ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ೨೦೨೪-೨೫ನೇ ಸಾಲಿನ ನಗರಸಭೆ ಬಜೆಟ್ ಮಂಡನೆಯಾಗಿದ್ದು, ೧೦೧,೫೫,೫೫,೦೩೭ ರು. ಹಣದಲ್ಲಿ ಹಿಂದಿನ ಸಾಲಿನ ಮುಂದುವರಿದ ಕಾಮಗಾರಿಯೂ ಸೇರಿದಂತೆ ಪ್ರಸಕ್ತ ಸಾಲಿನ ನೌಕರರ ವೇತನ ನಿರ್ವಹಣಾ ವೆಚ್ಚ ಮತ್ತು ಬಂಡವಾಳ ಕಾಮಗಾರಿಗಳ ೯೮,೭೮,೭೯,೦೦೦ ರು. ಅಂದಾಜು ವೆಚ್ಚ ಮಾಡುವ ನಿರೀಕ್ಷೆಯೊಂದಿಗೆ ೨,೭೬,೭೬,೩೭ ಉಳಿತಾಯ ಬಜೆಟ್‌ನ್ನು ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ಮಂಡಿಸಿದರು.
ಸೋಮವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ೨೦೨೪-೨೫ನೇ ಸಾಲಿನ ಅಂದಾಜು ಆಯ-ವ್ಯಯ ಮಂಡಿಸಿ, ಆರಂಭಿಕ ಶಿಲ್ಕು ೧೯.೨೬ ಲಕ್ಷ ರು., ೨೦೨೪-೨೫ನೇ ಸಾಲಿಗೆ ನಗರಸಭೆ ಸ್ವಂತ ಸಂಪನ್ಮೂಲಗಳಿಂದ ನಿರೀಕ್ಷಿತ ಆದಾಯ ೨೨.೫೭ ಕೋಟಿ ರು., ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳು ಮತ್ತು ಕರಗಳ ಬಾಬ್ತು ೮.೮೬ ಕೋಟಿ ಹಾಗೂ ಸರ್ಕಾರದಿಂದ ನಿರೀಕ್ಷಿತ ಅನುದಾನಗಳು ೫೦.೮೫ ಕೋಟಿ ರು. ಸೇರಿ ಒಟ್ಟು ೧೦೧.೫೫ ಕೋಟಿ ರು. ಹಾಗೂ ೯೮.೭೮ ಕೋಟಿಯ ಅಂದಾಜು ವೆಚ್ಚವಾಗುವುದಾಗಿ ತಿಳಿಸಿದರು.ನಗರಸಭೆಗೆ ಸ್ವಂತ ಸಂಪನ್ಮೂಲಗಳಿಂದ ಮತ್ತು ಸರ್ಕಾರದಿಂದ ಬರಬಹುದಾದ ಅನುದಾನಗಳ ಸೇರಿದಂತೆ ಪ್ರಮುಖ ಆದಾಯಗಳೆಂದರೆ ಆಸ್ತಿ, ತೆರಿಗೆ, ದಂಡ, ಕರಗಳ ಸಂಗ್ರಹಣ ಶುಲ್ಕದಿಂದ ೧,೫೦೦ ಲಕ್ಷ ರು., ಅಭಿವೃದ್ಧಿ ಮತ್ತು ಬೆಟರ್ಮೆಂಟ್ ಶುಲ್ಕಗಳ ಸಂಗ್ರಹಣೆಯಿಂದ ೧೬೦ ಲಕ್ಷ ರು., ಘನ ತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ ಸಂಗ್ರಹಣೆಯಿಂದ ೧೫೦ ಲಕ್ಷ ರು., ಮಳಿಗೆಗಳ ಠೇವಣಿ, ಬಾಡಿಗೆ ಮತ್ತು ದಂಡ ವಸೂಲಿನ ಸಂಗ್ರಹಣೆಯಿಂದ ೧೦೪.