ಸಾರಾಂಶ
ಎಸ್.ಆರ್.ಎಸ್ ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು ವಿವಿಧ ಆಕೃತಿಯ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ವೈವಿಧ್ಯಮಯ ವಸ್ತುಗಳಾದ ಜೇಡಿಮಣ್ಣು, ವಿವಿಧ ಬಗೆಯ ಕಾಳುಗಳು, ಧಾನ್ಯಗಳು, ವಿವಿಧ ಸಸ್ಯ ಮತ್ತು ಮರಗಳ ಎಲೆಗಳು, ಅನುಪಯುಕ್ತ ಕಾಗದಗಳು, ಕೊಬ್ಬರಿ, ವಿವಿಧ ತರಕಾರಿ ಹಾಗೂ ಹಣ್ಣುಗಳ ಸಿಪ್ಪೆಗಳು ಮತ್ತು ಇತರೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಸುಮಾರು ೪೦೦ಕ್ಕೂ ಹೆಚ್ಚು ವಿವಿಧ ಮಾದರಿಯ ಗಣೇಶನ ಮೂರ್ತಿಗಳನ್ನು ತಮ್ಮಲ್ಲಿರುವ ಕೌಶಲ್ಯದ ಮೂಲಕ ಸೃಜನಾತ್ಮಕವಾಗಿ ತಯಾರಿಸಿ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಗಣೇಶನ ಮೂರ್ತಿಗಳನ್ನು ಶಾಲಾ ಸಭಾಂಗಣದಲ್ಲಿ ಅಲಂಕಾರಿಕವಾಗಿ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿ ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಗಣೇಶ ಚತುರ್ಥಿಯನ್ನು ವಿನೂತನವಾಗಿ ಆಚರಿಸಲಾಯಿತು.ಶಾಲೆಯ ನರ್ಸರಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳು ವಿವಿಧ ಆಕೃತಿಯ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ವೈವಿಧ್ಯಮಯ ವಸ್ತುಗಳಾದ ಜೇಡಿಮಣ್ಣು, ವಿವಿಧ ಬಗೆಯ ಕಾಳುಗಳು, ಧಾನ್ಯಗಳು, ವಿವಿಧ ಸಸ್ಯ ಮತ್ತು ಮರಗಳ ಎಲೆಗಳು, ಅನುಪಯುಕ್ತ ಕಾಗದಗಳು, ಕೊಬ್ಬರಿ, ವಿವಿಧ ತರಕಾರಿ ಹಾಗೂ ಹಣ್ಣುಗಳ ಸಿಪ್ಪೆಗಳು ಮತ್ತು ಇತರೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಸುಮಾರು ೪೦೦ಕ್ಕೂ ಹೆಚ್ಚು ವಿವಿಧ ಮಾದರಿಯ ಗಣೇಶನ ಮೂರ್ತಿಗಳನ್ನು ತಮ್ಮಲ್ಲಿರುವ ಕೌಶಲ್ಯದ ಮೂಲಕ ಸೃಜನಾತ್ಮಕವಾಗಿ ತಯಾರಿಸಿ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಈ ರೀತಿ ತಯಾರು ಮಾಡಿದ ಗಣೇಶನ ಮೂರ್ತಿಗಳನ್ನು ಶಾಲಾ ಸಭಾಂಗಣದಲ್ಲಿ ಅಲಂಕಾರಿಕವಾಗಿ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿ ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಹಾಗೂ ಪೋಷಕರು ಕುತೂಹಲದಿಂದ ವೀಕ್ಷಿಸಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರದರ್ಶನವನ್ನು ಅರ್ಥಪೂರ್ಣಗೊಳಿಸಿದರು.ಇದು ವಿದ್ಯಾರ್ಥಿಗಳ ಪ್ರತಿಭಾ ಕೌಶಲ್ಯವನ್ನು ಗುರುತಿಸಿ ಪ್ರೋತ್ಸಾಹಿಸಲು ಒಂದು ಉತ್ತಮ ವೇದಿಕೆಯಾಯಿತು. ವಿದ್ಯಾರ್ಥಿಗಳು ತಾವೇ ಸ್ವತಃ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ತಯಾರಿಸುವ ಮೂಲಕ ತಾವು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಇತರರಲ್ಲಿಯೂ ಸಹ ಪರಿಸರ ಸಂರಕ್ಷಣೆಯ ಅರಿವು ಮೂಡಿಸಿದರು.