ಸಾರಾಂಶ
ನರಸಿಂಹರಾಜಪುರ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಆದ್ದರಿಂದ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು ಎಂದು ಕೊಪ್ಪ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನುಗ್ಗಿ ಮಂಜುನಾಥ್ ಕರೆ ನೀಡಿದರು.
ತಲಮಕ್ಕಿ (ಕುದುರೆಗುಂಡಿ) ಸರ್ಕಾರಿ ಶಾಲೆಯಲ್ಲಿ ಕೊಪ್ಪ ತಾಲೂಕು ಮಟ್ಟದ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಆದ್ದರಿಂದ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು ಎಂದು ಕೊಪ್ಪ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನುಗ್ಗಿ ಮಂಜುನಾಥ್ ಕರೆ ನೀಡಿದರು.
ಶುಕ್ರವಾರ ಕುದುರೆಗುಂಡಿ ತಲಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೊಪ್ಪ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕುದುರೆಗುಂಡಿಯ ತಲಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಭೂತ ಸೌಕರ್ಯ ಹಾಗೂ ನೂತನ ಕಟ್ಟಡಕ್ಕೆ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಟಿ.ಡಿ. ರಾಜೇಗೌಡ ಭರವಸೆ ನೀಡಿದ್ದಾರೆ.ಕ್ರೀಡೆ ನಮ್ಮ ಜೀವನದ ಅವಿಬಾಜ್ಯ ಅಂಗವಾಗಿರಬೇಕು. ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದರು.
ಕ್ರೀಡಾ ಜ್ಯೋತಿ ಸ್ವೀಕಾರ ಮಾಡಿದ ಕೊಪ್ಪ ಕೃಷಿ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಎಚ್.ಎಲ್.ದೀಪಕ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಪ್ರಾಥಮಿಕ ಶಾಲಾ ಹಂತದಿಂದಲೇ ಕ್ರೀಡೆಯನ್ನು ಅಭ್ಯಾಸ ಮಾಡಿದರೆ ಮುಂದೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದು. 140 ಕೋಟಿ ಜನ ಸಂಖ್ಯೆ ಇರುವ ಭಾರತ ದೇಶ ಒಲಂಪಿಕ್ ನಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಿಲ್ಲ. ಸರ್ಕಾರ ಕ್ರೀಡೆ ತರಬೇತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಮೋಹನ್ ಗೌಡ, ರಾಷ್ಟ ಮಟ್ಟದ ಕ್ರೀಡಾ ಪಟು ಅನಿಸಾ ಡಿ ಸೋಜ, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ರಾಜಕುಮಾರ್, ಕ್ರೀಡಾ ತರಬೇತಿದಾರ ಸುನೀರನ್ನು ಸನ್ಮಾನಿಸಲಾಯಿತು.
ಬಿಂತ್ರವಳ್ಳಿ ಗ್ರಾಪಂ ಅಧ್ಯಕ್ಷೆ ವಿದ್ಯಾ ಚಂದ್ರಶೇಖರ್ ಉದ್ಘಾಟಿಸಿದರು. ತಲಮಕ್ಕಿ ಶಾಲೆ ಎಸ್ ಡಿಎಂಸಿ ಅಧ್ಯಕ್ಷೆ ದೀಪ್ತಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷ ಕೆ.ಎಸ್.ಗಣೇಶ್, ಸದಸ್ಯರಾದ ಹೇಮಂತ್ ಕುಮಾರ್, ಕವಿತ, ಅಂಬಿಕ, ಭಾಸ್ಕರ್, ಪ್ರತಾಪ್, ಅರುಣಕುಮಾರ್, ಎ.ಮ್ಯಾಥ್ಯೂ, ಗ್ರೆಟ್ಟಾ ವಿ ಲೋಬೋ, ಸುನೀತ, ಅಮೀನ, ಜಯಂತಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಟಿ. ವೆಂಕಟೇಶ್,ಕೊಪ್ಪ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ, ಕೊಪ್ಪ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿ.ರಾಜೇಂದ್ರ, ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಎ.ಡಿಕಾಸ್ಠಾ, ಕೆಡಿಪಿ ಸದಸ್ಯರಾದ ಅಶೋಕ್, ಪ್ರಿಯಾಂಕ,ರಾಜಶೇಖರ್, ಸಿ.ಆರ್.ಪಿ ರುದ್ರಸ್ವಾಮಿ, ಕೊಪ್ಪ ತಾಲೂಕು ಕಸಾಪ ಹೋಬಳಿ ಅಧ್ಯಕ್ಷ ಹೇಮಂತ್, ಕುದುರೆಗುಂಡಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಧನಂಜಯ ಮೇಧೂರ, ನಾರ್ವೆ ಅಶೋಕ್, ಉಪನ್ಯಾಸಕ ಸುದೀಪ್ ಮುಂತಾದವರಿದ್ದರು.