ಕಡ್ಡಾಯ ಮತದಾನ ಮಾಡಿ: ರಾಹುಲ ಶಿಂಧೆ

| Published : Apr 23 2024, 12:49 AM IST

ಸಾರಾಂಶ

ಸಂವಿಧಾನಾತ್ಮಕ, ಸ್ವಾಭಿಮಾನದ ನಮ್ಮ ಮತದಾನದ ಹಕ್ಕನ್ನು ಸುಭದ್ರ ಸರ್ಕಾರ ನಿರ್ಮಿಸಲು ಪ್ರತಿಯೊಬ್ಬರು ತಮ್ಮ ಮತವನ್ನು ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಚಲಾಯಿಸಿ ಪ್ರತಿಶತ 100 ರಷ್ಟು ಮತದಾನ ಎಲ್ಲ ಮತ ಕೇಂದ್ರಗಳಲ್ಲಿ ಕಡ್ಡಾಯ ಮತದಾನ ಮಾಡಬೇಕು ಎಂದು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿಸಂವಿಧಾನಾತ್ಮಕ, ಸ್ವಾಭಿಮಾನದ ನಮ್ಮ ಮತದಾನದ ಹಕ್ಕನ್ನು ಸುಭದ್ರ ಸರ್ಕಾರ ನಿರ್ಮಿಸಲು ಪ್ರತಿಯೊಬ್ಬರು ತಮ್ಮ ಮತವನ್ನು ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಚಲಾಯಿಸಿ ಪ್ರತಿಶತ 100 ರಷ್ಟು ಮತದಾನ ಎಲ್ಲ ಮತ ಕೇಂದ್ರಗಳಲ್ಲಿ ಕಡ್ಡಾಯ ಮತದಾನ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ ತಾಲೂಕಾಆಡಳಿತ ತಾಲೂಕ ಸ್ವೀಪ ಸಮಿತಿ ಚಿಕ್ಕೋಡಿ ಸಹಯೋಗದಲ್ಲಿ ತಾಲೂಕು ಪಂಚಾಯತಿ ಆವರಣದಲ್ಲಿ ಸೋಮವಾರ ಮತದಾನ ಜಾಗೃತಿ ಬೀದಿ ನಾಟಕ ಕಲಾತಂಡಗಳ ಪ್ರದರ್ಶನಕ್ಕೆ ವಾದ್ಯ ನುಡಿಸಿ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಕಲಾತಂಡಗಳ ವಿನೂತನ ಪ್ರಯೋಗದಿಂದ ಈ ಹಿಂದೆ ಯಾವ ಕೇಂದ್ರಗಳಲ್ಲಿ ಮತದಾನ ಕಡಿಮೆ ಆಗಿದೆ ಅಂತವುಗಳನ್ನು ಗುರುತಿಸಿ ಬೀದನಾಟಕ ತಂಡಗಳಿಂದ ಮತದಾನ ಜಾಗೃತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಡಾ. ಕೃಷ್ಣರಾಜ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತಿ ಬೆಳಗಾವಿ ಲೆಕ್ಕಧಿಕಾರಿಗಳಾದ ಗಂಗಾ ಹೀರೆಮಠ ಐಯುಸಿ ಸಂಜೋಜಕರಾದ ಪ್ರಮೋದ ಗೊಡೇಕರ ಉಪಸ್ಥಿತರಿದ್ದರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಭರತ ಕಲಾಚಂದ್ರ, ರಾಮಚಂದ್ರ ಕಾಂಬಳೆ ಉಪಸ್ಥಿತರಿದ್ದರು.

ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಮತದಾನ ಪ್ರತಿಜ್ಞಾನ ವಿಧಿ ಬೋಧಿಸಿದರು. ರಂಗದರ್ಶನ ಕಲಾತಂಡ ಧುಳಗನವಾಡಿ, ಡಾ.ಅಂಬೇಡ್ಕರ್‌ ಕಲಾತಂಡ ಚಿಂಚಲಿ ತಂಡದವರು ನಮ್ಮ ಮತ ಮಾರಾಟಕ್ಕಿಲ್ಲ ಬೀದಿನಾಟಕ ಜಾಗೃತಿ ಹಾಡುಗಳ ಮೂಲಕ ಸಾರ್ವಜನಿಕರಿಗೆ ಮನ ಮುಟ್ಟುವಂತೆ ಕಲಾಪ್ರದರ್ಶನ ನೀಡಿ ಸಮುದಾಯಕ್ಕೆ ಅರಿವು ಮೂಡಿಸಿದರು. ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣ, ಅಂಬೇಡ್ಕರ್‌ ನಗರ ಬಸವ ಸರ್ಕಲ್‌ನಲ್ಲಿ ಬೀದಿನಾಟಕ ಮೂಲಕ ಪ್ರದರ್ಶನ ನೀಡಿದರು.