ಸಾರಾಂಶ
ಪ್ರತಿವಾರವೂ ಪರಿಸರ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನಡೆಸುತ್ತಾ ಇತರ ಸಂಸ್ಥೆಗಳಿಗೆ ಮಾದರಿಯಾಗಿರುವ ಇಲ್ಲಿನ ಕೋಟದ ಪ್ರತಿಷ್ಠಿತ ಪಂಚವರ್ಣ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಮನೋಹರ ಪೂಜಾರಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಟ
ಪ್ರತಿವಾರವೂ ಪರಿಸರ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನಡೆಸುತ್ತಾ ಇತರ ಸಂಸ್ಥೆಗಳಿಗೆ ಮಾದರಿಯಾಗಿರುವ ಇಲ್ಲಿನ ಕೋಟದ ಪ್ರತಿಷ್ಠಿತ ಪಂಚವರ್ಣ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಮನೋಹರ ಪೂಜಾರಿ ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ಕೋಟದ ಪಂಚವರ್ಣ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಉಳಿದಂತೆ ಗೌರವಾಧ್ಯಕ್ಷರಾಗಿ ಸತೀಶ್ ಎಚ್. ಕುಂದರ್, ಸ್ಥಾಪಾಕಾಧ್ಯಕ್ಷರು ಶೇವಧಿ ಸುರೇಶ್ ಗಾಣಿಗ, ಸಲಹಾ ಸಮಿತಿ ಅಧ್ಯಕ್ಷರಾಗಿ ರವೀಂದ್ರ ಕೋಟ, ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಕುಮಾರ್ ಕೋಟ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಕಾಂಚನ್, ಉಪಾಧ್ಯಕ್ಷರಾಗಿ ಸಂತೋಷ್ ಪೂಜಾರಿ, ದಿನೇಶ್ ಆಚಾರ್ ಮಣೂರು, ಸಂಚಾಲಕರಾಗಿ ಅಮೃತ್ ಜೋಗಿ, ಕೋಶಾಧಿಕಾರಿಯಾಗಿ ನಾಗರಾಜ್ ಪೂಜಾರಿ, ಕಾರ್ಯಾಧ್ಯಕ್ಷರಾಗಿ ಶಶಿಧರ ಪಡುಕರೆ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಆರ್. ಗಿರೀಶ್ ಆಚಾರ್, ಶಿಸ್ತು ಸಮಿತಿ ಅಧ್ಯಕ್ಷರಾಗಿ ಅಜಿತ್ ಆಚಾರ್, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ, ಮಹೇಶ್ ಬೆಳಗಾವಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಕಾಸನಗುಂದು, ಕಾರ್ತಿಕ್ ಆಚಾರ್, ಸಂದೇಶ್ ಆಚಾರ್ ಆಯ್ಕೆಯಾಗಿದ್ದಾರೆ.