೮೫ ಲಕ್ಷ ರು., ಒಳಚರಂಡಿ ಸಂಪರ್ಕ ಮತ್ತು ಬಳಕೆಗದಾರರ ಶುಲ್ಕ ಸಂಗ್ರಹಣೆಯಿಂದ ೫೨.೮೦ ಲಕ್ಷ ರು., ಉದ್ದಿಮೆ ಪರವಾನಗಿ ಶುಲ್ಕ ಮತ್ತು ಉದ್ದಿಮೆ ಪರವಾನಗಿ ಮೇಲಿನ ದಂಡ ಸಂಗ್ರಹಣೆಯಿಂದ ೫೧.೫೦ ಲಕ್ಷ ರು., ಅನುಪಯುಕ್ತ ವಸ್ತುಗಳ ಮಾರಾಟದಿಂದ ೪೦ ಲಕ್ಷ ರು., ರಸ್ತೆ ಅಗೆತ ಮತ್ತು ಪುನಃಸ್ತಾಪನೆ ಶುಲ್ಕ ಸಂಗ್ರಹಣೆಯಿಂದ ೩೩ ಲಕ್ಷ ರು., ಖಾತಾ ಬದಲಾವಣೆ ಶುಲ್ಕ ಸಂಗ್ರಹಣೆಯಿಂದ ೩೦ ಲಕ್ಷ ರು.
ನಗರಸಭೆ ವಸತಿ ಗೃಹಗಳು ಹಾಗೂ ನಗರಸಭೆ ಹಳೇ ಕಚೇರಿ ಕಟ್ಟಡ ಬಾಡಿಗೆಯಿಂದ ೨೫ ಲಕ್ಷ ರು., ಕಟ್ಟಡ ಪರವಾನಗಿ ಶುಲ್ಕ ಸಂಗ್ರಹಣೆಯಿಂದ ೩೨.೬೦ ಲಕ್ಷ ರು., ರಾಜ್ಯ ಸರ್ಕಾರದಿಂದ ಸಂಗ್ರಹಿಸಲ್ಟಟ್ಟ ಸ್ಟ್ಯಾಂಪ್ ಶುಲ್ಕದ ಸರ್ಚಾರ್ಜ್‌ನಿಂದ ೧೨ ಲಕ್ಷ ರು., ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿ ಸಂಗ್ರಹಣೆಯಿಂದ ೨೫ ಲಕ್ಷ ರು., ಜಾಹೀರಾತು ಶುಲ್ಕದಿಂದ ೬.೫೦ ಲಕ್ಷ ರು., ಸಾರ್ವಜನಿಕ ಶೌಚಾಲಯ ನಿರ್ವಹಣೆ ಶುಲ್ಕದಿಂದ ೫ ಲಕ್ಷ ರು., ಆಸ್ತಿ ತೆರಿಗೆಯೊಂದಿಗೆ ವಸೂಲಿಸಲಾಗುವ ಕರಘಳು, ಗುತ್ತಿಗೆದಾರರು, ಸರಬರಾಜುದಾರರು ಹಾಗೂ ನೌಕರರ ವೇತನದ ಕಟಾವಣೆಗಳಿಂದ ೮೮೬.೪೦ ಲಕ್ಷ ರು., ಎಸ್‌ಎಫ್‌ಸಿ ವಿದ್ಯುತ್ ಅನುದಾನದಿಂದ ೧೬೨೮ ಲಕ್ಷ ರು., ಎಸ್‌ಎಫ್‌ಸಿ ವೇತನ ಅನುದಾನ ಹಾಗೂ ಪಿಂಚಣಿ ವಂತಿಕೆ ಅನುದಾನ ೮೬೮ ಲಕ್ಷ ರು., ೧೫ನೇ ಹಣಕಾಸಿನ ಯೋಜನೆಯ ಅನುದಾನ ೫೯೧ ಲಕ್ಷ ರು.ತ್ಯಾಜ್ಯ ವಿಲೇವಾರಿಗೊಳಿಸಲು ಸರ್ಕಾರದಿಂದ ಬರುವ ಅನುದಾನ ೪೯೬.