ಮರವಂತೆಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಸಮುದಾಯ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಗುರುವಾರ ಮರವಂತೆಯಲ್ಲಿ ನಡೆಯಿತು
ಕುಂದಾಪುರ: ಮರವಂತೆಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಸಮುದಾಯ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಗುರುವಾರ ಮರವಂತೆಯಲ್ಲಿ ನಡೆಯಿತು.
ಗುದ್ದಲಿ ಪೂಜೆ ನೆರವೇರಿಸಿದ ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಟ್ಟಡಕ್ಕಾಗಿ ಎಲ್ಲ ಪ್ರಯತ್ನವನ್ನು, ಸಹಕಾರವನ್ನು ನೀಡಲಾಗುವುದು. ನನಗೆ ಸಮಾಜದ ಋಣವಿದೆ. ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ, ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನವನ್ನು ಮಾಡಲಾಗುವುದು. ವೈಯಕ್ತಿಕ ಸಹಕಾರ ನೀಡಲಾಗುವುದು. ಇಲ್ಲಿನ ಸಂಘಟನೆಯ ಒಗ್ಗಟ್ಟಿನಿಂದ ಈ ಕಾರ್ಯ ನೆರವೇರಿದೆ. ಎಲ್ಲರೂ ಒಟ್ಟಾಗಿ ಸಮುದಾಯ ಭವನ ಮಾಡೋಣ ಎಂದರು.ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಬೈಂದೂರು ಭಾಗದಲ್ಲಿ ಬಿಲ್ಲವ ಸಮುದಾಯ ಯಾವುದೇ ಕಟ್ಟಡ, ನಿವೇಶನ ಇಲ್ಲ ಅನ್ನುವ ಕೊರಗು ಇತ್ತು. ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ಮರವಂತೆಯ ಈ ಸಮುದಾಯ ಭವನ ಸಹಕಾರಿಯಾಗಲಿದೆ. ಇಂತಹ ಭವನ ನಿರ್ಮಿಸುವುದು ಸಮಾಜದ ಎಲ್ಲರ ಕರ್ತವ್ಯ. ಕುಂದಾಪುರದ ನಾರಾಯಣ ಗುರು ಹಾಲ್ ನಲ್ಲಿ ಕೇವಲ ಬಿಲ್ಲವ ಸಮಾಜದವರಿಗೆ ಮಾತ್ರವಲ್ಲ, ಎಲ್ಲರಿಗೂ ಉಚಿತವಾಗಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ಕಲ್ಪಿಸಿದ್ದೇವೆ. ಎಲ್ಲ ದಾನಿಗಳ ಸಹಕಾರದಿಂದ ಈ ಕಟ್ಟಡ ನೆರವೇರಲಿ. ಸಮಾಜದ ಪ್ರತಿಯೊಬ್ಬರಿಗೂ ಈ ಸಮುದಾಯ ಭವನ ನೆರವಾಗಲಿ ಎಂದರು.
ಬೈಂದೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮರವಂತೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಪ್ರಸ್ತಾವಿಸಿದರು.ದುಬೈ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ ಶುಭಹಾರೈಸಿದರು.
ಪ್ರಮುಖರಾದ ಶಂಕರ ಬಿಲ್ಲವ, ಸತೀಶ್ ಪೂಜಾರಿ, ಪುಟ್ಟಯ್ಯ ಪೂಜಾರಿ, ಸಂಜೀವ ಪೂಜಾರಿ, ಚಂದ್ರ ಪೂಜಾರಿ, ಸೋಮಯ್ಯ ಬಿಲ್ಲವ, ಅಣ್ಣಯ್ಯ ಪೂಜಾರಿ, ಉಪ್ಪುಂದ ಮೀನುಗಾರರ ಸೊಸೈಟಿ ಅಧ್ಯಕ್ಷ ನಾಗೇಶ್ ಖಾರ್ವಿ, ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ತಿಮ್ಮ ದೇವಾಡಿಗ, ಕಾರ್ಯದರ್ಶಿ ಶ್ಯಾಮಲಾ ಪೂಜಾರಿ, ದೇಯಿ ಬೈದೆತಿ ಮಹಿಳಾ ಘಟಕದ ಸದಸ್ಯರು, ಬಿಲ್ಲವ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಗಣೇಶ್ ಪೂಜಾರಿ ಸ್ವಾಗತಿಸಿ, ಸತೀಶ್ ಪೂಜಾರಿ ಮರವಂತೆ ವಂದಿಸಿದರು. ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.