ಮಣಿಪಾಲ್‌ ‘ಕಾರ್ಡಿಯಾಲಜಿ ಅಪ್ಡೇಟ್‌ 2024’ ಸಮ್ಮೇಳನ ಸಂಪನ್ನ

| Published : Dec 16 2024, 12:46 AM IST

ಸಾರಾಂಶ

ಮಣಿಪಾಲ ಕೆ.ಎಂ.ಸಿ.ಯ ಹೃದ್ರೋಗ ವಿಭಾಗ ಮತ್ತು ಹೃದಯ ರಕ್ತನಾಳದ ತಂತ್ರಜ್ಞಾನ ವಿಭಾಗ (ಸಿ.ವಿ.ಟಿ.), ಮಣಿಪಾಲ್ ಕಾಲೇಜ್‌ ಆಫ್‌ ಹೆಲ್ತ್ ಪ್ರೋಫೆಶನ್ಸ್‌ ಜೊತೆಯಾಗಿ 15ನೇ ವರ್ಷದ ಕ್ರಿಸ್ಟಲ್ ಜುಬಿಲಿಯಂಗವಾಗಿ ಮಣಿಪಾಲ್ ಕಾರ್ಡಿಯಾಲಜಿ ಅಪ್ಡೇಟ್ - 2024 ಸಮ್ಮೇಳನ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ ಕೆ.ಎಂ.ಸಿ.ಯ ಹೃದ್ರೋಗ ವಿಭಾಗ ಮತ್ತು ಹೃದಯ ರಕ್ತನಾಳದ ತಂತ್ರಜ್ಞಾನ ವಿಭಾಗ (ಸಿ.ವಿ.ಟಿ.), ಮಣಿಪಾಲ್ ಕಾಲೇಜ್‌ ಆಫ್‌ ಹೆಲ್ತ್ ಪ್ರೋಫೆಶನ್ಸ್‌ ಜೊತೆಯಾಗಿ 15ನೇ ವರ್ಷದ ಕ್ರಿಸ್ಟಲ್ ಜುಬಿಲಿಯಂಗವಾಗಿ ಮಣಿಪಾಲ್ ಕಾರ್ಡಿಯಾಲಜಿ ಅಪ್ಡೇಟ್ - 2024 ಸಮ್ಮೇಳನ ಆಯೋಜಿಸಿತ್ತು.

ಪ್ರತೀ ವರ್ಷ ಒಂದು ವಿಷಯದ ಮೇಲೆ ನಡೆಯುವ ಈ ಸಮ್ಮೇಳನದ ಈ ವರ್ಷ ‘ಹೃದಯ ವೈಫಲ್ಯ’ ವಿಷಯ ಆರಿಸಿಕೊಳ್ಳಲಾಗಿತ್ತು. ದೇಶದ ಪ್ರತಿಷ್ಠಿತ ಸಂಸ್ಥೆಗಳ ಪ್ರಖ್ಯಾತ ಸಂಪನ್ಮೂಲ ವ್ಯಕ್ತಿಗಳು ಈ ವಿಷಯದ ವಿವಿಧ ಅಂಶಗಳ ಕುರಿತು ಭಾಷಣಗಳನ್ನು ನೀಡಿದರು.

ಮಾಹೆಯ ಸಂಸ್ಥಾಪಕ ಡಾ.ಟಿ.ಎಂ.ಎ ಪೈ ಮತ್ತು ಇತ್ತೀಚೆಗೆ ನಿಧನರಾದ ಆಸ್ಪತ್ರೆಯ ಹೃದ್ರೋಗ ವಿಭಾಗದ ಸ್ಥಾಪಕ ಮುಖ್ಯಸ್ಥ ದಿ.ಡಾ.ಎಸ್.ಜಿ.ಎಸ್.ಪ್ರಭು ಅವರಿಗೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಸಮ್ಮೇಳನ ಆರಂಭವಾಯಿತು.

ಯುವ ವಿಜ್ಞಾನಿಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ಸಮ್ಮೇಳನವು ಪೇಪರ್ ಮತ್ತು ಪೋಸ್ಟರ್ ಪ್ರಸ್ತುತಿಗಳನ್ನು ಒಳಗೊಂಡಿತ್ತು, ಉತ್ತಮ ಪ್ರಸ್ತುತಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೃದ್ರೋಗಶಾಸ್ತ್ರದ ರಸಪ್ರಶ್ನೆ ಆಯೋಜಿಸಲಾಗಿತ್ತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಂ.ಸಿ. ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ ಹಾಜರಿದ್ದರು. ಸಂಘಟನಾ ಮುಖ್ಯಸ್ಥ, ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಡಾ.ಕನ್ಹಯ್ಯ ಲಾಲನಿ ವಂದಿಸಿದರು. ಮತ್ತೋರ್ವ ಸಂಘಟನಾ ಕಾರ್ಯದರ್ಶಿ ಡಾ.ಕೃಷ್ಣಾನಂದ ನಾಯಕ್, ಪ್ರಮುಖ ಹೃದ್ರೋಗ ತಜ್ಞರಾದ ಡಾ.ವಿಜಯಲಕ್ಷ್ಮಿ, ಡಾ.ವಿ.ಎಸ್.ಪ್ರಕಾಶ್, ಡಾ.ಪ್ರಭಾವತಿ, ಡಾ.ಬಿ.ವಿ.ಮಂಜುನಾಥ್, ಡಾ.ಸುಬ್ರಮಣ್ಯಂ ಇದ್ದರು.