ಲೋಹಿಯಾ, ಅರಸು ಸಿದ್ಧಾಂತಗಳ ಅಳವಡಿಸಿಕೊಂಡು, ನಾಲ್ಕು ದಶಕಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಲ್ಯಾಧಾರಿತ, ಭ್ರಷ್ಟಾಚಾರರಹಿತ ರಾಜಕಾರಣ

| Published : Aug 11 2024, 01:41 AM IST / Updated: Aug 11 2024, 01:10 PM IST

ಲೋಹಿಯಾ, ಅರಸು ಸಿದ್ಧಾಂತಗಳ ಅಳವಡಿಸಿಕೊಂಡು, ನಾಲ್ಕು ದಶಕಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಲ್ಯಾಧಾರಿತ, ಭ್ರಷ್ಟಾಚಾರರಹಿತ ರಾಜಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಲೋಹಿಯಾ, ಅರಸು ಸಿದ್ಧಾಂತಗಳ ಅಳವಡಿಸಿಕೊಂಡು, ನಾಲ್ಕು ದಶಕಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಲ್ಯಾಧಾರಿತ, ಭ್ರಷ್ಟಾಚಾರರಹಿತ ರಾಜಕಾರಣ ಮಾಡುತ್ತಿದ್ದಾರೆ. ಒಂದು ಕಪ್ಪು ಚುಕ್ಕೆಯೂ ಇಲ್ಲದಂತೆ ಸ್ವಚ್ಛ ರಾಜಕಾರಣ ಮಾಡುತ್ತಿದ್ದಾರೆ.  

 ದಾವಣಗೆರೆ :  ಲೋಹಿಯಾ, ಅರಸು ಸಿದ್ಧಾಂತಗಳ ಅಳವಡಿಸಿಕೊಂಡು, ನಾಲ್ಕು ದಶಕಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಲ್ಯಾಧಾರಿತ, ಭ್ರಷ್ಟಾಚಾರರಹಿತ ರಾಜಕಾರಣ ಮಾಡುತ್ತಿದ್ದಾರೆ. ಒಂದು ಕಪ್ಪು ಚುಕ್ಕೆಯೂ ಇಲ್ಲದಂತೆ ಸ್ವಚ್ಛ ರಾಜಕಾರಣ ಮಾಡುತ್ತಿದ್ದಾರೆ. ಅವರ ವಿರುದ್ಧ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು ರಾಜಕೀಯ ದುರುದ್ದೇಶದ ಪಾದಯಾತ್ರೆ ನಡೆಸಿದ್ದಾರೆ ಎಂದು ಸ್ವಾಭಿಮಾನಿ ಬಳಗದ ಜಿ.ಬಿ. ವಿನಯಕುಮಾರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಹಿಂದ ನಾಯಕರಾಗಿದ್ದು, ಈ ವರ್ಗದ ಜನರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ರೂಪಿಸುತ್ತಿದ್ದಾರೆ. ಇಂತಹ ರಾಜಕಾರಣಿ ಸಿಗುವುದೇ ಅತಿ ವಿರಳ. ಸದ್ಯದ ಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ಅಪರಾಧ ಹಿನ್ನೆಲೆ ಉಳ್ಳವರು ಹಾಗೂ ಭ್ರಷ್ಟಾಚಾರ ಮಾಡುವವರೇ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಇಂಥವರು ನೆಲೆ ನಿಲ್ಲಲು ಕಾಂಗ್ರೆಸ್ ಅತಿ ದೊಡ್ಡ ಶಕ್ತಿಯಾದ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು, ರಾಜಕೀಯವಾಗಿ ತುಳಿಯಲು ಯತ್ನಿಸುತ್ತಿದ್ದಾರೆ. ಇಡೀ ರಾಜ್ಯದ ಜನತೆಗೂ ಸಿಎಂ ಸಿದ್ದರಾಮಯ್ಯ ಸ್ವಚ್ಛ ರಾಜಕಾರಣದ ಬಗ್ಗೆ ಸಂಪೂರ್ಣ ಅರಿವು ಇದೆ ಎಂದು ಅವರು ವಿವರಿಸಿದರು.

ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ನಾಲ್ಕು ರ್ಯಾಲಿಗಳನ್ನು ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದರು. ಬೇರೆ ಕ್ಷೇತ್ರಕ್ಕಿಂತ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಗೆಲುವಿಗೆ ಸಿದ್ದರಾಮಯ್ಯ ಒತ್ತು ನೀಡಿದ್ದರು. ಈಗ ವಿಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ, ಹಗರಣದ ಆರೋಪವನ್ನು ವಿಪಕ್ಷಗಳು ಮಾಡಿ, ಪಾದಯಾತ್ರೆ ಕೈಗೊಂಡಿದ್ದರೂ ಸಿಎಂ ಪರವಾಗಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನರಾಗಲೀ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಾಗಲೀ ಧ್ವನಿ ಎತ್ತದಿರುವುದು ವಿಷಾದದ ಸಂಗತಿ ಎಂದರು.

ಸ್ವಾಭಿಮಾನಿ ಬಳಗದ ಪುರಂದರ ಲೋಕಿಕೆರೆ, ಅಯ್ಯಣ್ಣ, ಸಾದಿಕ್‌, ಶರತಕುಮಾರ ಇತರರು ಇದ್ದರು.

ಸಿಎಂ ವಿರುದ್ಧ ಶಾಸಕ, ಸಂಸದೆ ನಿರ್ಲಕ್ಷ್ಯ ಧೋರಣೆದಾವಣಗೆರೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎನ್ನುವುದಕ್ಕಿಂತಲೂ ಪಕ್ಷೇತರ ಅಭ್ಯರ್ಥಿಯಾಗಿದ್ದ ನನ್ನ ವಿರುದ್ಧವೇ ಹೆಚ್ಚು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರ ಗೆಲುವಿಗೆ ಸಿದ್ದರಾಮಯ್ಯ ಕಾರಣರಾಗಿದ್ದರು. ಅದೇ ಸಿದ್ದರಾಮಯ್ಯ ಪರ ಲೋಕಸಭೆಯಲ್ಲಿ ಧ್ವನಿ ಎತ್ತಿ, ರಾಜ್ಯಪಾಲರ ನಡೆಯನ್ನು ಸಂಸದರು ಖಂಡಿಸಬೇಕಾಗಿತ್ತು. ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಸಹ ಬಿಜೆಪಿ, ಜೆಡಿಎಸ್ ನಾಯಕರ ವರ್ತನೆ ವಿರುದ್ಧ ಮಾತನಾಡಬಹುದಿತ್ತು. ಆದರೆ, ಈ ಇಬ್ಬರೂ ಜನಪ್ರತಿನಿಧಿಗಳು ಮಾತನಾಡದೇ ಇರುವುದು ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತದೆ ಎಂದ ಅವರು, ಸದ್ಯಕ್ಕೆ ನಾನು ಯಾವುದೇ ಪಕ್ಷದಲ್ಲೂ ಇಲ್ಲ. ನಾನಿರುವುದು ಸ್ವಾಭಿಮಾನಿ ಬಳಗದಲ್ಲಿ. ಅಹಿಂದ ವರ್ಗದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಜಿ.ಬಿ.ವಿನಯಕುಮಾರ್‌ ತಿಳಿಸಿದರು.