ವಿಶ್ವಕ್ಕೆ ಜೀವನ ಮೌಲ್ಯ ಸಾರಿದ ಮಹರ್ಷಿ ವಾಲ್ಮೀಕಿ

| Published : Oct 08 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ವಾಲ್ಮೀಕಿ ರಾಮಾಯಣ ಜಗತ್ತಿನ ಮೊದಲ ಮಹಾಕಾವ್ಯ. ರಾಮಾಯಣದಲ್ಲಿನ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾಪುರುಷರ ಜಯಂತಿ ಆಚರಣೆ ಜೊತೆಗೆ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆಚರಣೆ ಸಾರ್ಥಕವಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ವಾಲ್ಮೀಕಿ ರಾಮಾಯಣ ಜಗತ್ತಿನ ಮೊದಲ ಮಹಾಕಾವ್ಯ. ರಾಮಾಯಣದಲ್ಲಿನ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾಪುರುಷರ ಜಯಂತಿ ಆಚರಣೆ ಜೊತೆಗೆ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆಚರಣೆ ಸಾರ್ಥಕವಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.

ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತಿಯಿಂದ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿಗೆ ಜೀವನ ಮೌಲ್ಯ ಸಾರಿದ ಮಹಾನ್‌ ಚೇತನ, ಆದಿಕವಿ ವಾಲ್ಮೀಕಿ ಮಹರ್ಷಿ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ವಾಲ್ಮೀಕಿ ಬದುಕು ಮತ್ತು ಸಾಧನೆ ಎಲ್ಲರಿಗೂ ಪ್ರೇರಣೆ. ಯುವ ಜನತೆ ಅವರ ಸಾಧನೆಯನ್ನು ಅರಿತು ಉತ್ತಮ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜಯಂತಿ ಆಚರಿಸುವ ಜೊತೆಗೆ ರಾಮಾಯಣ ಕಾವ್ಯ ಓದುವುದರಿಂದ ಜೀವನ ಬದಲಾವಣೆಯಾಗುತ್ತದೆ. ರಾಮಾಯಣ ಅತ್ಯಂತ ಉತ್ಕೃಷ್ಟವಾದ ಮಹಾಕಾವ್ಯ. ಸರಳ ಜೀವನದ ನಡುವೆ ಶ್ರೀರಾಮನ ತತ್ವ, ಬದುಕಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಹಾನ್‌ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಪ್ರೊ.ರವಿಕುಮಾರ ಅರಳಿ ಉಪನ್ಯಾಸ ನೀಡಿದರು. ತಾಪಂ ಯೋಜನಾಧಿಕಾರಿ ನಂದೀಪ ರಾಠೋಡ, ವ್ಯವಸ್ಥಾಪಕ ರಾಜಶೇಖರ ದೈವಾಡಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಅರ್ಜುನ ನಾಯ್ಕೋಡಿ, ಡಿಎಸ್‌ಎಸ್‌ ಮುಖಂಡ ವಿನಾಯಕ ಗುಣಸಾಗರ, ವಸತಿ ನಿಲಯದ ಪಾಲಕರಾದ ಎಚ್‌.ಎಸ್‌.ಅರವತ್ತು, ಸಂಗನಬಸು ನಾಗಣಸೂರ, ಪುಂಡಲೀಕ ಗೊಂಧಳಿ, ರವೀಂದ್ರಕುಮಾರ, ಉಮರ ಮಿರ್ಜಿ, ರಮೇಶ ಬಿರಾದಾರ, ಬಿ.ಆರ್‌.ಓತಿಹಾಳ, ಪುಂಡಲೀಕ ನಂದಗೊಂಡ, ಮಲ್ಲಪ್ಪ ವಾಲಿಕಾರ, ಶೋಭಾ ಬಿರಗೊಂಡ, ಜ್ಯೋತಿ ಔರಸಂಗ, ನಿಂಗಮ್ಮ ಕೊಪ್ಪದ, ಯಶೋಧ ಕುಕನೂರ, ರಾಕೇಶ ಕಾಳೆ, ಎಚ್.ಎಸ್‌.ಮಾಲಗೊಂಡ, ಲಕ್ಷ್ಮಿಕಾಂತ ಏಳಗಿ, ಅರ್ಜುನ ಬೆರಡ್‌, ಅರ್ಜುನ ನಾಯ್ಕೋಡಿ, ಸತೀಶ ಹಿಪ್ಪರಗಿ, ಶಿವಾನಂದ ನಾಯ್ಕೋಡಿ, ದತ್ತು ನಾಯ್ಕೋಡಿ, ಬಿ.ಎಸ್‌.ತಳವಾರ, ಪೀರಪ್ಪ ಕಟ್ಟಿಮನಿ, ಪರಮೇಶ್ವರ ಚಿಗರಿ, ಭೀಮರಾಯ ನಾಯ್ಕೋಡಿ, ಸಂಜೀವ ನಾಯ್ಕೋಡಿ, ಹಾಜಿಸಾಬ ಶೇಖ, ಪ್ರಭು ನಾಯ್ಕೋಡಿ, ಅಶೋಕ ಹೂವಿನಹಳ್ಳಿ, ನಾಗಪ್ಪ ನಾಯ್ಕೋಡಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜಶೇಖರ ದೈವಾಡಗಿ ಸಂವಿಧಾನ ಪೀಠಿಕೆ ಓದಿದರು. ಬಸವರಾಜ ಗೊರನಾಳ ನಿರೂಪಿಸಿದರು. ಉಮೇಶ ಲಮಾಣಿ ವಂದಿಸಿದರು. ಮಿನಿ ವಿಧಾನಸೌಧದಿಂದ ಬಾಬು ಜಿಗಜಿವನರಾಮ ವೃತ್ತದವರೆಗೆ ಮಹರ್ಷಿ ವಾಲ್ಮೀಕ ಭಾವಚಿತ್ರ ಮೆರವಣಿಗೆ ಮಾಡಲಾಯಿತು.