೨೪ ಲಕ್ಷ ರು., ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ೨೦೭ ಲಕ್ಷ ರು., ಎಸ್‌ಎಫ್‌ಸಿ ವಿಶೇಷ ಅನುದಾನ ೧೦೦೦ ಲಕ್ಷ ರು., ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಅನುದಾನ ೨೩೭.೯೦ ಲಕ್ಷ ರು., ಸ್ವಚ್ಚ ಕಲಿಕಾ ಗೃಹ ಕೇಂದ್ರ ನಿರ್ಮಾಣ ಅನುದಾನ ೩೦ ಲಕ್ಷ ರು., ಎಸ್‌ಎಫ್‌ಸಿ ಕುಡಿಯುವ ನೀರು ಅನುದಾನ ೧೦ ಲಕ್ಷ ರು.. ಸ್ವಚ್ಚ ಭಾರತ ಮಿಷನ್ ೧.೦ ಯೋಜನೆಯಡಿ ಐಸಿಸಿ ಚಟುವಟಿಕೆಗಳಿಗಾಗಿ ಸರ್ಕಾರದಿಂದ ಬರುವ ಅನುದಾನ ೭ ಲಕ್ಷ ರು.
ಶಾಸಕ ಪಿ.ರವಿಕುಮಾರ್‌ಗೌಡ, ನಗರಸಭೆ ಆಯುಕ್ತ ಮಂಜುನಾಥ್ ಭಾಗವಹಿಸಿದ್ದರು.ಸರ್ಕಾರದ ಅನುದಾನ, ಪ್ರಮುಖ ವೆಚ್ಚಗಳು:
ನಗರಸಭೆ ವ್ಯಾಪ್ತಿಯಲ್ಲಿ ೧೫ನೇ ಹಣಕಾಸು, ಎಸ್‌ಎಫ್‌ಸಿ ಮುಕ್ತನಿಧಿ, ಎಸ್‌ಎಫ್‌ಸಿ ವಿಶೇಷ ಅನುದಾನ ಮತ್ತು ನಗರಸಭೆ ಮತ್ತು ನಗರಸಭಾ ನಿಧಿ ಅನುದಾನಗಳಲ್ಲಿ ರಸ್ತೆಗಳು, ಕಲ್ಲು ಹಾಸುಗಳು ಮತ್ತು ಪಾದಚಾರಿ ಮಾರ್ಗಗಳು, ಮಲೆ ನೀರು ಚರಂಡಿಗಳು, ಸೇತುವೆಗಳು ಮತ್ತು ಇತರೆ ಸ್ಥಿರಾಸ್ಥಿಗಳ ಕಾಮಗಾರಿಗಳಿಗಾಗಿ ೧೭೮೬ ಲಕ್ಷ ರು. ಮೀಸಲಿರಿಸಲಾಗಿದೆ.ಒಳಚರಂಡಿ ಮಾರ್ಗಗಳು ಹಾಗೂ ಮೆಷಿನರಿಗಳ ದುರಸ್ಥಿ, ನಿರ್ವಹಣೆ ಮತ್ತು ನಿರ್ಮಾಣ ಕಾಮಗಾರಿಗಳಿಗೆ ೪೪೦ ಲಕ್ಷ ರು., ಕಚೇರಿಯ ವಾಹನಗಳು ಹಾಗೂ ಯಂತ್ರೋಪರಣಗಳ ದುರಸ್ಥಿ, ನಿರ್ವಹಣೆ ಮತ್ತು ನಿರ್ಮಾಣ ಕಾಮಗಾರಿಗಳಿಗಾಗಿ ೪೪೦ ಲಕ್ಷ ರು. ಇತರೆ ೧೯೯ ಲಕ್ಷ ರು., ವೃತ್ತಗಳು ಮತ್ತು ರಸ್ತೆಗಳಿಗೆ ನಾಮಫಲಕಗಳ ಅಳವಡಿಕೆ ಹಾಗೂ ಡಿಜಿಟಲ್ ಡಿಸ್ ಪ್ಲೇ ಬೋರ್ಡ್ ಅಳವಡಿಕೆಗಾಗಿ ೯೬ ಲಕ್ಷ ರು., ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಬಾಕಿ ಬಿಲ್ಲು ಪಾವತಿಗಾಗಿ ಹಾಗೂ ಅವಶ್ಯವಿರುವ ಬಾಕಿ ಕಾಮಗಾರಿಗಳಿಗೆ ೨೦೦ ಲಕ್ಷ ರು. ಕಾಯ್ದಿರಿಸಲಾಗಿದೆ.
