‘ರಸ್ತೆ ಸುರಕ್ಷತೆ’ ಜಾಗೃತಿಗಾಗಿ ಮಾ.1ಕ್ಕೆ ಸೇಫಥಾನ್‌ ಜಾಥಾ

| Published : Feb 19 2025, 01:17 AM IST

‘ರಸ್ತೆ ಸುರಕ್ಷತೆ’ ಜಾಗೃತಿಗಾಗಿ ಮಾ.1ಕ್ಕೆ ಸೇಫಥಾನ್‌ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಸುರಕ್ಷತೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಯು ಸಲುವಾಗಿ ಪೊಲೀಸ್‌ ಇಲಾಖೆ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಾ. 1ರಂದು ಸೇಫಥಾನ್‌ 2025 ಜಾಗೃತಿ ಜಾಥಾ ಆಯೋಜಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆ ಸುರಕ್ಷತೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಯು ಸಲುವಾಗಿ ಪೊಲೀಸ್‌ ಇಲಾಖೆ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಾ. 1ರಂದು ಸೇಫಥಾನ್‌ 2025 ಜಾಗೃತಿ ಜಾಥಾ ಆಯೋಜಿಸಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಾ. 1ರಂದು ಬೆಳಗ್ಗೆ 5ಕ್ಕೆ ಸೇಫಥಾನ್‌ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ. ನಡಿಗೆ, ಓಟ ಮತ್ತು ಸೈಕಲ್‌ ಚಲಾಯಿಸುವ ಮೂಲಕ ಸೇಫಥಾನ್‌ನಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ. ಸೇಫಥಾನ್‌ನಲ್ಲಿ ಭಾಗವಹಿಸಲು www.saferoadskarnataka.comನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಸೇಫಥಾನ್‌ ಕುರಿತ ಭಿತ್ತಿಪತ್ರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಬಿಡುಗಡೆ ಮಾಡಿದರು. ಈ ವೇಳೆ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್‌.ವಿ. ಪ್ರಸಾದ್‌, ಆಯುಕ್ತ ಯೋಗೀಶ್‌, ಅಪರ ಆಯುಕ್ತ ಮಲ್ಲಿಕಾರ್ಜುನ್‌ ಇತರರಿದ್ದರು.