ಯವ ಪೀಳಿಗೆಗೆ ವಚನ ಸಾಹಿತ್ಯದ ಅರಿವು ಮೂಡಿಸಿ

| Published : Jul 03 2024, 12:15 AM IST

ಸಾರಾಂಶ

ಹಳಕಟ್ಟಿ ಸೈಕಲ್ ಮೂಲಕ ಗ್ರಾಮೀಣ ಪ್ರದೇಶಗಳನ್ನು ಸುತ್ತಾಡಿ ನಶಿಸಿ ಹೋಗುತ್ತಿದ್ದ ಅತ್ಯಂತ ಮೌಲ್ಯಯುತವಾದ ತಾಳೆಗೇರಿಯ ವಚನಗಳನ್ನು ಕ್ರೋಡಿಕರಿಸಿ ಅದನ್ನು ಮುದ್ರಣ ಮಾಡಿ ಕೊಡುಗೆಯಾಗಿ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರವಚನ ಸಾಹಿತ್ಯವನ್ನು ಸಂರಕ್ಷಿಸಿದ ಡಾ.ಫ.ಗು.ಹಳಕಟ್ಟಿ ಸಮಾಜಕ್ಕೆ ನೀಡಿರುವ ಕೊಡುಗೆಗಳು ಅನನ್ಯ, ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿ ಕೊಳ್ಳುವ ಮೂಲಕ ಕನ್ನಡ ವಚನ ಸಾಹಿತ್ಯ ಮುಂದಿನ ಪೀಳಿಗೆಗಳಿಗೂ ಅರಿವು ಮೂಡಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ತಿಳಿಸಿದರು.ನಗರದ ರಂಗಮಂದಿರದಲ್ಲಿ ವಚನ ಸಾಹಿತ್ಯದ ಪಿತಾಮಹಾ ಡಾ.ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳಕಟ್ಟಿ ಸೈಕಲ್ ಮೂಲಕ ಗ್ರಾಮೀಣ ಪ್ರದೇಶಗಳನ್ನು ಸುತ್ತಾಡಿ ನಶಿಸಿ ಹೋಗುತ್ತಿದ್ದ ಅತ್ಯಂತ ಮೌಲ್ಯಯುತವಾದ ತಾಳೆಗೇರಿಯ ವಚನಗಳನ್ನು ಕ್ರೋಡಿಕರಿಸಿ ಅದನ್ನು ಮುದ್ರಣ ಮಾಡಿ ಕೊಡುಗೆಯಾಗಿ ನೀಡಿದ ಹಿನ್ನಲೆಯಲ್ಲಿ ನಾವೆಲ್ಲಾ ವಚನ ಸಾಹಿತ್ಯವನ್ನು ಅರಿಯಲು ಸಾಧ್ಯವಾಗಿದೆ ಎಂದರು.

ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ

ಪ್ರತಿಯೊಬ್ಬರಲ್ಲೂ ಇರುವ ಪ್ರತಿಭೆ ಗುರುತಿಸಿಕೊಳ್ಳಲು ಹಳಕಟ್ಟಿ ಅವರು ಪ್ರೇರಣೆಯಾಗಿ ಪಡೆದುಕೊಂಡು ನಿಮಗೆ ಆಸಕ್ತಿ ಇರುವಂತ ವಿಷಯಗಳಲ್ಲಿ ಸಾಧನೆ ಮಾಡಲು ಜೀವನದಲ್ಲಿ ವಿಪುಲವಾದ ಅವಕಾಶಗಳಿದ್ದು ಅವುಗಳನ್ನು ಸದ್ಬಳಿಸಿಕೊಂಡು ಸಮಾಜಕ್ಕೆ ಬೆಳಕು ಚೆಲ್ಲುವಂತಾಗಬೇಕು. ಹಳಕಟ್ಟಿ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿರುವಂತ ಬಸವೇಶ್ವರ ವಚನ, ಮಹಾದೇವಿ ವಚನಾಮೃತ, ದೇವರಸನ ವಚನಗಳು, ಹರಿಹರನ ರಗಳೆ, ಅಧ್ಯಯನ ವಚನ ಸೇರಿದಂತೆ ಹಲವು ಗ್ರಂಥಗಳನ್ನು ಪ್ರಕಟಿಸಿದ್ದಾರೆಂದು ವಿವರಿಸಿದರು.

ಪತ್ರಕರ್ತ ಕೆ.ಎಸ್.ಗಣೇಶ್ ಉದ್ಘಾಟಿಸಿ ಮಾತನಾಡಿ, ವಚನಗಳು ಕನ್ನಡದ ಸಂಪತ್ತು, ೧೨ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳನ್ನು ಕ್ರೋಡೀಕರಿಸಲು ಅಪಾರವಾದ ಶ್ರಮವನ್ನು ಪಟ್ಟು ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದರು. ಕನ್ನಡದ ಭಾಷೆಯಲ್ಲಿ ಪ್ರಕಟಿಸಲು ಡಾ.ಫ.ಗು.ಹಳಕಟ್ಟಿ ತಮ್ಮ ಆಸ್ತಿಪಾಸ್ತಿಗಳನ್ನು ಮಾರಿ ೨೫೦ಕ್ಕೂ ಹೆಚ್ಚು ವಚನದ ಗ್ರಂಥಗಳನ್ನು ಪ್ರಕಟಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದರು ಎಂದು ವಿವರಿಸಿದರು.ಹಳಕಟ್ಟಿ ಅವರು ಬಸವಾದಿ ಶರಣರ ವಚನಗಳನ್ನು ಗುರುತಿಸಿ ಅವುಗಳನ್ನು ಸಂಗ್ರಹಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ, ಹಳಕಟ್ಟಿ ಸಂಗ್ರಹಿಸಿರುವ ವಚನಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ದಿನಕ್ಕೊಂದು ವಚನಗಳನ್ನು ಅಧ್ಯಯನ ಮಾಡಿ ಅದರ ಸಾರಂಶವನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಜೀವನದ ಮೌಲ್ಯವನ್ನು ಶ್ರೀಮಂತಗೊಳಿಸುವಂತಾಗಬೇಕೆಂದು ಕಿವಿಮಾತು ತಿಳಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬರಾಯಪ್ಪ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ತ್ಯಾಗರಾಜ್, ಪೋಸ್ಟ್ ನಾರಾಯಣಸ್ವಾಮಿ ಇದ್ದರು. ಕನ್ನಡ ಮತ್ತು ಸಂಸ್ಮೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ, ಕಲಾವಿದೆ ರೇಣುಕಾ ಇದ್ದರು.