ಸಾರಾಂಶ
ಪಟ್ಟಣದ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ ₹29.84 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಪಟ್ಟಣದ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ ₹29.84 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹೇಳಿದರು.ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸಂಘದ ಪ್ರಗತಿಗೆ ಆಡಳಿತ ಹಾಗೂ ಸದಸ್ಯರ ವಿಶ್ವಾಸವೇ ಕಾರಣವಾಗಿದೆ. ಈ ವರ್ಷದ ಲಾಭಾಂಶದಲ್ಲಿ ಶೇ.20ರಷ್ಟು ಹಣವನ್ನು ಸದಸ್ಯರಿಗೆ ನೀಡಲಾಗುವುದು ತಿಳಿಸಿದರು.
ಮುಖ್ಯ ಅತಿಥಿ ಡಾ.ನಾಗೇಂದ್ರ ಪಟ್ಟಣಶೆಟ್ಟಿ ಮಾತನಾಡಿ, ಜನರು ಹೂಡಿದ ಹಣ ದುಡಿಸುವ ಹೊಣೆ ಹೊತ್ತು ಹಣಕಾಸು ವಹಿವಾಟು ನಡೆಸುವ ಸಂಘವೂ ಬಹಳಷ್ಟು ಜವಾಬ್ದಾರಿ ಮತ್ತು ಒತ್ತಡದಿಂದ ಕೂಡಿರುತ್ತದೆ. ಈ ನಿಟ್ಟಿನಲ್ಲಿ ಸಂಘದ ಆಡಳಿತ ಮಂಡಳಿ ಕಳೆದೆರಡು ದಶಕಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದರು. ವ್ಯವಸ್ಥಾಪಕಿ ಕಲ್ಪನಾ ಮನ್ನಿಕೇರಿ ವಾರ್ಷಿಕ ವರದಿ ಮಂಡಿಸಿದರು.ವೈದ್ಯ ಡಾ.ನಾಗೇಂದ್ರ ಪಟ್ಟಣಶೆಟ್ಟಿ, ಕನ್ನಡ ಸಾಹಿತಿ ಡಾ.ಗುರುಪಾದ ಮರಿಗುದ್ದಿಯನ್ನು ಸತ್ಕರಿಸಲಾಯಿತು. ಸತತ 20 ವರ್ಷ ಆಡಿಟ್ ಸೇವೆ ಸಲ್ಲಿಸಿದ ಮೊತಿಲಾಲ ಜಕಾತಿ ಮತ್ತು ಸಂಘದ ಸಾಲ ಪಡೆದು ಸದುಪಯೋಗ ಪಡಿಸಿಕೊಂಡ ಪ್ರವೀಣ ಉಜಗಾಂವಕರ ಯಶಸ್ವಿ ಗ್ರಾಹಕರೆಂದು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಕೇಶ್ವರದ ಸರ್ಕಾರಿ ಬಾಲಕಿಯರ ವಸತಿ ನಿಲಯಕ್ಕೆ ಸುಮಾರು ಮೂರು ತಿಂಗಳಿಗೆ ಆಗುವಷ್ಟು ಸೆನಿಟರಿ ಪ್ಯಾಡ್‌ಗಳನ್ನು ನೀಡಲಾಯಿತು.ಸಂಘದ ಉಪಾಧ್ಯಕ್ಷ ಡಾ.ವಿನೋದ ಗಾಯಕವಾಡ, ನಿರ್ದೇಶಕರಾದ ಸುನೀಲ ಒತಾರೆ, ಪ್ರಶಾಂತ ಗಡಕರಿ, ಶರ್ವಾಣಿ ಆಂಗಡಿ, ರೇಖಾ ಪಟ್ಟಣಶೆಟ್ಟಿ, ಫರವಿನ್ ಕಲಾವಂತ, ವಿಶ್ವನಾಥ ರಾಣವಗೋಳ, ಮುನ್ನಾ ಪಟ್ಟಣಶೆಟ್ಟಿ ಇತರರು ಇದ್ದರು. ಅಜಯ ಅಂಗಡಿ ಸ್ವಾಗತಿಸಿದರು. ಸುನೀಲ ಒತಾರೆ ವಂದಿಸಿದರು.