ಪರಶುರಾಂಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ

| Published : Aug 19 2025, 01:00 AM IST

ಪರಶುರಾಂಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಬಾರಿ ಗೆಲುವು ಸಾಧಿಸಿದ ನಾನು ಕಳೆದ 12 ವರ್ಷಗಳಿಂದ ಆ ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವೆ. ಜನರಿಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರವೇ ನನ್ನ ಸಹಾಯಕ್ಕೆ ಬಾರದಿದ್ದರೆ ನಾನು ಜನರ ದೃಷ್ಟಿಯಲ್ಲಿ ಏನಾಗಬೇಕು?, ಕೂಡಲೇ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಸರ್ಕಾರ ಈಡೇರಿಸುವ ನಿಟ್ಟಿನಲ್ಲಿ ದೃಢಹೆಜ್ಜೆ ಇಡಬೇಕು. ಕಳೆದ 12 ವರ್ಷಗಳಿಂದ ಸರ್ಕಾರ ಕೇವಲ ಉತ್ತರ ನೀಡುತ್ತಿದೆ ವಿನಃ ಕಾರ್ಯಗತವಾಗುತ್ತಿಲ್ಲವೆಂಬ ಅಸಮಧಾನವನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೋಮವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡುವ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಚಳ್ಳಕೆರೆ: ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಬಾರಿ ಗೆಲುವು ಸಾಧಿಸಿದ ನಾನು ಕಳೆದ 12 ವರ್ಷಗಳಿಂದ ಆ ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವೆ. ಜನರಿಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರವೇ ನನ್ನ ಸಹಾಯಕ್ಕೆ ಬಾರದಿದ್ದರೆ ನಾನು ಜನರ ದೃಷ್ಟಿಯಲ್ಲಿ ಏನಾಗಬೇಕು?, ಕೂಡಲೇ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಸರ್ಕಾರ ಈಡೇರಿಸುವ ನಿಟ್ಟಿನಲ್ಲಿ ದೃಢಹೆಜ್ಜೆ ಇಡಬೇಕು. ಕಳೆದ 12 ವರ್ಷಗಳಿಂದ ಸರ್ಕಾರ ಕೇವಲ ಉತ್ತರ ನೀಡುತ್ತಿದೆ ವಿನಃ ಕಾರ್ಯಗತವಾಗುತ್ತಿಲ್ಲವೆಂಬ ಅಸಮಧಾನವನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೋಮವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡುವ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಆರು ತಾಲೂಕು ಕೇಂದ್ರಗಳಿದ್ದು, ಓರ್ವ ಡಿಸಿ, ಓರ್ವ ಎಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಳ್ಳಕೆರೆ ತಾಲೂಕನ್ನು ವಿಭಾಗವನ್ನಾಗಿ ಮಾಡಿ ಹೆಚ್ಚಿನ ಅವಕಾಶವನ್ನು ಮಾಡಿಕೊಡಬೇಕು. ಜನರಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಿಬರುವ ಅವ್ಯವಸ್ಥೆಯನ್ನುನಿವಾರಿಸಬೇಕೆಂದು ಆಗ್ರಹಿಸಿದರು.

ಕಳೆದ 2013ರಲ್ಲಿ ಮೊದಲ ಬಾರಿ ಶಾಸಕನಾದ ವರ್ಷವೇ ಪರಶುರಾಮಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದೆ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು. ಕಳೆದ 2018-19ರಲ್ಲೂ ಪುನಃ ಪರಶುರಾಮಪುರ ತಾಲೂಕು ಕೇಂದ್ರಕ್ಕೆ ಒತ್ತಾಯಿಸಿದ್ದೆ, ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೆಲವು ತಾಲೂಕು ಕೇಂದ್ರಗಳಾಗಲಿದ್ದು, ಪರಶುರಾಮಪುರವನ್ನು ಸೇರ್ಪಡೆಮಾಡುವ ಭರವಸೆ ನೀಡಿ ಸುಮ್ಮನಾದರು.

2023ರಲ್ಲಿ ನಾನು ಮೂರನೇ ಬಾರಿ ಶಾಸಕನಾದಗಲೂ ಆ ಭಾಗದ ಜನರು ಕಳೆದ 10 ವರ್ಷಗಳಿಂದ ಸುಳ್ಳು ಭರವಸೆ ನೀಡುತ್ತಿದ್ದೀರೆಂದು ತರಾಟೆಗೆ ತೆಗೆದುಕೊಂಡಿದ್ದರು. ಆಗ ನಾನು 100ಕ್ಕೆ 100ರಷ್ಟು ಈ ಬಾರಿ ಪರಶುರಾಮಪುರವನ್ನು ತಾಲೂಕು ಕೇಂದ್ರ ಮಾಡಿಯೇಸಿದ್ಧವೆಂದು ಸಾರ್ವಜನಿಕ ಘೋಷಣೆ ಮಾಡಿದ್ದೆ. ಎರಡು ವರ್ಷಗಳಾದರೂ ನನ್ನ ಮನವಿಯ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ, ನಾನು ಆ ಭಾಗದಲ್ಲಿ ಜನರ ಮುಂದೆ ಓಡಾಡಲು ಹಿಂದೇಟು ಹಾಕುವ ಸಂದರ್ಭ ಒದಗಿಬಂದಿದೆ. ಸರ್ಕಾರವೇ ನನ್ನ ನೆರವಿಗೆ ಬಾರದಿದ್ದರೆ ಜನರಿಗೆ ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ಈ ಬಾರಿಯಾದರೂ ನನ್ನ ಬೇಡಿಕೆ ಈಡೇರಿಸುವಲ್ಲಿ ಕಂದಾಯ ಸಚಿವರು ಮುಂದಾಗಬೇಕೆಂದು ಒತ್ತಾಯಿಸಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಪರಶುರಾಮಪುರ ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಒತ್ತಾಯಕ್ಕೆ ನನ್ನ ಸಹಮತವಿದೆ. 2018-19ರಲ್ಲಿ ರಾಜ್ಯದಲ್ಲಿ 63 ಹೊಸ ತಾಲೂಕು ಕೇಂದ್ರ ರಚನೆಯಾಗಿದ್ದು ಆಪೈಕಿ ಹಿಂದಿನ ಸರ್ಕಾರ ಕೇವಲ 14 ತಾಲೂಕುಗಳಿಗೆ ಮಾತ್ರ ವ್ಯವಸ್ಥೆ ಕಲ್ಪಿಸಿತ್ತು. ನಂತರ ನಮ್ಮ ಸರ್ಕಾರ ಉಳಿದ 43 ತಾಲೂಕು ಕೇಂದ್ರಗಳಿಗೆ ಕಾಯಕಲ್ಪ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಎಂಟು- ಹತ್ತು ತಾಲೂಕು ಕೇಂದ್ರಗಳಾಗಬೇಕಿದೆ. ಆ ಪರಶುರಾಮಪುರವನ್ನು ಪರಿಗಣಿಸುವಂತೆ ಅವರೂ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪರಶುರಾಮಪುರ ತಾಲೂಕು ಕೇಂದ್ರವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದರು.

ಚಳ್ಳಕೆರೆ ವಿಭಾಗವನ್ನಾಗಿ ಮಾಡುವ ಶಾಸಕ ಮನವಿಯನ್ನು ಪ್ರಸ್ತಾಪಿಸಿದ ಸಚಿವರು, ಮೊದಲು ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಘೋಷಿಸಿದ ನಂತರ ಚಳ್ಳಕೆರೆ ವಿಭಾಗದ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.