ಸಾರಾಂಶ
ಲೋಕ ಅದಾಲತ್‌ನಲ್ಲಿ ಒಂದುಗೂಡಿದ ಜೋಡಿ
ಬಾದಾಮಿ: ಇಲ್ಲಿನ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಮೂರು ಜೊತೆ ಜೋಡಿಗಳು ಒಂದಾಗಿ ಬಾಳ್ವೆ ಮಾಡಲು ಪರಸ್ಪರ ಒಪ್ಪಿಕೊಂಡರು.
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಈ ಮೂರು ಕುಟುಂಬದವರಿಗೆ ಸತಿ, ಪತಿಗಳಿಗೆ ತಿಳಿಹೇಳಿ ಮನಸ್ಸು ಪರಿವರ್ತನೆ ಮಾಡಿ ಬೃಹತ್ ಲೋಕ ಅದಾಲತ್ ನಲ್ಲಿ ಒಂದುಗೂಡಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ವಿ. ಹನುಮಂತಪ್ಪ, ಪ್ರಧಾನ ದಿವಾಣಿ ನ್ಯಾಯಾಧೀಶ ಸಂಜುಕುಮಾರ ಪಾಚಾಪುರೆ, ನ್ಯಾಯವಾದಿಗಳಾದ ಕೆ.ವಿ. ಕೆರೂರ, ಎಫ್.ವಿ. ಹಿರೇಮಠ, ವಿ.ಆರ್. ಮಣ್ಣೂರಮಠ, ಎಸ್.ವಿ. ಯಲಿಗಾರ, ಯಮನೂರ ನಾಯಕ, ಆರ್.ಪಿ. ಹಿಂದಿನಮನಿ, ಜ್ಯೋತಿ ಮುತಾಲಿಕ ದೇಸಾಯಿ, ಎಸ್.ಎಂ. ಪಾಟೀಲ ಸೇರಿದಂತೆ ಇತರರು ಇದ್ದರು.