ಮಲ್ಪೆ: ಏಪ್ರಿಲ್ 20ರಂದು ಕಲ್ಕೂರ ಬೀಚ್‌ ಉತ್ಸವ, ಪ್ರಶಸ್ತಿ ಪ್ರದಾನ

| Published : Apr 17 2025, 12:02 AM IST

ಸಾರಾಂಶ

ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಮೆಂಟ್ಸ್ ಸಂಸ್ಥೆಯು ಯಶಸ್ವಿಯಾಗಿ 40 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು, ಹಿತೈಷಿಗಳು, ಸಿಬ್ಬಂದಿ, ಸಾಮಾಗ್ರಿ ಪೂರೈಕೆದಾರರಿಗೆ ಕೃತಜ್ಞತೆ ಸಲ್ಲಿಸುವ ಕಲ್ಕೂರ ಬೀಚ್ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 20ರಂದು ಮಲ್ಪೆ ಬೀಚ್‌ನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಖ್ಯಾತ ಗೃಹೋಪಯೋಗಿ ಪರಿಕರಗಳನ್ನು ಉತ್ಪಾದಿಸುವ ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಮೆಂಟ್ಸ್ ಸಂಸ್ಥೆಯು ಯಶಸ್ವಿಯಾಗಿ 40 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು, ಹಿತೈಷಿಗಳು, ಸಿಬ್ಬಂದಿ, ಸಾಮಾಗ್ರಿ ಪೂರೈಕೆದಾರರಿಗೆ ಕೃತಜ್ಞತೆ ಸಲ್ಲಿಸುವ ಕಲ್ಕೂರ ಬೀಚ್ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 20ರಂದು ಮಲ್ಪೆ ಬೀಚ್‌ನಲ್ಲಿ ನಡೆಯಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮಾಲೀಕ ರಂಜನ್ ಕಲ್ಕೂರ, ಸಂಸ್ಥೆಯ 40 ನೇ ವರ್ಷಾಚರಣೆ ಅಂಗವಾಗಿ, ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ 5 ಅಪಾರ್ಟ್ಮೆಂಟ್‌ಗಳಿಗೆ ಮನೆಯ ಒಳಗಿನ ಇಂಟಿರೀಯರ್ಸ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 75 ಪ್ರಶಸ್ತಿಗಳನ್ನು ಘೊಷಿಸಿದ್ದು, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ತರಾನಾ ಸಂಗೀತ ತಂಡದವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಅಂದು ಸಂಜೆ 4 ರಿಂದ 10 ರವರೆಗೆ ಬೀಚ್‌ನಲ್ಲಿ ನಡೆಯುವ ವೈವವಿಧ್ಯಮಯ ಕಾರ್ಯಕ್ರಮಗಳಲ್ಲಿ ಶಾಸಕರು, ಸಂಸದರು, ಗ್ರಾಹಕರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಒಟ್ಟು 60 ಜನ ಅತಿಥಿಗಳು ಭಾಗವಹಿಲಿದ್ದಾರೆ. ಸುಮಾರು 15 ಸಾವಿರ ಜನಕ್ಕೆ ಆಹಾರೋಪಚಾರದ ವ್ಯವಸ್ಥೆ ಮಾಡಲಾಗುವುದು ಎಂದರು

ರಂಜನ್ ಕಲ್ಕೂರ ಅವರ ಪುತ್ರ ಆರ್ಕಿಟೆಕ್ಟ್ ರಾಹುಲ್ ಕಲ್ಕೂರ ಮಾತನಾಡಿ, ತಮ್ಮ ಮುತ್ತಜ್ಜ ತೊಟ್ಟಿಲು ಸುಬ್ರಾಯರ ಲೋಹದ ತೊಟ್ಟಿಲುಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದರು, ಅವರ ಮಗ ಗೋಪಾಲಕೃಷ್ಣ ಕಲ್ಕೂರರು ಒಂದು ಹೆಜ್ಜೆ ಮುಂದೆ ಹೋಗಿ ಅಡುಗೆ ಸಲಕರಣೆಗಳ ತಯಾರಿಕೆಯಲ್ಲಿ ಹೆಸರು ಪಡೆದಿದ್ದರು. ಅವರ ಮೊಮ್ಮಗ, ತಮ್ಮ ತಂದೆ ರಂಜನ್ ಕಲ್ಕೂರ ಅವರು ತಮ್ಮ 20ನೇ ವರ್ಷದಿಂದಲೇ ರೆಫ್ರಿಜರೇಶನ್ ಮತ್ತು ಕಿಚನ್ ಎಕ್ವಿಪ್‌ಮೆಂಟ್ಸ್‌ನಲ್ಲಿ ನಾಡಿನಾದ್ಯಂತ ಖ್ಯಾತರಾಗಿದ್ದಾರೆ, ಅವರ 60 ನೇ ವರ್ಷವನ್ನು ಪೂರೈಸುತಿದ್ದು, ಷಷ್ಟ್ಯಬ್ದಿಪೂರ್ತಿ ಶಾಂತಿ ಸಮಾರಂಭ ಇದೇ ವೇದಿಕೆಯಲ್ಲಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಿರಿಯ ಪುತ್ರ ರುಶಾಲ್ ಕಲ್ಕೂರ, ಸಹೋದರ ಹರೀಶ್ ಕಲ್ಕೂರ, ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್, ಕಾರ್ಯದರ್ಶಿ ರಾಜೇಶ್ ಪಣಿಯಾಡಿ ಇದ್ದರು.