ಸಾರಾಂಶ
ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಶಾಸಕ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿಶೀಘ್ರದಲ್ಲೇ ಮರಿಯಮ್ಮನಹಳ್ಳಿಯ ಪಪಂಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಕುರಿತು ಈಗಾಗಲೇ ಸಂಬಂಧಿಸಿದ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಗಿದೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.
ಇಲ್ಲಿನ ಪಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಕುರಿತು ಸಭೆಯಲ್ಲಿ ಮಾತನಾಡಿದರು.ಸಾರ್ವಜನಿಕರು ಕಚೇರಿಗೆ ಪದೇ ಪದೇ ಅಲೆದಾಡದಂತೆ ಅಧಿಕಾರಿಗಳು ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಿ ಅವರ ಕೆಲಸ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ತಕ್ಷಣವೇ ಪರಿಹರಿಸಿಕೊಡಬೇಕು. ಸಾರ್ವಜನಿಕರ ಕೆಲಸಕ್ಕೆ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಹಣ ಕೇಳುವಂತಿಲ್ಲ. ಒಂದು ವೇಳೆ ಪಂಚಾಯಿತಿ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದ್ದಿಗಳಾಗಲಿ ಲಂಚ ಕೇಳಿರುವ ಬಗ್ಗೆ ಸಾರ್ವಜನಿಕರಿಂದ ಏನಾದರೂ ದೂರು ಬಂದರೆ ಅಥಹವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಫಾರಂ 3 ವಿತರಿಸಲು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸೂಕ್ತ ದಾಖಲೆಗಳಿದ್ದರೆ, 30-40 ವರ್ಷಗಳಿಂದ ಅದೇ ಜಾಗದಲ್ಲಿ ವಾಸವಾಗಿದ್ದರೆ ಅವರ ದಾಖಲಾತಿ ಪರಿಶೀಲಿಸಿ ತಕ್ಷಣವೇ ಫಾರಂ 3 ವಿತರಿಸಲು ಸೂಚಿಸಿದರು. ದಾಖಲಾತಿಗಳಲ್ಲಿ ಏನಾದರೂ ಗೊಂದಲಗಳು ಇದ್ದರೆ ಅಧಿಕಾರಿಗಳು ಮತ್ತು ಸಿಬ್ಬಂದ್ದಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸಮಸ್ಯೆಯನ್ನು ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಮರಿಯಮ್ಮನಹಳ್ಳಿಗೆ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಈಗಾಗಲೇ ಚಾಲನೆ ನೀಡಲಾಗಿದ್ದು, ಕುಡಿವ ನೀರಿನ ಯೊಜನೆಯ ವಿದ್ಯುತ್ ಜೋಡಣೆ ಮಾತ್ರ ಬಾಕಿ ಇದ್ದು, ಅದನ್ನು ಒಂದು ತಿಂಗಳೊಳಗೆ ಮುಗಿಸಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಬಸ್ ನಿಲ್ದಾಣದ ಆವರಣದಲ್ಲಿ ಆಟೋ ನಿಲ್ದಾಣಕ್ಕಾಗಿ ಜಾಗ ಕಾಯ್ದೆರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಬಸ್ ನಿಲ್ದಾಣದಲ್ಲಿ ಈಗಿರುವ ಅಂಗಡಿ ಹೊರತು ಪಡಿಸಿ ಹೊಸದಾಗಿ ಅಂಗಡಿಗಳಿಗೆ ಪರವಾನಿಗೆ ನೀಡಬಾರದು. ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.
ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ಉಪಾಧ್ಯಕ್ಷೆ ಲಕ್ಷ್ಮ್ರೀ ರೋಗಾಣಿ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷೆ ಎಲ್. ಹುಲಿಗಿಬಾಯಿ ರುದ್ರನಾಯ್ಕ್, ಪಪಂ ಸದಸ್ಯರಾದ ಪೂಜ ಅಶ್ವಿನಿ ನಾಗರಾಜ್, ಎಲ್. ವಸಂತ, ಬಿ.ಎಂ.ಎಸ್. ರಾಜೀವ್, ಎಸ್. ಮಹಮ್ಮದ್, ಎಲ್. ಪರಶುರಾಮ, ಮರಡಿ ಸುರೇಶ್, ಕೆ. ಮಂಜುನಾಥ, ಜಿಲ್ಲಾ ಯೊಜನಾ ನಿರ್ದೇಶಕ ಮನೋಹರ, ಪ.ಪಂ. ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್, ಉಪತಹಸೀಲ್ದಾರ್ ಶ್ರೀಧರ, ಕಂದಾಯ ನಿರೀಕ್ಷಕ ಅಂದಾನಗೌಡ, ವೈದ್ಯಾಧಿಕಾರಿ ಡಾ. ಮಂಜುಳಾ, ಜೆಸ್ಕಾಂನ ದಯಾನಂದ, ವೆಂಕಟೇಶ, ಎಂಜಿನಿಯರ್ ಟಿ.ಎಸ್. ಹನುಮಂತಪ್ಪ ಸೇರಿದಂತೆ ಪಪಂ ಅಧಿಕಾರಿಗಳು ಸಭಂಯಲ್ಲಿ ಉಪಸ್ಥಿತರಿದ್ದರು.