ಸಾರಾಂಶ
ಮಕ್ಕಿ ಶ್ರೀ ಶಾಸ್ತವು ದೇವಾಲಯದಲ್ಲಿ ಏಕಾದಶರುದ್ರ ವಿಶೇಷ ಪೂಜೆ ನೆರವೇರಿತು. ತೀರ್ಥ ಪ್ರಸಾದ ವಿತರಣೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತ್ರವು ದೇವಾಲಯದಲ್ಲಿ ಊರು, ನಾಡಿನ ಸುಭಿಕ್ಷೆಗಾಗಿ ಏಕಾದಶ ರುದ್ರವಿಶೇಷ ಪೂಜೆಯನ್ನು ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಗಿನಿಂದಲೇ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಜರುಗಿ ಮಧ್ಯಾಹ್ನ ಮಹಾಪೂಜೆ ಜರುಗಿ ಬಳಿಕ ತೀರ್ಥ ಪ್ರಸಾದ ವಿತರಣೆ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಈ ವಿಶೇಷ ಪೂಜಾ ಕಾರ್ಯವನ್ನು ಅರ್ಚಕರಾದ ಗುತ್ತಿಗಾರಿನ ಶಿವಸುಬ್ರಹ್ಮಣ್ಯ ಜೋಯಿಸ, ಪೈಚಾರಿನ ಸುಬ್ರಮಣ್ಯ ಭಟ್, ಕಲ್ಮಡ್ಕದ ಅರುಣ್ ಶಂಕರ್ ಭಟ್, ದೇವಾಲಯದ ಮುಖ್ಯ ಅರ್ಚಕ ದಿವಾಕರ ಏಕಾದಶ ರುದ್ರವನ್ನು ನೆರವೇರಿಸಿದರು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ದೇವಾಲಯದ, ಆಡಳಿತ ಮಂಡಳಿ ಪದಾಧಿಕಾರಿಗಳು, ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.