ಸಾರಾಂಶ
ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಅರಸಪ್ಪನವರ ಹೇಳಿದರು.
ರಾಣಿಬೆನ್ನೂರು: ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಅರಸಪ್ಪನವರ ಹೇಳಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಾಂಧೀಜಿಯವರು ಸತ್ಯ, ಅಹಿಂಸೆ, ಶಾಂತಿ, ಸಹನೆಯ ಮೂಲಕ ಹಲವಾರು ಚಳವಳಿಗಳಲ್ಲಿ ತೊಡಗಿ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟ ಮಹಾತ್ಮರು. ಲಾಲ್ ಬಹಾದ್ದೂರ ಶಾಸ್ತ್ರೀಯವರು ಜೈ ಜವಾನ್, ಜೈ ಕಿಸಾನ್ ಘೋಷಣೆ ಮೂಲಕ ನಮ್ಮ ದೇಶದ ಸೈನಿಕರು ಹಾಗೂ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದವರು ಎಂದರು. ಎಸ್‌ಡಿಎಂಸಿ ಸದಸ್ಯರಾದ ಜಿ.ವಿ. ದೀಪಾವಳಿ, ದೇವೇಂದ್ರಪ್ಪ ಹರಿಜನ, ಗ್ರಾಮದ ಮುಖಂಡ ಪ್ರವೀಣ ನಾಗೇನಹಳ್ಳಿ, ಶಿಕ್ಷಕರುಗಳಾದ ಮಹೇಶ ಹುಣಸಿಕಟ್ಟಿ, ಭರಮೇಶ ಹಿರೆಕೇರೂರ, ಅಜ್ಜಪ್ಪ ಪಸಗಿ, ಚೇತನ ಭತ್ತದ ಸೇರಿದಂತೆ ಹಲವರಿದ್ದರು.