ಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

| Published : May 12 2024, 01:19 AM IST

ಸಾರಾಂಶ

ಗ್ರಾಮಸ್ಥರ ಭಕ್ತಿ ಪೂರ್ವಕ ಬಿನ್ನಹದ ಮೇರೆಗೆ ಕುಪ್ಪೂರು ಗದ್ದಿಗೆ ಮಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಇತಿಹಾಸ ಪ್ರಸಿದ್ಧ ಮಾಡಾಳು ಶ್ರೀ ಸ್ವರ್ಣ ಗೌರಿ ದೇವಿ ಮೂಲ ಸನ್ನಿಧಿಗೆ ಬರುವ ಮೂಲಕ ಅಮ್ಮನವರ ಭಕ್ತವರಿಂದ ಪುನೀತವಾಯಿತು.

ಅರಸೀಕೆರೆ: ಗ್ರಾಮಸ್ಥರ ಭಕ್ತಿ ಪೂರ್ವಕ ಬಿನ್ನಹದ ಮೇರೆಗೆ ಕುಪ್ಪೂರು ಗದ್ದಿಗೆ ಮಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಇತಿಹಾಸ ಪ್ರಸಿದ್ಧ ಮಾಡಾಳು ಶ್ರೀ ಸ್ವರ್ಣ ಗೌರಿ ದೇವಿ ಮೂಲ ಸನ್ನಿಧಿಗೆ ಬರುವ ಮೂಲಕ ಅಮ್ಮನವರ ಭಕ್ತವರಿಂದ ಪುನೀತವಾಯಿತು.

ಜಾತ್ರಾ ಮಹೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಹಾಗೂ ಭಕ್ತರ ಮನೆಗಳಿಗೆ ಮರಳು ಸಿದ್ದೇಶ್ವರ ಸ್ವಾಮಿ ಪಾಲ್ಗೊಳ್ಳುವದು ಇಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ, ಆದರೆ ಕಳೆದ ಎರಡು ದಶಕಗಳಿಂದ ಅನಿವಾರ್ಯ ಕಾರಣಗಳಿಂದ ಹಳ್ಳಿಗಳ ಭಕ್ತರ ಮನೆಗಳಿಗೆ ಕಳಿಸಬಾರದೆಂದು ಮಠದಲ್ಲಿ ತೀರ್ಮಾನವಾಗಿತ್ತು. ಆದರೆ ಇತ್ತೀಚೆಗೆ ಹಳ್ಳಿಗಳ ಭಕ್ತರು ಸ್ವಾಮಿಯನ್ನು ಗ್ರಾಮಗಳಿಗೆ ಕಳಿಸಬೇಕೆಂಬ ಒತ್ತಾಸೆಯಿದ್ದರಿಂದ ಪುನಃ ಸ್ವಾಮಿಯನ್ನು ಮಠದ ಆಡಳಿತಾಧಿಕಾರಿಗಳು ಸ್ವಾಮಿಯನ್ನು ಗ್ರಾಮಗಳಿಗೆ ಕಳುಹಿಸಿಕೊಡುತ್ತಿರುವುದು ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಅದರಂತೆ ಈ ಬಾರಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಬಿನ್ನಹ ಮಾಡಿದ್ದರು. ಮೇ10ರಂದು ಸಂಜೆ ಗ್ರಾಮಕ್ಕೆ ಆಗಮಿಸಿದ ಶ್ರೀ ಮರಳು ಸಿದ್ದೇಶ್ವರ ಸ್ವಾಮಿ ನಾಡಿನ ಆರಾಧ್ಯ ದೇವತೆ ಸ್ವರ್ಣ ಗೌರಿ ಮೂಲ ಸನ್ನಿಧಿಗೆ ಬರುವ ಮೂಲಕ ಅಮ್ಮನವರ ಭಕ್ತವೃಂದ ಸಂತಸಪಟ್ಟಿತು. ಮೂಲ ಸನ್ನಿಧಿಯಲ್ಲಿ ಮಠದ ಆಡಳಿತಾಧಿಕಾರಿ ವಾಗೀಶ ಆರಾಧ್ಯರು ಹಾಗೂ ಬಾವಿಮನೆ ಮಲ್ಲಿಕಾರ್ಜುನಪ್ಪ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಧನ್ಯತಾಭಾವ ಬಂದಿದ್ದರು ಈ ಸಂದರ್ಭದಲ್ಲಿ ಮುಖಂಡ ಮಾಡಳು ಶಿವಲಿಂಗಪ್ಪ ಪೂಜೆಯಲ್ಲಿ ಭಾಗಿಯಾಗಿದ್ದರು.