ಮಕ್ಕ‍ಳಿಗೆ ಪ್ರತಿದಿನ ಸಮಯ ಮೀಸಲಿಡಿ: ಡಾ. ದೇವರಮನೆ

| Published : Jul 07 2024, 01:18 AM IST

ಮಕ್ಕ‍ಳಿಗೆ ಪ್ರತಿದಿನ ಸಮಯ ಮೀಸಲಿಡಿ: ಡಾ. ದೇವರಮನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಟ್ಟೂರು ಪ್ರೌಢಶಾಲೆಯ ೨೦೨೪-೨೫ನೇ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಮಹಾಸಭೆ ನಡೆಯಿತು. ಈ ಸಂದರ್ಭ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ನಿಟ್ಟೂರು ಪ್ರೌಢಶಾಲೆಯ ೨೦೨೪-೨೫ನೇ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಮಹಾಸಭೆ ನಡೆಯಿತು.

ಮುಖ್ಯ ಅಥಿಗಳಾಗಿ ಭಾಗವಹಿಸಿದ ಖ್ಯಾತ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿ, ಹೆತ್ತವರು ಮಕ್ಕಳನ್ನು ಪ್ರೀತಿಸಬೇಕು. ಪ್ರತಿ ಮಗುವೂ ವಿಶಿಷ್ಟವಾಗಿದ್ದು, ತಮ್ಮ ಮನೆಗೆ ಬಂದ ವಿಶೇಷ ಅತಿಥಿ ಎಂದು ತಿಳಿದು ಪ್ರತಿದಿನ ಅವರಿಗೆ ನಿಗದಿತ ಸಮಯ ಮೀಸಲಿಡಬೇಕು. ಈ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಾಲೆಯೊಂದಿಗೆ ಪೋಷಕರು ಕೈ ಜೋಡಿಸಿದರೆ ಪ್ರತಿಯೊಬ್ಬ ವಿದ್ಯಾರ್ಥಿ ಸಾಧಕನಾಗಲು ಸಾಧ್ಯ ಎಂದು ಹೆತ್ತವರಿಗೆ ಕಿವಿಮಾತು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತು ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಪಿ. ಪೂಜಾರಿ ಪೋಷಕರನ್ನು ಕುರಿತು ಮಾತನಾಡಿದರು.

ಈ ಸಂದರ್ಭ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದೇವರಾಜ್, ನೇತ್ರ ಕಮತರ, ವಿಜಯಲಕ್ಷ್ಮೀ, ಪ್ರಣೀತ್ ದೇವಾಡಿಗ, ದಿಗಂತ್ ಜಿ. ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಅನಸೂಯ ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷ ಕಮಲಾಕ್ಷ ಶೇಟ್, ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಯೋಗಿಶ್ವಂದ್ರಧರ ಮತ್ತು ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ, ಹಿಂದುಳಿದ ವರ್ಗಗಳ ವಸತಿ ನಿಲಯದ ವಾರ್ಡನ್ ಮಂಜುನಾಥ್, ಶಿಕ್ಷಕ-ರಕ್ಷಕ ಸಂಘದ ಸಂಯೋಜಕರಾದ ರಾಮದಾಸ ನಾಯ್ಕ್ ಉಪಸ್ಥಿತರಿದ್ದರು. ಶಿಕ್ಷಕರಾದ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಮಿತಾಶ್ರೀ ವಂದಿಸಿದರು.