ಸಾರಾಂಶ
ಹಲವು ಸಮಾಜ ಮುಖಿ ಕಾರ್ಯಚಟುವಟಿಕೆಗಳ ಮೂಲಕ ರೋಟರಿ ಅಂಗ ಸಂಸ್ಥೆಗಳ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶವಾಗಿ ಮಳವಳ್ಳಿಯ ವಿವಿಧ ಶಾಲೆಗಳ ಮಕ್ಕಳಿಗೆ 2000 ಸಾವಿರ ತೆಂಗಿನ ಸಸಿ ವಿತರಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವ ಮೂಲಕ ಮಣ್ಣಿನ ಫಲವತ್ತೆಗೆ ಒತ್ತು ನೀಡಬೇಕು ಎಂದು ಬೆಂಗಳೂರಿನ ಬ್ರಿಗೇಡ್ ರೋಟರಿ ಗೌವರ್ನರ್ ಎನ್.ಎಸ್.ಮಹದೇವ ಪ್ರಸಾದ್ ತಿಳಿಸಿದರು.ತಾಲೂಕಿನ ದೊಡ್ಡಬೂವಳ್ಳಿ, ರಾವಣಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ರೋಟರಿ ಬೆಂಗಳೂರು ಬ್ರಿಗೇಡ್, ರೋಟರಿ ಇಂದಿರಾನಗರ, ರೋಟರಿ ಪ್ಲಾಟಿನಂ ಸಿಟಿ, ರೋಟರಿ ಸ್ಕೈವೇ, ರೋಟರಿ ಯಲಹಂಕ ಸಂಸ್ಥೆಗಳು ಸಹಯೋಗದೊಂದಿಗೆ ಸೋಮವಾರ ಲಕ್ಷ ಕಲ್ಪವೃಕ್ಷ ಮಹಾಮೇಳ ಯೋಜನೆಯಡಿ ತೆಂಗಿನ ಸಸಿ ವಿತರಿಸಿ ಮಾತನಾಡಿದರು.
ಹಲವು ಸಮಾಜ ಮುಖಿ ಕಾರ್ಯಚಟುವಟಿಕೆಗಳ ಮೂಲಕ ರೋಟರಿ ಅಂಗ ಸಂಸ್ಥೆಗಳ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶವಾಗಿ ಮಳವಳ್ಳಿಯ ವಿವಿಧ ಶಾಲೆಗಳ ಮಕ್ಕಳಿಗೆ 2000 ಸಾವಿರ ತೆಂಗಿನ ಸಸಿ ವಿತರಿಸಲಾಗುತ್ತಿದೆ ಎಂದರು.ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ರಸಗೊಬ್ಬರಗಳ ಅತಿಬಳಕೆಯಿಂದ ಮಣ್ಣಿನ ಫಲವತ್ತೆ ಕುಸಿದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಾವು ಬೆಳೆಯುವ ಆಹಾರವೇ ವಿಷಯುಕ್ತವಾಗುತ್ತದೆ. ಹೀಗಾಗಿ ಸಾವಯವ ಕೃಷಿಯತ್ತ ಎಲ್ಲರ ಗಮನ ಹರಿಸಬೇಕು. ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ವೇಳೆ ರೋಟರಿ ಸಂಸ್ಥೆ ಶ್ಯಾಮ್ ಮೂರ್ತಿ, ಸುಪ್ರಿಯಾ, ಅನುರಾಧ, ಅಕ್ಷಯ ಮಲ್ಲಪ್ಪ, ನಟರಾಜ್, ಹರೀಶ್, ಮಳವಳ್ಳಿ ರೋಟರಿ ಸಂಸ್ಥೆಯ ಅಧ್ಯಕ್ಷ ಸುರೇಶ್, ಪ್ರಮುಖರಾದ ಗೌತಮ್ ಚಂದ್, ಘನ್ ಶ್ಯಾಮ್ ಚಂದ್, ಶಾಲಾ ಅಭಿವೃದ್ಧಿ ಅಧ್ಯಕ್ಷ ಮಹೇಶ್, ಮುಖಂಡರಾದ ಚಿಕ್ಕಣ್ಣ, ಶಿವಕುಮಾರ್, ಗಜೇಂದ್ರ, ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಇದ್ದರು.