ಮಂಗಳೂರು: ಕೊರಗ ಸಮುದಾಯಕ್ಕೆ 2008ರಿಂದ ಭೂಮಿ ನೀಡುವ ಪ್ರಕ್ರಿಯೆ ಆರಂಭಗೊಂಡ ಖುಷಿಯಲ್ಲಿ ಕೊರಗರು ಆ.18ರಂದು ಭೂಮಿ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದಾರೆ. ಮಂಗಳೂರು ಕೋಡಿಕಲ್‌ನ ಕುದ್ಮುಲ್‌ ರಂಗರಾವ್‌ ಕೊರಗ ಸಮುದಾಯ ಭವನದಲ್ಲಿ ದ.ಕ. ಜಿಲ್ಲಾ ಕೊರಗರ ಸಂಘ, ಕೊರಗ ಅಭಿವೃದ್ಧಿ ಸಂಘಗಳ ನೇತೃತ್ವದಲ್ಲಿ ಮಂಗಳವಾರ ಭೂಮಿ ಹಬ್ಬ ಆಚರಣೆ ನಡೆಯಿತು.

ಕೇಂದ್ರ ಸರ್ಕಾರವು ಗುರುತಿಸಿರುವ ಅತೀ ದುರ್ಬಲ ಹಾಗೂ ಅಳಿವಿನಂಚಿನಲ್ಲಿರುವ ಬುಡಕಟ್ಟು ಜನಾಂಗಗಳಲ್ಲಿ ರಾಜ್ಯದಲ್ಲಿ ಜೇನುಕುರುಬ ಮತ್ತು ಕೊರಗ ಸಮುದಾಯಗಳು ಸೇರಿವೆ. ಈ ಸಮುದಾಯಗಳ ಹಿತದೃಷ್ಟಿಯಿಂದ ಜೇನುಕುರುಬ ಮತ್ತು ಕೊರಗ ಸಂಘಗಳ ಒಕ್ಕೂಟವೆಂಬ ರಾಜ್ಯ ಸಂಘವನ್ನು ಸ್ಥಾಪಿಸಲಾಗಿದೆ.

ಉಡುಪಿ ಜಿಲ್ಲಾ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕುಡುಪ ಸಟ್ಚರಿಪೇಟೆ ಧ್ವಜಾರೋಹಣ ನೆರವೇರಿಸಿದರು. ಕುಂದಾಪುರದ ಸುಮಂಗಲಾ ಮದುವನ ಚಳವಳಿಯ ಸಾಕ್ಷ್ಯ ಪ್ರತೀಕಕ್ಕೆ ಪುಷ್ಪಾರ್ಚನೆಗೈದರು. ಗಿರಿಜಾ ದೀಪ ಬೆಳಗಿಸಿದರು. ಕೊರಗ ಸಮುದಾಯದ ಪ್ರಮುಖ ಸಂಪ್ರದಾಯವಾದ ಸಿಹಿ ಜೇನು ಹಂಚುವ ಮೂಲಕ ಪುತ್ತೂರಿನ ತನಿಯಾರು ಕೌಡಿಚಾರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮುದಾಯದ ಹಿರಿಯ ನಾರಾಯಣ ಕರಿಮಣ್ಣು ಸಸಿ ನಾಟಿ ಮಾಡಿದರು.

ಸಂಘದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಎಂ.ಸುಂದರ ಬೆಳುವಾಯಿ, ಸಂಘದ ಉಪಾಧ್ಯಕ್ಷ ರಾಜಪ್ಪ ಜೆ.ಕೆ., ಜೇನುಕುರುಬ ಸಮುದಾಯದ ಮುಖಂಡ ಜಿ.ಕೆ. ಬಸವ, ಸಂಘದ ರಾಜ್ಯ ಕಾರ್ಯದರ್ಶಿ ಮನೋಜ್‌ ಕೋಡಿಕಲ್‌ ಇದ್ದರು.ಸಹನಾ ಸ್ವಾಗತಿಸಿದರು. ಕೊಗ್ಗ ರಮೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣ್ಣಿ ವಂದಿಸಿದರು. ರಮೇಶ್‌ ಗುಂಡಾವು ನಿರ್ವಹಿಸಿದರು.