ಮತ್ತೆ ಚುರುಕುಗೊಂಡ ಮಹಿಷವಾಡಗಿ ಸೇತುವೆ ಕಾಮಗಾರಿ

| Published : May 28 2024, 01:02 AM IST

ಸಾರಾಂಶ

ರಬಕವಿಯ ಮಹತ್ತರ ಯೋಜನೆಯಾಗಿರುವ ಮಹಿಷವಾಡಗಿ ಸೇತುವೆ ಕಾಮಗಾರಿಗೆ ಇದೀಗ ವೇಗ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ರಬಕವಿ-ಬನಹಟ್ಟಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಮಂದಗತಿಯಿಂದ ಸಾಗಿತ್ತು, ಇದೀಗ ಮತ್ತೆ ವೇಗ ಪಡೆದುಕೊಂಡಿದೆ.

೨೦೧೮ರಲ್ಲಿ ಅಂದಿನ ಸಚಿವೆ ಉಮಾಶ್ರೀ ₹ ೩೦ ಕೋಟಿ ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನಸ್ಟ್ರಕ್ಷನ್ ಕಂಪನಿಗೆ ನೀಡಿತ್ತು. ಕಳೆದ ಐದು ವರ್ಷಗಳಲ್ಲಿ ಕೇವಲ ಶೇ.೨೫ರಷ್ಟು ಮಾತ್ರ ಕಾಮಗಾರಿ ನಡೆದಿತ್ತು. ಇದಕ್ಕೆ ಪೂರಕವಾಗಿ ೨೦೨೧ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು ₹ ೫೦ ಕೋಟಿವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗೂ ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿಸಿದ್ದರು.

ಸುಮಾರು ೮ ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಶೇ.೫೦ರಷ್ಟೂ ಕಾಮಗಾರಿಯಾಗಿಲ್ಲ. ಇದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜನತೆ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾಗಿದೆ. ಪೂರ್ವನಿಯೋಜಿತವಾಗಿ ಟೆಂಡರ್ ಕರೆಯದೆ ನದಿಯೊಳಗಿನ ಕಾರ್ಯ ನಡೆಯುವಲ್ಲಿ ವಿಳಂಬಕ್ಕೆ ಕಾರಣವೆನ್ನಲಾಗಿದೆ. ಮತ್ತೊಂದೆಡೆ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯ ನಿರ್ಲಕ್ಷ್ಯವೂ ವಿಳಂಬಕ್ಕೆ ಕಾರಣವಾಗಿದೆ.ಪುನರ್ ಕಾಮಗಾರಿ ಪ್ರಾರಂಭಗೊಂಡಿದ್ದು ಸ್ವಾಗತ. ಇದೇ ವೇಗ ಪಡೆದಲ್ಲಿ ವರ್ಷದ ಕೊನೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

-ಡಾ. ರವಿ ಜಮಖಂಡಿ, ಅಧ್ಯಕ್ಷ, ಹೋರಾಟ ಸಮಿತಿ, ರಬಕವಿ-ಬನಹಟ್ಟಿ.ಸುಮಾರು ೮ ವರ್ಷಗಳಿಂದ ವಿಳಂಬ ಕಾರ್ಯ ಇದಾಗಿದೆ. ಶೀಘ್ರವೇ ಸೇತುವೆ ನಿರ್ಮಿಸಿ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಗಡಿ ಜನತೆಗೆ ಅನುಕೂಲ ಕಲ್ಪಿಸಬೇಕು

-ಗಣಪತರಾವ್ ಹಜಾರೆ, ಉದ್ಯಮಿ ರಬಕವಿ.