ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರದಲ್ಲಿ ಪ್ರತಿ ದಿನ ೧೫ ರಿಂದ ೨೦ ಮಕ್ಕಳು ನಾಯಿ ಕಡಿತಕ್ಕೆ ಒಳಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೂ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗುತ್ತಿಲ್ಲ.ಕಳೆದ ಆರು ತಿಂಗಳಲ್ಲಿ ಕೆಜಿಎಫ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಒಳಗಾಗಿರುವವರ ಸಂಖ್ಯೆ, ಜನವರಿ-೫೪೪, ಪೆಬ್ರವರಿ-೩೮೧, ಮಾರ್ಚ್-೪೭೩, ಏಪ್ರಿಲ್-೫೦೫, ಮೇ-೫೨೧, ಜೂನ್-೫೨೫, ನಾಯಿ ಕಡಿತಕ್ಕೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆದುಕೊಂಡಿರುವವರು, ಇದರಲ್ಲಿ ಬಹುತೇಕ ಮಕ್ಕಳ ಸಂಖ್ಯೆ ಹೆಚ್ಚು, ಮಹಿಳೆಯರು, ವೃದ್ದರು ಸಹ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ.ಜಿಲ್ಲಾಧಿಕಾರಿಗೆ ಒತ್ತಾಯ
ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಬೇಕಿದೆ, ಪುಟ್ಟ ಮಕ್ಕಳು ಕೈಯಲ್ಲಿ ಬಿಸ್ಕತ್ತು ಬ್ರೆಡ್ ಹಿಡಿದು ಹೋಗುವಂತಿಲ್ಲ, ಮಹಿಳೆಯರು ವೃದ್ಧರ ಕೈಯಲ್ಲಿ ಕೈ ಚೀಲವಿದ್ದರೆ ಎಚ್ಚರವಾಗಿರಬೇಕು, ಸ್ವಲ್ಪ ಎಚ್ಚರ ತಪ್ಪಿದರೂ ಬೀದಿ ನಾಯಿಗಳು ದಾಳಿ ಮಾಡುವುದು ಗ್ಯಾರಂಟಿ. ನಗರದಲ್ಲಿ ನಾಯಿಗಳ ಹಾವಳಿಯಿಂದ ನಗರದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ನಗರದಲ್ಲಿ ಆರು ಸಾವಿರ ಬೀದಿನಾಯಿಕೆಜಿಎಫ್‌ನ ಅಂಡ್ರಸನ್ ಪೇಟೆ, ರಾಬರ್ಟ್‌ಸನ್ ಪೇಟೆ, ಉರಿಗಾಂಪೇಟೆ, ಸ್ವರ್ಣನಗರ, ಉರಿಗಾಂ, ಎಂ.ಜಿ.ಮಾರುಕಟ್ಟೆ, ಗೀತಾರಸ್ತೆ, ಪಿಚ್ಚರ್ಡ್‌ರಸ್ತೆ, ವಿವೇವಕನಗರ, ಗೌತಮ್ ನಗರ ಚಾಂಫಿಯನ್‌ರೀಫ್, ಮಾರಿಕುಪ್ಪಂ, ಚಿನ್ನದ ಗಣಿಗಳಮ ಪ್ರದೇಶಗಳ ಬಡಾವಣೆಗಳು ಸೇರಿದಂತೆ ಅನೇಕ ಬೀದಿಗಳಲ್ಲಿ ೬ ಸಾವಿರಕ್ಕೂ ಹೆಚ್ಚು ನಾಯಿಗಳು ಇದ್ದು, ಪ್ರತಿ ದಿನ ವಾಹನ ಸಾವರರಿಗೆ, ಬೀದಿಯಲ್ಲಿ ಓಡಾಡುವ ವೃದ್ದರು, ಶಾಲಾ ಮಕ್ಕಳಿಗೆ ಬೀದಿ ನಾಯಿಗಳ ಕಾಟ ತಪ್ಪಿಲ್ಲ, ನಾಯಿಗಳ ಹಾವಳಿ ಎಲ್ಲಿ ಹೆಚ್ಚು:ನಗರದಲ್ಲಿ ಚಿಕನ್ ಅಂಗಡಿಗಳು, ಕಬಾಬ್ ಅಂಗಡಿ, ಧನದ ಮಾಂಸ ಮಾರಾಟ ಮಾಡುವ ೩೦೦ಕ್ಕೂ ಹೆಚ್ಚು ಅಂಗಡಿಗಳು ಇದ್ದು, ನಗರದ ಬಹುತೇಕ ಬಡಾವಣೆಗಳ ಸಾರ್ವಜಿನಕ ಸ್ಥಳಗಳಲ್ಲಿ ಮಾರಾಟ ಮಾಡುವುದರಿಂದ ಮಾಂಸದ ತ್ಯಾಜ್ಯಕ್ಕೆ ನಾಯಿಗಳ ಹಿಂಡು ಮುಗಿಬಿಳ್ಳುತ್ತವೆ, ಇನ್ನೂ ಅಂಗಡಿಗಳಲ್ಲಿ ಚಿಕನ್, ಮಟನ್ ಮಾಂಸದ ತ್ಯಾಜ್ಯ ಅಂಗಡಿ ಮಾಲೀಕರು ರಸ್ತೆಯ ಬದಿಗಳಲ್ಲಿ ಸುರಿಯುವುದರಿಂದ ರಸ್ತೆಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಓಡಾಡಲು ತುಂಬಾ ತೊಂದರೆ ಉಂಟಾಗಿದೆ.ಕೋಟ್ನಗರಸಭೆ ವ್ಯಾಪ್ತಿಯಲ್ಲಿ ಎಬಿಸಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಈಗಾಗಲೇ ೬೦೦ ಕ್ಕೂ ಹೆಚ್ಚು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬೀದಿ ನಾಯಿಗಳ ಹಾವಳಿ ತಡೆಗಟ್ಟಲಾಗುವುದು.- ಪವನ್‌ಕುಮಾರ್, ನಗರಸಭೆ ಪೌರಾಯುಕ್ತ.