ತರೀಕೆರೆರಾಜ್ಯ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಅಸ್ಥಿತ್ವಕ್ಕೆ ಬಂದಿದೆ ಎಂದು ಮಹಾ ಸಭಾದ ರಾಜ್ಯ ಸಂಘಟಕ ಬಿ.ಕೆ. ಶಿವಪ್ಪ ಹೇಳಿದರು.

ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ

ಕನ್ನಡಪ್ರಭ ವಾರ್ತೆ ತರೀಕೆರೆ

ರಾಜ್ಯ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಅಸ್ಥಿತ್ವಕ್ಕೆ ಬಂದಿದೆ ಎಂದು ಮಹಾ ಸಭಾದ ರಾಜ್ಯ ಸಂಘಟಕ ಬಿ.ಕೆ. ಶಿವಪ್ಪ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ಮಹಾ ಸಭಾ ಮತ್ತು ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ತಾಲೂಕು ಘಟಕಗಳ ಆಶ್ರಯದಲ್ಲಿ ನಡೆದ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟಿಸಿ ಮಾತನಾಡಿ ನಮ್ಮ ಸಮಾಜದ ಮಕ್ಕಳು ಮುಖ್ಯವಾಹಿನಿಗೆ ಬರಲು ಉತ್ತಮ ಶಿಕ್ಷಣ ಪಡೆಯಬೇಕು. ಡಾ. ಬಿ.ಆರ್. ಅಂಬೇಡ್ಕರ್ 32 ಪದವಿ ಪಡೆದಿದ್ದರು. ನಮ್ಮ ಮಕ್ಕಳು ಕನಿಷ್ಠ ಎರಡು ಪದವಿಯಾದರೂ ಪಡೆದು ಮಾದಿಗ ಜಾತಿಯೆಂದು ಎದೆ ತಟ್ಟಿ ಹೇಳಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇತ್ತೀಚಿಗೆ ಬಂದಿರುವ ಎಐ (ಆರ್ಟಿಫಿಸಿಯಲ್ ಇಂಟಲಿಜನ್ಸ್) ತಂತ್ರಜ್ಞಾನ ಮಕ್ಕಳು ಸರಿ ಯಾದ ರೀತಿ ಬಳಸಿ ತಂದೆ-ತಾಯಿ ಮತ್ತು ನಮ್ಮ ಮಾದಿಗ ಸಮಾಜಕ್ಕೆ ಗೌರವಿಸುವಂತೆ ಸಾಧನೆ ಮಾಡಬೇಕು. ಪ್ರಯತ್ನಸಿದರೆ ಯಾವುದೂ ಅಸಾಧ್ಯ ವಲ್ಲ. ನೀವೆ ನಮ್ಮ ಸಮಾಜದ ಆಸ್ತಿ, ನಿಮ್ಮಲ್ಲೆರ ರಕ್ಷಣೆಗೆ ನಮ್ಮ ಮಹಾಸಭಾ ಇದೆ ಎಂದರು.

ಪಾಂಡಿಚೇರಿ ವಿವಿ ಅನ್ವಯಿಕ ವಿಭಾಗದ ಪ್ರೊ. ಬಿ. ರಂಗಯ್ಯ ಮಾತನಾಡಿ ನಮ್ಮ ಮಕ್ಕಳು ಮೊದಲು ನಮ್ಮನ್ನು ಗೌರವಿ ಸಬೇಕು. ನಮ್ಮಲ್ಲಿರುವ ಹಿಂಜರಿಕೆ ಬಿಟ್ಟು. ಶ್ರದ್ಧೆ-ಭಕ್ತಿಯಿಂದ ಕಠಿಣ ಪರಿಶ್ರಮದಿಂದ ವಿದ್ಯೆ ಕಲಿತು ಭವಿಷ್ಯದಲ್ಲಿ ನವಸಮಾಜ ನಿರ್ಮಿಸಬೇಕು ಎಂದರು.

