಂ. ಮೇಘನಾಥ್‌ಗೌಡ ಆರನೇ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಕುರುಬೂರು ಕ್ಲಬ್‌ನ ಇಂಚರಾ ಪ್ರಥಮ, ಮಮತಾ ದ್ವಿತೀಯ, ಚಾಮುಂಡೇಶ್ವರಿ ಸ್ಪೋರ್ಟ್ಸ್‌ಕ್ಲಬ್‌ನ ಎಸ್‌. ಜಯಶ್ರೀ ತೃತೀಯ, ಸೆಂಟ್‌ಜೋಸೆಫ್‌ಶಾಲೆಯ ಎಚ್‌. ಸಹ ನಾಲ್ಕು, ಶ್ರೀ ಚಾಮುಂಡೇಶ್ವರಿ ಸ್ಪೋರ್ಟ್ಸ್‌ಕ್ಲಬ್‌ನ ದಿವ್ಯಶ್ರೀ ಐದು ಮತ್ತು ಡಿಎವಿ ಪಬ್ಲಿಕ್‌ಶಾಲೆಯ ವರ್ಷಾ ಆರನೇ ಸ್ಥಾನ ಪಡೆದರು.

ಹಿರಿಯ ಪ್ರಾಥಮಿಕ ಶಾಲೆ ವಿಭಾಗದ 800 ಮೀ. ಓಟದ ಬಾಲಕರ ವಿಭಾಗದಲ್ಲಿ ನ್ಯೂ ಆಕ್ಸಫರ್ಡ್‌ಪಬ್ಲಿಕ್‌ಶಾಲೆಯ ಎನ್‌. ಸುಭಾಷ್‌ಗೌಡ ಪ್ರಥಮ, ಬೇಡನ್‌ಪೋವಲ್‌ಶಾಲೆಯ ಎಂ.ಎಸ್‌. ವಿಶಾಲ್‌ದ್ವಿತೀಯ, ಭಾರತೀಯ ವಿದ್ಯಾಭವನದ ಎನ್‌. ತನ್ಮಯ್‌ತೃತೀಯ, ಡಿಎವಿ ಶಾಲೆಯ ಜನ್ವಿಕ್‌ನಾಲ್ಕು, ಬಿವಿಬಿನ ಕೆ.ಎಸ್‌. ಅನುಷ್‌ಐದು ಮತ್ತು ಎಸ್‌.ಎಂ. ಆಯುಷ್‌ಆರನೇ ಸ್ಥಾನಪಡೆದರು.

ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಆರ್‌. ನಿಹಾ ಪ್ರಥಮ, ಕುರುಬೂರಿನ ವಿದ್ಯಾದರ್ಶಿನಿ ಶಾಲೆಯ ಕೆ.ಎಂ. ಪ್ರಗತಿ ದ್ವಿತೀಯ, ಎಂ. ಮೇಘನಾ ತೃತೀಯ, ಎಸ್‌. ಪ್ರಕೃತಿ ನಾಲ್ಕು, ಬಿಂದು ಐದು ಮತ್ತು ಬಿವಿಬಿ ಶಾಲೆಯ ಎಂ.ಕೆ. ಗೌರಿ ಆರನೇ ಸ್ಥಾನಕ್ಕೆ ತೃಪ್ತರಾದರು.

ಪ್ರಾಥಮಿಕ ಶಾಲೆಯ 400 ಮೀ. ಓಟದ ಬಾಲಕರ ವಿಭಾಗದಲ್ಲಿ ಬಿವಿಬಿ ಶಾಲೆಯ ಎನ್‌. ಪವನ್‌ಪ್ರಥಮ, ಸೆಂಟ್‌ಜೋಸೆಫ್‌ಶಾಲೆಯ ಯು ರಿಶಾನ್‌ದ್ವಿತೀಯ, ಡಿಪಿಐಆರ್‌ಎಸ್‌ನ ಆರ್ಯನ್‌ಕವನ್‌ತೃತೀಯ, ಬಿವಿಬಿಯ ಎಸ್‌. ಕಷಿಸ್‌ ನಾಲ್ಕು, ಎಂಡಬ್ಲ್ಯೂಎಲ್‌ಎಸ್‌ನ ಎಸ್‌. ಸೂರ್ಯ ಐದು ಸಯೂಗ್‌ ಕುಟ್ಟಪ್ಪ ಮತ್ತು ಗಾನ್ವಿತ್‌ ಜಿ. ಗೌಡ ಹಂಚಿಕೊಂಡರು.

ಬಾಲಕಿಯರ ವಿಭಾಗದಲ್ಲಿ ಬಿವಿಬಿ ಶಾಲೆಯ ಇ. ಉತ್ತರಾ ಪ್ರಥಮ, ಜ್ಞಾನಗಂಗಾ ಶಾಲೆಯ ವೃದ್ಧಿ ಪೊನ್ನಮ್ಮ ದ್ವಿತೀಯ, ಕುರುಬೂರಿನ ಸಿ. ಸಿಂಚನಾ ತೃತೀಯ, ಸಿಂಚನಾ ನಾಲ್ಕು, ಸಾನ್ವಿ ಐದು ಮತ್ತು ಕ್ರೈಸ್ಟ್‌ಪಬ್ಲಿಕ್‌ ಶಾಲೆಯ ಲಾಲಿತ್ಯ ಆರನೇ ಸ್ಥಾನಪಡೆದರು.