ಟಿಪ್ಪರ್ ಲಾರಿ ಹರಿದು ವ್ಯಕ್ತಿ ಸಾವು: ಗ್ರಾಪಂ ಮುಂದೆ ಶವವಿಟ್ಟು ಪ್ರತಿಭಟನೆ

| Published : Oct 01 2025, 01:00 AM IST

ಟಿಪ್ಪರ್ ಲಾರಿ ಹರಿದು ವ್ಯಕ್ತಿ ಸಾವು: ಗ್ರಾಪಂ ಮುಂದೆ ಶವವಿಟ್ಟು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಂಪುರ ಹೋಬಳಿಯ ನರಸೀಪುರ ಗ್ರಾಮದ ಹನುಮಂತರಾಜು (38) ಮೃತಪಟ್ಟ ದುರ್ದೈವಿ, ಖಾಸಗಿ ಶಾಲೆಯ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಟಿಪ್ಪರ್ ಲಾರಿಯ ಚಕ್ರ ಹರಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗ್ರಾಪಂ ಮುಂದೆ ಮೃತಪಟ್ಟ ವ್ಯಕ್ತಿಯವನ್ನಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಟಿಪ್ಪರ್ ಲಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸೋಂಪುರ ಹೋಬಳಿಯ ನರಸೀಪುರ ಗ್ರಾಮದ ಹನುಮಂತರಾಜು (38) ಮೃತಪಟ್ಟ ದುರ್ದೈವಿ, ಖಾಸಗಿ ಶಾಲೆಯ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದರು.ಘಟನಾ ವಿವರ:

ಸೆ. 29ರಂದು ಸಂಜೆ ಸುಮಾರು 6.30 ಗಂಟೆಯ ಸಮಯದಲ್ಲಿ ಮೃತ ವ್ಯಕ್ತಿ ತನ್ನ ಪತ್ನಿಯನ್ನು ಕೆಲಸದಿಂದ ಕರೆದುಕೊಂಡು ಜೊತೆ ದ್ವಿಚಕ್ರ ವಾಹನದಲ್ಲಿ ದಾಬಸ್‍ಪೇಟೆಯಿಂದ ನರಸೀಪುರ ಗ್ರಾಮಕ್ಕೆ ಬರುವಾಗ ಮಾದೇನಹಳ್ಳಿ ಗ್ರಾಮದ ಸಮೀಪ ನರಸೀಪುರ ಕಡೆಯಿಂದ ಬಂದ ಯಮಸ್ವರೂಪಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರ ವ್ಯಕ್ತಿ ಮೇಲೆ ಹರಿದು ಮೃತದೇಹ ವಿಧ್ರವಾಗಿದ್ದು, ಮೃತನ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗ್ರಾ.ಪಂ.ಮುಂದೆ ಶವವಿಟ್ಟು ಪ್ರತಿಭಟನೆ:

ಮಾಕೇನಹಳ್ಳಿಯಿಂದ ದಾಬಸ್‍ಪೇಟೆಗೆ ಅತಿವೇಗವಾಗಿ ಟಿಪ್ಪರ್ ಲಾರಿಗಳು ಚಲಿಸುತ್ತವೆ. ಈ ದುರ್ಘಟನೆಯೂ ಟಿಪ್ಪರ್ ಲಾರಿಯ ಅತಿವೇಗದಿಂದ ಈ ಘಟನೆ ನಡೆದಿದ್ದು, ಟಿಪ್ಪರ್ ಲಾರಿಗಳನ್ನು ನಿಯಮಗಳನ್ನು ಪಾಲಿಸುತ್ತಿಲ್ಲ. ಟಿಪ್ಪರ್ ಲಾರಿಗಳ ಮೇಲೆ ನೀವು ಸೂಕ್ತ ಕ್ರಮವನ್ನು ವಹಿಸಬೇಕು ಎಂದು ಆಗ್ರಹಿಸಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಗ್ರಾ.ಪಂ.ಮುಂದೆ ಶವವಿಟ್ಟು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ತಿಂಗಳಲ್ಲಿ 4 ಜನರ ಸಾವು : ಟಿಪ್ಪರ್ ಲಾರಿಗಳ ಅತಿ ವೇಗದಿಂದ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೆ, ಕಳೆದ ಒಂದು ತಿಂಗಳಲ್ಲಿ ಸುಮಾರು ನಾಲ್ಕು ಜನರು ಈ ಯಮರೂಪದ ಟಿಪ್ಪರ್ ಲಾರಿಗೆ ಬಲಿಯಾಗಿದ್ದಾರೆ.

ನಿಯಮ ಪಾಲಿಸದಿದ್ರೆ ಶಿಸ್ತು ಕ್ರಮ:

ಕ್ರಷರ್‌ಗಳಲ್ಲಿ ಟಿಪ್ಪರ್ ಲಾರಿಗಳಿಗೆ ಅಗತ್ಯಕ್ಕಿಂರ ಹೆಚ್ಚು ಟನ್ ಸಾಮಗ್ರಿಗಳನ್ನು ತುಂಬುವುದಾಗಲಿ, ಟಾರ್ಪಲ್ ಹಾಕದೆ ಕ್ರಷರ್ ನಿಂದ ಹೊರಗೆ ಬಂದರೆ ಅಂತಹ ಲಾರಿಗಳ ವಿರುದ್ಧ ಕಾನೂನು ಕ್ರಮ ವಹಿಸುತ್ತೇವೆ. ಇನ್ನೂ ಮುಂದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಬೆಳಗ್ಗೆ ಹಾಗೂ ಸಂಜೆ ವೇಳೆ ಈ ರಸ್ತೆಯಲ್ಲಿ ವಾಹನ ಸಂಖ್ಯೆ ಹೆಚ್ಚಳವಿರುವುದರಿಂದ ಟಿಪ್ಪರ್ ಲಾರಿಗಳು ಚಲಿಸುವಂತಿಲ್ಲ ಎಂದು ದಾಬಸ್‍ಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ರಾಜು ಎಚ್ಚರಿಕೆ ನೀಡಿದ್ದಲ್ಲದೆ ಅಗತ್ಯವಿರುವ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಗೂ ಬ್ರೇಕ್ ಹಂಪ್ಸ್‌ಗಳನ್ನು ಹಾಕಿಸಲಾಗುತ್ತದೆ ಎಂದರು.ಪೋಟೋ 4 : ಅಪಘಾತದಲ್ಲಿ ಮೃತಪಟ್ಟ ಹನುಮಂತರಾಜುಪೋಟೋ 5 : ನರಸೀಪುರ ಗ್ರಾ.ಪಂ.ಮುಂದೆ ಶವವಿಟ್ಟು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.