ಆದಿಕಾವ್ಯವಾದ ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿಯವರ ಜೀವನವು ಅಪರಾಧಿಯಾಗಿದ್ಡು, ನಂತರ ತಪಸ್ವಿಯಾಗಿ ಹೆಸರುವಾಸಿಯಾದರು. ಅವರು ಸಂಸ್ಕೃತ ಸಾಹಿತ್ಯದಲ್ಲಿ ಆದಿಕವಿಯಂದು ಕರೆಯಲ್ಪಡುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಆದಿಕಾವ್ಯವಾದ ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿಯವರ ಜೀವನವು ಅಪರಾಧಿಯಾಗಿದ್ಡು, ನಂತರ ತಪಸ್ವಿಯಾಗಿ ಹೆಸರುವಾಸಿಯಾದರು. ಅವರು ಸಂಸ್ಕೃತ ಸಾಹಿತ್ಯದಲ್ಲಿ ಆದಿಕವಿಯಂದು ಕರೆಯಲ್ಪಡುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸೋಮವಾರ ಜರುಗಿದ ಆದಿಕವಿ ವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬೇಟೆಗಾರನು ಹಕ್ಕಿಯನ್ನು ಹಿಡಿದು ಕೊಲ್ಲುವುದನ್ನು ನೋಡಿದ ವಾಲ್ಮೀಕಿ ದುಃಖಿತರಾಗಿ ಕಣ್ಣೀರು ಹಾಕಿದರು ಎಂದು ಹೇಳಲಾಗುತ್ತದೆ. ಇದರ ಪರಿಣಾಮ ರಾಮಾಯಣದಲ್ಲಿನ ದಯೆ ಮತ್ತು ಕರುಣೆಗೆ ನಾಂದಿಯಾಯಿತು ಎಂದರು. ಕಸಾಪ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಬೋಧಿಸಿದ ಜೀವನ ಮೌಲ್ಯಗಳು ಕೇವಲ ರಾಮಾಯಣಕ್ಕೆ ಸೀಮಿತವಾಗಿಲ್ಲ. ಮಾನವೀಯತೆ .ದಯೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತವೆ. ಮಹಾಕಾವ್ಯ ರಾಮಾಯಣ ಮಾತ್ರವಲ್ಲದೆ ಯೋಗ ವಾಸಿಷ್ಠ ಎಂಬ ಮಹತ್ವದ ಗ್ರಂಥ ವನ್ನು ರಚಿಸಿದ್ದಾರೆ. ಜ್ಞಾನ ಮತ್ತು ಮೋಕ್ಷದ ಕುರಿತು ಆಳವಾದ ತತ್ವಗಳನ್ನು ಒಳಗೊಂಡಿದೆ ಎಂದರು. ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಮೀಕಿ ಮಹರ್ಷಿಯವರ ಗೌರವಾಥ೯ವಾಗಿ ಭಾರತದಲ್ಲಿ ಪ್ರತಿ ವರ್ಷ ವಾಲ್ಕೀಕಿ ಜಯಂತಿ ಆಚರಿಸಲಾಗುತ್ತದೆ. ಇದು ಅವರ ಜ್ಞಾನ ಮತ್ತು ಕೌಶಲ್ಯವನ್ನು ಸ್ಮರಿಸುವ ದಿನವಾಗಿದೆ ಎಂದರು. ನಿಂಗರಾಜ ಬಿರಾದಾರ, ಪರಶುರಾಮ ಚಲವಾದಿ, ಎಂ.ಡಿ.ಇನಾಮದಾರ ಇದ್ದರು. ಜಿ.ಎಸ್.ಬಳ್ಳೂರ, ಅಜು೯ನ ಶಿರೂರ, ಬಿ.ಎಂ.ಅಜೂರ, ಕೆ.ಎಸ್.ಹಣಮಾಣಿ, ಮಲ್ಲಿಕಾರ್ಜುನ ಕಳಗಡೆ, ಆಶಾ ಬಿರಾದಾರ, ಶಾಂತಾ ವಿಭೂತಿ, ಲತಾ ಗುಂಡಿ, ಗಂಗಮ್ಮ ರಡ್ಡಿ, ಮಹಾದೇವಿ ತೇಲಗಿ ಮುಂತಾದವರು ಉಪಸ್ಥಿತರಿದ್ದರು.