ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಮಹಾ ಶಿವಶರಣೆಯಾಗಿ ಬದುಕಿದ್ದ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶಗಳು ಸ್ತ್ರೀ ಕುಲಕ್ಕೆ ಬಹುದೊಡ್ಡ ಕಾಣಿಕೆ. ಅವಳ ತತ್ವ ಆದರ್ಶಗಳು ನಮಗೆಲ್ಲರಿಗೂ ಮಾದರಿ ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ಅಭಿಪ್ರಾಯಪಟ್ಟರು.

ಇತ್ತೀಚೆಗೆ ರಬಕವಿ-ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಹೇಮರಡ್ಡಿ ಮಲ್ಲಮ್ಮರ ಜಯಂತ್ಯುತ್ಸವದಲ್ಲಿ ಭಾವಚತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಮಲ್ಲಮ್ಮ ತಮ್ಮ ಜೀವನಪೂರ್ತಿ ಅನೇಕ ಕಷ್ಟ ನೋವು ಬೇರೆಯವರಿಂದ ಕಂಡರೂ ಅವರಿಗೆ ಹಿತ ಬಯಸಿದ ಮಹಾನ್ ಶರಣೆ. ಮಲ್ಲಿಕಾರ್ಜುನ ದೇವರಿಂದ ವಿಶೇಷ ವರ ಪಡೆದ ಮಲ್ಲಮ್ಮ ಸಂಪತ್ತಿನ ಬಗ್ಗೆ ಅಹಃ ಬೇಡ. ದಾನ ಗುಣವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ಅವರ ಮಹತ್ವದ ಸಂದೇಶವಾಗಿತ್ತು ಎಂದರು.ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಎಸ್.ಎಲ್. ಕಾಗಿಯವರ, ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ, ಗ್ರಾಮ ಲೆಕ್ಕಾಧಿಕಾರಿ ಸದಾಶಿವ ಕುಂಬಾರ, ಸಮಾಜದ ಮುಖಂಡರಾದ ವೆಂಕಟೇಶ ನಿಂಗಸಾನಿ, ಸಿದ್ದಪ್ಪ ಮೇಣಿ, ಭೀಮಶಿ ಮಗದುಮ್ಮ, ಮಹಾದೇವ ಕೋಟ್ಯಾಳ, ಚೇತನ ಭಜಂತ್ರಿ, ಪ್ರಕಾಶ ವಂದಾಲ ಸೇರಿದಂತೆ ಅನೇಕರು ಹಾಜರಿದ್ದರು.