ಶ್ರೀರಾಮನ ಮಂತ್ರಾಕ್ಷತೆ, ರಾಮಮಂದಿರ ಭಾವಚಿತ್ರ ವಿತರಣೆ

| Published : Jan 03 2024, 01:45 AM IST

ಸಾರಾಂಶ

ಬಸವನಬಾಗೇವಾಡಿ: ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಬಸವಜನ್ಮ ಸ್ಮಾರಕ ಮುಂಭಾಗದಲ್ಲಿ ಪಂಚಾಕ್ಷರಿ ಕಾಳಹಸ್ತೇಶ್ವರಮಠದ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ರಾಮ ಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಬಸವಜನ್ಮ ಸ್ಮಾರಕ ಮುಂಭಾಗದಲ್ಲಿ ಪಂಚಾಕ್ಷರಿ ಕಾಳಹಸ್ತೇಶ್ವರಮಠದ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಆರ್.ಎಸ್.ಎಸ್ ಜಿಲ್ಲಾ ಘಟಕದ ಸೇವಾ ಪ್ರಮುಖ ಡಾ.ಬಸವರಾಜ ಚವ್ಹಾಣ ಮಾತನಾಡಿ, ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ರಾಮ ಮಂದಿರ ಭಾವಚಿತ್ರ ಹಾಗೂ ಮಂತ್ರಾಕ್ಷತೆ ವಿತರಣೆ ಮಾಡಲಿದ್ದು, ವಿತರಣೆಗೆ ತೆರಳಿದಾಗ ಕಾರ್ಯಕರ್ತರು ಶುಭ್ರ ವಸ್ತ್ರ ಧರಿಸಿರಬೇಕು. ಮಂತ್ರಾಕ್ಷತೆಯ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.

ವಿ.ಎಚ್.ಪಿ ಪ್ರಧಾನ ಕಾರ್ಯದರ್ಶಿ ಅಶ್ವಿನಿಕುಮಾರ ಪಟ್ಟಣಶೆಟ್ಟಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಎಸ್.ಎ. ದೇಗಿನಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ಪರಶುರಾಮ ಕುರಾಡೆ, ಬಸವರಾಜ ಬಿಜಾಪುರ, ರಾಜು ಮುಳವಾಡ, ಈಶ್ವರ ಪರಮಗೊಂಡ, ನಾಗರಾಜ ಪಟ್ಟಣಶೆಟ್ಟಿ, ವಿಠ್ಠಲ ಕುಲಕರ್ಣಿ, ರಾಜು ಮೋದಿ, ಪ್ರಭು ಪಟ್ಟಣಶೆಟ್ಟಿ, ಚನ್ನಯ್ಯ ಸಾರಂಗಮಠ, ಶ್ರೀಶೈಲ ಶಿರಗುಪ್ಪಿ, ಸ್ವರೂಪರಾಣಿ ಬಿಂಜಲಬಾವಿ, ಮಹಾದೇವಿ ಬಿರಾದಾರ, ಜಯಶ್ರೀ ಪಟ್ಟಣಶೆಟ್ಟಿ, ಮಹೇಶ ಸಾಲವಾಡಗಿ, ವಿಶ್ವನಾಥ ನೆಗಿನಾಳ ಇದ್ದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಾಗೂ ರಾಮಮಂದಿರ ಭಾವಚಿತ್ರ ವಿತರಣೆ ಮಾಡಲಾಯಿತು.