ಬೆಂಗಳೂರು ವಾಣಿಜ್ಯ ತೆರಿಗೆಗಳ ಇಲಾಖೆಗಳ ಸಹಾಯಕ ಆಯುಕ್ತ ಜೆ.ಪಿ. ಓಬಣ್ಣ ಮಾತನಾಡಿ ವಿದ್ಯಾರ್ಥಿ ಗಳು ವೈಜ್ಞಾನಿಕ ಚಿಂತನೆಗಳಿಂದ ತಮ್ಮ ಜೀವನ ರೂಪಿಸಬೇಕು. ದೇವಸ್ಥಾನಕ್ಕಿಂತ ಶಾಲೆ ಗಳನ್ನು ಕಟ್ಟಲು ಕೈಜೋಡಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ಕೈಗಾರಿಕೋದ್ಯಮಿ ಕೆ.ಎಸ್. ನಾಗವೇಣಿ ಓಬಣ್ಣ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಮಹಿಳೆಯರಿಗೆ ಹಕ್ಕು ನೀಡದಿದ್ದರೆ ಅಡಿಗೆ ಮನೆಗೆ ಸೀಮಿತ ವಾಗಿರಬೇಕಿತ್ತು. ಅವರಿಂದ ಮಹಿಳೆಯರು ಶಿಕ್ಷಣ ಪಡೆದು ಪ್ರತಿ ಕ್ಷೇತ್ರದಲ್ಲೂ ಪುರುಷರಿ ಗಿಂತ ಹೆಚ್ಚು ಸಾಧನೆ ಮಾಡಿದ್ದಾರೆ. ನಮ್ಮ ಸಮಾಜದ ಪ್ರತಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಅದರ ಶಕ್ತಿ ಎಷ್ಟು ಎಂದು ನಿಮಗೆ ಗೊತ್ತಾಗುತ್ತದೆ. ಕರ್ನಾಟಕ ಮಾದರ ಮಹಾಸಭಾಕ್ಕೆ ಮಹಾ ಸಭಾಕ್ಕೆ ಒಂದು ಲಕ್ಷ ರೂ. ಚೆಕ್ಕನ್ನು ರಾಜ್ಯ ಸಂಘಟಕ ಬಿ.ಕೆ. ಶಿವಪ್ಪ ಇವರಿಗೆ ನೀಡಿ ಪೋಷಕ ಸದಸ್ಯತ್ವ ಪಡೆದರು.

ತರೀಕೆರೆ- ಅಜ್ಜಂಪುರ ತಾಲೂಕಿನ ಮಾದಿಗ ಸಮಾಜದ ಎಸ್.ಎಸ್.ಎಲ್.ಸಿ., ಪಿಯುಸಿ, ವಿವಿಧ ಪದವಿಗಳಲ್ಲಿ ಉನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿ ಹಾಗೂ ಹಿರಿಯ ಪೌರಕಾರ್ಮಿಕರು, ಚಮ್ಮಾರಿಕೆ ಮಾಡುವವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ಶಂಕರಘಟ್ಟದ ಕುವೆಂಪು ವಿವಿ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಹೊನ್ನಾಳಿ ವಕೀಲ ಮೋಹನ್ ಕುಮಾರ್, ಜಿಲ್ಲಾಧ್ಯಕ್ಷ ವೈ.ಟಿ. ಗೋವಿಂದಪ್ಪ, ತಾಲೂಕು ಅಧ್ಯಕ್ಷ ಅಣ್ಣಯ್ಯ, ಅಂಚೆ ಇಲಾಖೆ ಶಿವಣ್ಣ, ಪತ್ರಕರ್ತ ಜಿ.ಟಿ. ರಮೇಶ್,. ಶಿಕ್ಷಕ ಎಚ್.ಕೆ. ಶೇಖರಪ್ಪ ಸಮಾಜದ ಹಲವಾರು ಮುಖಂಡರು ಭಾಗವಹಿಸಿದ್ದರು.

--

3ಕೆಟಿಆರ್.ಕೆ.8ಃ

ತರೀಕೆರೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ಮಹಾ ಸಭಾ ಮತ್ತು ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ತಾಲೂಕು ಘಟಕಗಳ ಆಶ್ರಯದಲ್ಲಿ ನಡೆದ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಹಾ ಸಭಾದ ರಾಜ್ಯ ಸಂಘಟಕ ಬಿ.ಕೆ. ಶಿವಪ್ಪ ಉದ್ಘಾಸಿದರು.