ಮಾದಪ್ಪನ ಬೆಟ್ಟಕ್ಕೆ ಹೊರಟಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸಾವು

| Published : Oct 05 2025, 01:00 AM IST

ಮಾದಪ್ಪನ ಬೆಟ್ಟಕ್ಕೆ ಹೊರಟಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ 24 ಮಂದಿ ಎರಡು ಎತ್ತಿನ ಗಾಡಿಗಳ ಸಮೇತ ಗುಂಡ್ಲುಪೇಟೆ ಗ್ರಾಮದ ನಿಟ್ರೆ ಗ್ರಾಮದಿಂದ ಸೋಮವಾರ ತೆರಳಿತ್ತು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಯರಿಯೂರು ಗ್ರಾಮದ ಬಳಿ ಶನಿವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಒಬ್ಬರಿಗೆ ತೀವೃವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ 24 ಮಂದಿ ಎರಡು ಎತ್ತಿನ ಗಾಡಿಗಳ ಸಮೇತ ಗುಂಡ್ಲುಪೇಟೆ ಗ್ರಾಮದ ನಿಟ್ರೆ ಗ್ರಾಮದಿಂದ ಸೋಮವಾರ ತೆರಳಿತ್ತು. ಇವರು ಯಳಂದೂರು ಪಟ್ಟಣದಲ್ಲಿ ರಾತ್ರಿ ತಂಗಿ ಮತ್ತೆ ಬೆಳಗಿನ ಜಾವ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ತಾಲೂಕಿನ ಯರಿಯೂರು ಗ್ರಾಮದ ಬಳಿ ಅಪರಿಚಿತ ಕಾರು ಇವರಿಗೆ ಡಿಕ್ಕಿ ಹೊಡೆದಿದ್ದು. ನಿಟ್ರೆ ಗ್ರಾಮದ ಸಿದ್ದರಾಜು (34) ಸ್ಥಳದಲ್ಲೆ ಮೃತಪಟ್ಟರೆ ಮಲ್ಲೇಶ್ ಎಂಬುವರಿಗೆ ತಲೆಗೆ ತೀವ್ರ ಪೆಟ್ಟಾಗಿದೆ. ಇವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಸಿಮ್ಸ್‌ಗೆ ದಾಖಲಿಸಿ, ಅಲ್ಲಿಂದ ಮೈಸೂರಿಗೆ ಕರೆದೊಯ್ಯಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ವಹಿಸಲಾಗಿದೆ. ೦೪ವೈಎಲ್‌ಡಿ ಚಿತ್ರ೦೧ಸಿದ್ದರಾಜು (೩೪)