ಜಾತಿ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಿದ ವ್ಯಕ್ತಿ ಮಡಿವಾಳ ಮಾಚಿದೇವ

| Published : Feb 13 2024, 12:48 AM IST

ಜಾತಿ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಿದ ವ್ಯಕ್ತಿ ಮಡಿವಾಳ ಮಾಚಿದೇವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಮಡಿವಾಳ ಸಮುದಾಯದ ವತಿಯಿಂದ ಶನಿವಾರ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು

ಕನ್ನಡಪ್ರಭ ವಾರ್ತೆ ಯಳಂದೂರು

12ನೇ ಶತಮಾನದ ಅವತಾರ ಪುರುಷ ಮಡಿವಾಳ ಮಾಚಿದೇವ ಜನರ ಮನಸ್ಸಿನಲ್ಲಿದ್ದ ಜಾತಿ ಎಂಬ ಕೊಳೆಯನ್ನು ತೆಗೆಯುವ ಮೂಲಕ ಜಾತಿ ವ್ಯವಸ್ಥೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದ ಮಹಾನ್‌ ವ್ಯಕ್ತಿಯಾಗಿದ್ದರು ಎಂದು ಗೂಳಿಪುರ ಗ್ರಾಪಂ ಸದಸ್ಯ ಬೂದಂಬಳ್ಳಿ ಗಿರೀಶ್ ಹೇಳಿದರು. ತಾಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಮಡಿವಾಳ ಸಮುದಾಯದ ವತಿಯಿಂದ ಶನಿವಾರ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯಲ್ಲಿ ಮಾತನಾಡಿದರು.ಮಡಿವಾಳ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕು. ಈ ಸಮುದಾಯದವರು ಈಗಾಗಲೇ ಉನ್ನತ ಹುದ್ದೆಗಳಲಿದ್ದು, ಇನ್ನೂ ಹೆಚ್ಚಿನ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದರು. ಇದಕ್ಕೂ ಮುನ್ನ ಬೆಳಗ್ಗೆ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಗ್ರಾಮದ ಎಲ್ಲಾ ಜನಾಂಗದವರು ಸೇರಿ ಊರಿನ ಹೊರ ವಲಯದಲ್ಲಿರುವ ಅರಳಿಮರಕ್ಕೆ ಪೂಜೆ ಸಲ್ಲಿಸಿ ವೀರಗಾಸೆ ತಂಡದೊಂದಿಗೆ ಅರಳಿ ಮರದಿಂದ ಮೆರವಣಿಗೆ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಯಿತು. ವೀರಗಾಸೆ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಗೌಡ್ರು ಮಹದೇವಪ್ಪ, ಯಜಮಾನರಾದ ಬಿ. ಕೆ. ರಾಜಣ್ಣ, ನಂದೀಶ್, ಬಿ.ಡಿ. ನಾಗರಾಜು, ವಿ. ನಾಗರಾಜು, ಚಿಕ್ಕ ಯಜಮಾನರಾದ ನಾಗಶೆಟ್ಟಿ, ಮಡಿವಾಳ ಮಾಚಿದೇವರ ಸಂಘದ ಸದಸ್ಯರಾದ ಮಧು, ಬಸವಣ್ಣ, ಎನ್. ಮಹೇಶ್, ರವಿ, ಗಿರೀಶ್, ಪ್ರಸಾದ್, ಬಿ. ಮಹೇಶ್, ಚೆನ್ನಂಜಶೆಟ್ಟಿ, ಬಸವಶೆಟ್ಟಿ, ಎನ್. ಮಹೇಶ್, ರಂಗಶೆಟ್ಟಿ, ಮಹದೇವಶೆಟ್ಟಿ, ಲೋಕೇಶ್, ಮಹದೇವಶೆಟ್ಟಿ, ಬೆಂಗಳೂರು ಲಿಂಗರಾಜು, ನಾಗಶೆಟ್ಟಿ, ಶಿವಕುಮಾರಶೆಟ್ಟಿ ಹಾಗೂ ಗ್ರಾಮಸ್ಥರು ಹಾಜರಿದ್ದರು.1