ವಚನ ಸಂಪತ್ತು ಕಾಪಾಡಿದ ಮಡಿವಾಳ ಮಾಚಿದೇವರು: ಶಾಸಕಿ ಲತಾ

| Published : Feb 02 2024, 01:01 AM IST

ವಚನ ಸಂಪತ್ತು ಕಾಪಾಡಿದ ಮಡಿವಾಳ ಮಾಚಿದೇವರು: ಶಾಸಕಿ ಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಸಮ ಸಮಾಜ ನಿರ್ಮಾಣದ ಗುರಿ ಬಸವಣ್ಣನವರದ್ದಾಗಿತ್ತು. ಅಂಥವರ ಅನುಭವ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡವರು ಮಡಿವಾಳ ಮಾಚಿದೇವರು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.

ಹರಪನಹಳ್ಳಿ: ವಚನ ಸಂಪತ್ತನ್ನು ಕಾಪಾಡಿದ ಮಹಾನ್‌ ಶರಣರು ಮಡಿವಾಳ ಮಾಚಿದೇವರು ಎಂದು ಶಾಸಕಿ ಎಂ.ಪಿ. ಲತಾಮಲ್ಲಿಕಾರ್ಜುನ ಹೇಳಿದ್ದಾರೆ.

ಅವರು ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಅವರು ಅಂದು ವಚನ ಸಾಹಿತ್ಯವನ್ನು ಕಾಪಾಡದಿದ್ದರೆ ಇಂದು ನಮಗೆ ಶರಣರ ವಚನಗಳು ಸಿಗುತ್ತಿರಲಿಲ್ಲ ಎಂದರು.

ಸಮ ಸಮಾಜ ನಿರ್ಮಾಣದ ಗುರಿ ಬಸವಣ್ಣನವರದ್ದಾಗಿತ್ತು. ಅಂಥವರ ಅನುಭವ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡವರು ಮಡಿವಾಳ ಮಾಚಿದೇವರು ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಹರಾಳು ಅಶೋಕ ಮಾತನಾಡಿ, ಮಡಿವಾಳ ಮಾಚಿದೇವರು ತಾವು ಉತ್ತಮವಾದ ವಚನಗಳನ್ನು ನೀಡಿ, ಇತರರ ವಚನಗಳನ್ನು ಸಂರಕ್ಷಣೆ ಮಾಡಿದರು ಎಂದರು.

ಅತ್ಯಂತ ಹಿಂದುಳಿದ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದ್ದು, ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಮಡಿವಾಳ ಸಮಾಜದ ಗಣ್ಯರನ್ನು ಗೌರವಿಸಲಾಯಿತು.ಶಿಕ್ಷಕ ಯಡಿಹಳ್ಳಿ ಎಂ. ಅಜ್ಜಯ್ಯ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸದಸ್ಯ ಲಾಟಿದಾದಾಪೀರ, ಉದಯಶಂಕರ, ಚಿಕ್ಕೇರಿಬಸಪ್ಪ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ನಿಟ್ಟೂರು ಬಸಣ್ಣ, ಹಿರೇಮೇಗಳಗೇರಿ ಚಂದ್ರಪ್ಪ ಇತರರು ಇದ್ದರು.