ಡಿಕೆ ರವಿ ಸಮಾಧಿಗೆ ಮುನಿರತ್ನ ಪೂಜೆ

| Published : Mar 18 2025, 12:36 AM IST

ಸಾರಾಂಶ

ರಾಜ್ಯದ ದಕ್ಷ ಜಿಲ್ಲಾಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಡಿಕೆ ರವಿ ಸತ್ತು 10 ವರ್ಷ ಆಗಿದೆ ಅವರ ಸಮಾಧಿಗೆ ಶಾಸಕ ಮುನಿರತ್ನ ಸೇರಿದಂತೆ ಬಹುತೇಕ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಶಾಸಕ ಮುನಿರತ್ನ ಡಿಕೆ ಸಮಾಧಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ಕುಣಿಗಲ್ ರಾಜ್ಯದ ದಕ್ಷ ಜಿಲ್ಲಾಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಡಿಕೆ ರವಿ ಸತ್ತು 10 ವರ್ಷ ಆಗಿದೆ ಅವರ ಸಮಾಧಿಗೆ ಶಾಸಕ ಮುನಿರತ್ನ ಸೇರಿದಂತೆ ಬಹುತೇಕ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಶಾಸಕ ಮುನಿರತ್ನ ಡಿಕೆ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿ ಡಿಕೆ ಸಮಾಧಿ ವೇಳೆಯಲ್ಲಿ ಡಿಕೆ ಶಿವಕುಮಾರ್ ಜೊತೆ ನಾನು ಬಂದಿದ್ದೆ ಆ ಕುಟುಂಬಸ್ಥರನ್ನು ನಾನು ಕಣ್ಣಾರ ಕಂಡಿದ್ದೇನೆ. ಬಿಜೆಪಿಯಿಂದ ಸಚಿವರಾದ ಮೇಲೆ ಡಿಕೆ ರವಿ ಬಗ್ಗೆ ಕೋಲಾರದಲ್ಲಿ ಹೆಚ್ಚು ಹೆಚ್ಚು ತಿಳಿದಿದ್ದೇನೆ ನಂತರ ನಾನು ಅವರ ಅಭಿಮಾನಿಯಾಗಿ ಈ ದಿನ ಬಂದು ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದೇನೆ ನಾನು ಕಂಡಂತೆ ಹಿಂದಿನ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಅಂದಿನ ಗೃಹ ಸಚಿವ ಜಾರ್ಜ್ ಎಲ್ಲರಿಂದಲೂ ಡಿಕೆ ಕುಟುಂಬಕ್ಕೆ ಯಾವುದೇ ಸಹಾಯ ಆಗಿಲ್ಲ ಈ ಸಂಬಂಧ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆದಿದ್ದನ್ನು ನಾನು ಕಂಡಿದ್ದೇನೆ ಆ ಭಗವಂತ ಆ ಕುಟುಂಬಕ್ಕೆ ನೋವು ಮರೆಸುವ ಶಕ್ತಿ ನೀಡಲಿ ಎಂದರು.