ನೀರು ಸರಬರಾಜು ವ್ಯವಸ್ಥೆ ಕಾಮಗಾರಿಗಳಿಗೆ ೩೦೫ ಲಕ್ಷ ರು., ಗಿಡ ನೆಡಲು, ರಕ್ಷಣೆ ಮಾಡಲು ೧೦ ಲಕ್ಷ ರು., ರಾಷ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ, ನಗರಸಭೆ ಸದಸ್ಯರ ಗೌರವಧನ, ಪ್ರವಾಸ ಕಾರ್ಯಕ್ರಮ ಹಾಗೂ ಇತರೆ ವೆಚ್ಚಗಳಿಗಾಗಿ ೬೦ ಲಕ್ಷ ರು., ಬೀದಿದೀಪಗಳ ನಿರ್ವಹಣೆ ಮತ್ತು ಹೊಸ ಬೀದಿದೀಪಗಳ ಅಳವಡಿಕೆಗಾಗಿ ೨೨೦.೨೫ ಲಕ್ಷ ರು., ಉದ್ಯಾನವನಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ, ಲಘು ವ್ಯಾಯಾಮ ಸಾಧನಗಳನ್ನು ಮತ್ತು ಮಕ್ಕಳ ಆಟಿಕೆಗಳನ್ನು ಅಳವಡಿಸಲು ೧೫೦ ಲಕ್ಷ ರು., ಸ್ಮಶಾನಗಳ ಅಭಿವೃದ್ಧಿಗೆ ೭೫ ಲಕ್ಷ ರು., ನಗರಸಭೆಯ ನೌಕರರ ವೇತನ, ಭತ್ಯೆಗಳು ಮತ್ತು ಇತರೆ ಭತ್ಯೆಗಳಿಗಾಗಿ ೧೦೮೦ ಲಕ್ಷ ರು., ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿಗೆ ೩೦೫ ಲಕ್ಷ, ಕಟ್ಟಡ ದುರಸ್ತಿ ಮತ್ತು ನಿರ್ವಹಣೆ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ೮೦ ಲಕ್ಷ ರು., ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ೩೪೩.೪೪ ಲಕ್ಷ ರು., ಎಸ್ಸಿ,ಎಸ್ಟಿ ಹಾಗೂ ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ೧೦೨.೯೦ ಲಕ್ಷ ರು.. ಆರೋಗ್ಯ ಶಾಳೆಗೆ ತ್ಯಾಜ್ಯ ವಿಲೇವಾರಿ ಮಾಡಲು ಹಾಗೂ ಒಳಚರಂಡಿ ನಿರ್ವಹಣೆ ಮಾಡಲು ವಾಹನಗಳು ಮತ್ತು ಯಂತ್ರೋಪರಣಗಳ ಖರೀದಿಗಾಗಿ ಹಾಗೂ ತ್ಯಾಜ್ಯ ನೀರು ಮರು ಬಳಕೆ ಕಾಮಗಾರಿಗಾಗಿ ೪೦೦ ಲಕ್ಷ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.