ಸಾರಾಂಶ
ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನೂತನ ಆಡಳಿತ ಸಮಿತಿ ವತಿಯಿಂದ ಪ್ರಥಮ ಗ್ರಾಮ ಸಭೆ ಭಾನುವಾರ ಸಾನಿಧ್ಯದ ಉಮಾಮಹೇಶ್ವರಿ ಸಭಾಭವನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಂಬಳ ಮನೆ ದಿನೇಶ್ ಶೆಟ್ಟಿ ಮಾರ್ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನೂತನ ಆಡಳಿತ ಸಮಿತಿ ವತಿಯಿಂದ ಪ್ರಥಮ ಗ್ರಾಮ ಸಭೆ ಭಾನುವಾರ ಸಾನಿಧ್ಯದ ಉಮಾಮಹೇಶ್ವರಿ ಸಭಾಭವನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಂಬಳ ಮನೆ ದಿನೇಶ್ ಶೆಟ್ಟಿ ಮಾರ್ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ದೇವಸ್ಥಾನದ ಅನುವಂಶಿಕ ತಂತ್ರಿಗಳಾದ ಚಂದ್ರಕಾಂತ್ ತಂತ್ರಿ ಮಾತನಾಡಿ, ದೇವಳದಲ್ಲಿ ಸುಮಾರು 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಯಬೇಕಾಗಿದ್ದು, 34 ವರ್ಷ ಸಂದರೂ ಜೀರ್ಣೋದ್ಧಾರ ಆಗದಿರುವುದರಿಂದ ಸ್ಥಳೀಯರ ಹಾಗೂ ಪರ ಊರಿನ ಭಕ್ತರ ನೆರವಿನಿಂದ ಭಗವತ್ಭಕ್ತರು ನೂತನ ಆಡಳಿತ ಸಮಿತಿಯೊಂದಿಗೆ ಕೈಜೋಡಿಸಿ ಜೀರ್ಣೋದ್ಧಾರದ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.ಸಭೆಯಲ್ಲಿ ಆಡಳಿತ ಸಮಿತಿಯ ಸದಸ್ಯರಾದ ಪಾಂಡುರಂಗ ನಾಯ್ಕ್ ಮಾರ್ಪಳ್ಳಿ, ಶಂಕರ್ ಆಚಾರ್ಯ ಮಾರ್ಪಳ್ಳಿ, ವಿಜಯಲಕ್ಷ್ಮೀ ಎಂ. ಚಂದ್ರಾವತಿ ಎಂ ಪರ್ಯಾಯ ಅರ್ಚಕರಾದ ವೆಂಕಟಾಚಲ ಉಪಾಧ್ಯಾಯ, ರಾಜೇಂದ್ರ ಉಪಾಧ್ಯಾಯ, ಅನಂತ ಉಪಾಧ್ಯಾಯ, ಪ್ರಸನ್ನ ಉಪಾಧ್ಯಾಯ ಉಪಸ್ಥಿತರಿದ್ದರು.ವ್ಯವಸ್ಥಾಪನ ಸಮಿತಿ ಸದಸ್ಯರಾದ ಗರೋಡಿ ಮನೆ ಶೇಖರ ಸುವರ್ಣ ಸಾನಿಧ್ಯದ ಮುಂದಿನ ಯೋಜನೆಗಳನ್ನು ಪ್ರಸ್ತಾವಿಸಿ ಸಭೆಯ ಮುಂದಿಟ್ಟರು. ಸದಸ್ಯ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿ, ಸುಬ್ರಹ್ಮಣ್ಯ ಉಪಾಧ್ಯಾಯ ನಿರೂಪಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಉಮೇಶ್ ಎಸ್ ಶೆಟ್ಟಿಗಾರ್ ವಂದಿಸಿದರು.