ದೇಶದ ಇತಿಹಾಸ-ಚಾರಿತ್ರ್ಯ ಸಾರುವ ಮಹಾಭಾರತ: ಜಗದೀಶ ಶರ್ಮಾ ಸಂಪ

| Published : Jul 06 2025, 11:48 PM IST

ದೇಶದ ಇತಿಹಾಸ-ಚಾರಿತ್ರ್ಯ ಸಾರುವ ಮಹಾಭಾರತ: ಜಗದೀಶ ಶರ್ಮಾ ಸಂಪ
Share this Article
  • FB
  • TW
  • Linkdin
  • Email

ಸಾರಾಂಶ

ವೇದವ್ಯಾಸರು 18 ಪುರಾಣ, ಮಹಾಭಾರತ ಬ್ರಹ್ಮಸೂತ್ರಗಳನ್ನು ರಚಿಸಿದರು. ಆದರೆ ಎಲ್ಲಿಯೂ ತಮ್ಮ ಬಗ್ಗೆ ಹೇಳಿಕೊಂಡಿಲ್ಲ, ವೇದಗಳನ್ನು 4 ಭಾಗಗಳಾಗಿ ವಿಭಾಗಿಸಿ ವೇದವ್ಯಾಸ ಎನ್ನಿಸಿಕೊಂಡರು ಅವರು ರಚಿಸಿದ ಮಹಾಭಾರತ 1 ಲಕ್ಷ ಶ್ಲೋಕಗಳಿಂದ ಕೂಡಿದ್ದು ದೇಶದ ಇತಿಹಾಸ, ಚರಿತ್ರೆ ಸಾರುತ್ತದೆ ಎಂದು ಬೆಂಗಳೂರಿನ ಉಪನ್ಯಾಸಕ ಜಗದೀಶ ಶರ್ಮಾ ಸಂಪ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ವೇದವ್ಯಾಸರು 18 ಪುರಾಣ, ಮಹಾಭಾರತ ಬ್ರಹ್ಮಸೂತ್ರಗಳನ್ನು ರಚಿಸಿದರು. ಆದರೆ ಎಲ್ಲಿಯೂ ತಮ್ಮ ಬಗ್ಗೆ ಹೇಳಿಕೊಂಡಿಲ್ಲ, ವೇದಗಳನ್ನು 4 ಭಾಗಗಳಾಗಿ ವಿಭಾಗಿಸಿ ವೇದವ್ಯಾಸ ಎನ್ನಿಸಿಕೊಂಡರು ಅವರು ರಚಿಸಿದ ಮಹಾಭಾರತ 1 ಲಕ್ಷ ಶ್ಲೋಕಗಳಿಂದ ಕೂಡಿದ್ದು ದೇಶದ ಇತಿಹಾಸ, ಚರಿತ್ರೆ ಸಾರುತ್ತದೆ ಎಂದು ಬೆಂಗಳೂರಿನ ಉಪನ್ಯಾಸಕ ಜಗದೀಶ ಶರ್ಮಾ ಸಂಪ ಹೇಳಿದರು.

ತಾಲೂಕಿನ ಕಲಹಳ್ಳಿಯ ಸುಮ್ಮನೆಯಲ್ಲಿ ಭಾನುವಾರ ನಡೆದ ಸಾಹಿತಿ, ತತ್ವಜ್ಞಾನ ಸತ್ಯಕಾಮರ ಜನ್ಮಾರಾಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ, ಚಾರಿತ್ರ್ಯ, ಇತಿವೃತ್ತ ಎಂದು 3 ಶಬ್ಧಗಳಲ್ಲಿ ವರ್ಣಿಸಬಹುದು. ಭಾರತಕ್ಕೆ ಚರಿತ್ರೆ, ಇತಿಹಾಸವಿದೆ. ಚಲನೆ ದಾಖಲಿಸಿದರೆ ಇತಿಹಾಸ, ಚಾರಿತ್ರ್ಯ ದಾಖಲಿಸಿದರೆ ಚರಿತ್ರೆ. ಆದ್ದರಿಂದ ವೇದವ್ಯಾಸರ ಚಾರಿತ್ರ್ಯ ದಾಖಲಿಸಿ ಉಪಕಾರ ಮಾಡಿದ್ದಾರೆ. ಸತ್ಯವತಿ ಹೃದಯ ನಂದನ ವ್ಯಾಸ ಎಂದು ವರ್ಣಿಸಿದ ಅವರು ನೆನಪಿಸಿಕೊಂಡೊಡನೆ ತಾಯಿಯೊಡನೆ ಯಾವುದೇ ಒಡನಾಟವಿಲ್ಲಡಿದ್ದರೂ ತಾಯಿ ಎದುರಿಗೆ ಬಂದು ನಿಂತ ವ್ಯಾಸ, ಇವರಿಗೆ ಗುರು, ಗುರುಕುಲ, ಎಲ್ಲಿ ಕಲಿತರು, ಬಾಲ್ಯವಿಲ್ಲದ ವ್ಯಾಸರು ತಾಯಿಗಾಗಿ ನಿಷ್ಕಲ್ಮಶ ಭಾವದಿಂದ ಯಾವುದೇ ಅಪೇಕ್ಷೆ ಪಡದೆ ತಾಯಿ ನೆರವಿಗೆ ನಿಂತರು ಎಂದು ವ್ಯಾಸರ ಚರಿತ್ರೆ ವರ್ಣಿಸಿದರು.

ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಮಹಾಭಾರತದಲ್ಲಿ ವೇದವ್ಯಾಸರು ಎಂಬ ವಿಷಯದ ಕುರಿತು ಮಾತನಾಡಿ, ಮಹಾಭಾರತದಲ್ಲಿ 41 ಬಾರಿ ಪಾತ್ರವಾಗಿ ವಿವಿಧ ಸನ್ನಿವೇಶದಲ್ಲಿ ವ್ಯಾಸರು ಬಂದು ಹೋಗುತ್ತಾರೆ. ಇವರು 7 ತಲೆಮಾರು ಕಂಡವರು. ಪ್ರಭಾವಿ ಮತ್ತು ಪ್ರೇರಕಶಕ್ತಿ ನೀಡಿದರವರು. ವ್ಯಾಸರು ಅದಿಪರ್ವದಲ್ಲಿ ಪ್ರಥಮ ಬಾರಿ, ರಾಜಸುಯೋಗದಲ್ಲಿ, ವ್ಯಾಸಪರ್ವದಲ್ಲಿ, ವಿಧುರ ತೀರಿ ಹೋದಾಗ ಪ್ರವೇಶಿಸಿದ ಸಂಧರ್ಭ ವಿವರಿಸಿದರು.

ಬೆಂಗಳೂರಿನ ಸಂಸ್ಕೃತಿ ಚಿಂತಕ ಡಾ.ಜಿ.ಬಿ.ಹರೀಶ ಮಹಾಭಾರತ ಹಾಗೂ ಭಾರತೀಯ ಇತಿಹಾಸ ಕುರಿತು ಮಾತನಾಡಿ, ವ್ಯಾಸರು ಯುದ್ಧ ಬೇಡ ಎಂದು ಕೌರವರಿಗೆ ತಿಳಿ ಹೇಳಿದರು. ಕೌರವರ ಹಠಮಾರಿತನದಿಂದ ಮಹಾಭಾರತ ಜರುಗಿತು. ಮಹಾಭಾರತದಲ್ಲಿ ನೀತಿ, ಧರ್ಮ, ಜಾತಿ, ಸಂಪತ್ತು, ಆಭರಣ, ಸಂಸ್ಕೃತಿ, ವೈಭವದ ಬಗ್ಗೆ ಹೇಳುವುದು ಇತಿಹಾಸ. ಛಲ ಕಪಟದಿಂದ ಜರುಗಿದ ಕಥೆ ಮಹಾಭಾರತ. ಉಪ ಕತೆಗಳಿಂದ ಮಹಾಭಾರತ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಜನರು ಹೇಗೆ ಬದುಕಬೇಕು ಎಂದು ತಿಳಿಯಲು ಮಹಾಕಾವ್ಯದ ರಚನೆಯಾಗಿದೆ. ಸರಸ್ವತಿ ನದಿಯಿಂದ ದ.ರಾ. ಬೇಂದ್ರೆ ಕಂಡ ವ್ಯಾಸರ ಬಗ್ಗೆ ಇತಿಹಾಸ ತಿಳಿಸಿದರು. ಸೂತ್ರ ಪಾತ್ರವಾಯಿತು. ವ್ಯಾಸರ ಪ್ರಜ್ಞೆ ಪಾಪ ಪುಣ್ಯದ ಕಲ್ಪನೆ ನೀಡಿದ್ದಾರೆ ಎಂದರು.

ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವೇದವ್ಯಾಸ ಆಚಾರ್ಯ ಶ್ರೀಶಾನಂದರು ಮಹಾಭಾರತ ಮತ್ತು ನ್ಯಾಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ವೇದವ್ಯಾಸ ಮಹಾಭಾರತ ವಿಷಯ ಕುರಿತು 128 ಪ್ರಶ್ನೆಗಳಿಗೆ ಥಟ್ ಅಂತ ಹೇಳಿ ಕಾರ್ಯಕ್ರಮದ ಖ್ಯಾತವೈದ್ಯ ಸಾಹಿತಿ ಡಾ.ನಾ.ಸೋಮೇಶ್ವರ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ವಾಗ್ಮಿ ವೀಣಾ ಬನ್ನಂಜೆ, ಬಿ.ಎಲ್.ಶಂಕರ ಸಹಿತ ಹಲವಾರು ಸಾಹಿತಿಗಳು, ಗಣ್ಯರು ಇದ್ದರು.