14ರಂದು ಬೈಂದೂರಿನಿಂದ ಉಡುಪಿಗೆ ಮಹಾ ನಾಯಕ ಜೈ ಭೀಮ್ ರ್‍ಯಾಲಿ

| Published : Apr 13 2024, 01:08 AM IST

14ರಂದು ಬೈಂದೂರಿನಿಂದ ಉಡುಪಿಗೆ ಮಹಾ ನಾಯಕ ಜೈ ಭೀಮ್ ರ್‍ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂದು ಬೆಳಗ್ಗೆ 9 ಗಂಟೆಗೆ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಎದುರು ರ್‍ಯಾಲಿಯನ್ನು ಸಹಕಾರಿ ಯೂನಿಯನ್‌ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಂಜೆ 6.30 ಗಂಟೆಗೆ ಉಡುಪಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ಸಮಾರೋಪ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಅಂಗವಾಗಿ ಏ.14ರಂದು ಬೈಂದೂರಿನಲ್ಲಿ ಮಹಾ ನಾಯಕ ಜೈ ಭೀಮ್ ರ್‍ಯಾಲಿಗೆ ಚಾಲನೆ ನೀಡಲಾಗುತ್ತದೆ. ಉಡುಪಿಯಲ್ಲಿ ರ್‍ಯಾಲಿಯ ಸಮಾರೋಪ ನಡೆಯಲಿದೆ ಎಂದು ದ.ಸಂ.ಸ. ಉಡುಪಿಯ ನಾಯಕ ಟಿ.ಮಂಜುನಾಥ್ ಗಿಳಿಯಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 9 ಗಂಟೆಗೆ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಎದುರು ರ್‍ಯಾಲಿಯನ್ನು ಸಹಕಾರಿ ಯೂನಿಯನ್‌ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ನಂತರ ರ್‍ಯಾಲಿಯು 11 ಗಂಟೆಗೆ ಕುಂದಾಪುರದ ಶಾಸ್ತ್ರಿ ವೃತ್ತ, 12 ಗಂಟೆಗೆ ಬ್ರಹ್ಮಾವರದ ಅಂಬೇಡ್ಕರ್ ವೃತ್ತ, 1.30ಕ್ಕೆ ಹೆಬ್ರಿ ಬಸ್ ನಿಲ್ದಾಣ, 3 ಗಂಟೆಗೆ ಕಾರ್ಕಳದ ಬಸ್ ನಿಲ್ದಾಣ, 5 ಗಂಟೆಗೆ ಕಾಪುವಿನ ಬಸ್ ನಿಲ್ದಾಣದಲ್ಲಿ ಸಮಾವೇಶ ನಡೆಸಿ, ಅಂದು ಸಂಜೆ 6.30 ಗಂಟೆಗೆ ಉಡುಪಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ಸಮಾರೋಪ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಿಂತಕ ಪ್ರೊ.ಫಣಿರಾಜ್, ಸಿಐಟಿಯುನ ಬಾಲಕೃಷ್ಣ ಶೆಟ್ಟಿ, ದ.ಸಂ.ಸ. ಉಡುಪಿಯ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಪ್ರಮುಖರಾದ ಮಂಜುನಾಥ್ ಬಾಳ್ಕುದ್ರು, ಶ್ಯಾಮ್ ಸುಂದರ್ ತೆಕ್ಕಟ್ಟೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಪಾಧ್ಯಕ್ಷ ಸಲ್ಲಾವುದ್ದೀನ್ ಉಪಸ್ಥಿತರಿದ್ದರು.