ಕರಡಿ ಮಾರಮ್ಮ ದೇವಿ ಬಳಗದ ಯುವಕರು ದೇವಾಲಯಕ್ಕೆ ಬರುವ ಭಕ್ತರಿಗೆ ವ್ಯವಸ್ಥಿತವಾಗಿ ಅನ್ನ ಸಂತರ್ಪಣೆಗೆ ಸಿದ್ಧತೆ ಮಾಡಿಕೊಂಡು ಮಧ್ಯಾಹ್ನದ ವೇಳೆಗೆ ಬಂದ ಭಕ್ತರಿಗೆ ಮಹಾ ಮಂಗಳಾರತಿ ಪೂಜೆ ನೀಡಿ ನಂತರ ಅನ್ನ ಸಂತರ್ಪಣೆ ಕೈಗೊಂಡರು. ಸಾವಿರಾರು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನ ಕರಡಿ ಮಾರಮ್ಮನ ದೇವಾಲಯದ ಬಳಿ ಶ್ರೀಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಭಕ್ತರಿಗೆ ಅನ್ನ ಸಂರ್ತಪಣೆ ನಡೆಯಿತು.ದೇವಾಲಯದ ಅರ್ಚಕ ಸತ್ತಿರಾಜ್ ನೇತೃತ್ವದಲ್ಲಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ದೇವಿಗೆ ವಿಶೇಷ ಪೂಜಾ ಕಾರ್ಯಗಳ ನೆರವೇರಿಸಲಾಯಿತು. ಕರಡಿ ಮಾರಮ್ಮ ದೇವಿ ಬಳಗದ ಯುವಕರು ದೇವಾಲಯಕ್ಕೆ ಬರುವ ಭಕ್ತರಿಗೆ ವ್ಯವಸ್ಥಿತವಾಗಿ ಅನ್ನ ಸಂತರ್ಪಣೆಗೆ ಸಿದ್ಧತೆ ಮಾಡಿಕೊಂಡು ಮಧ್ಯಾಹ್ನದ ವೇಳೆಗೆ ಬಂದ ಭಕ್ತರಿಗೆ ಮಹಾ ಮಂಗಳಾರತಿ ಪೂಜೆ ನೀಡಿ ನಂತರ ಅನ್ನ ಸಂತರ್ಪಣೆ ಕೈಗೊಂಡರು. ಸಾವಿರಾರು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಈ ವೇಳೆ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ, ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಲ್.ದಿನೇಶ್, ಎಲ್.ನಾಗರಾಜು, ಶಿವಾಜಿರಾವ್, ಜೆಡಿಎಸ್ ನಗರಾಧ್ಯಕ್ಷ ಕೆ.ನಾರಾಯಣ್, ಬಿಜೆಪಿ ಮುಖಂಡ ಮಂಜು ಸೇರಿದಂತೆ ಇತರ ಪುರಸಭಾ ಸದಸ್ಯರು, ಗ್ರಾಮದ ಮುಖಂಡರು, ಕರಡಿ ಮಾರಮ್ಮ ಯುವಕರ ಬಳಗದವರು ಇದ್ದರು.ಪ್ರೌಢಶಾಲೆ ಮಕ್ಕಳಿಗೆ ಸಮವಸ್ತ್ರ, ಸಿಹಿ ವಿತರಣೆಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಶ್ರೀಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಮಂಡ್ಯ ರಕ್ಷಣಾ ವೇದಿಕೆಯಿಂದ ತಾಲೂಕಿನ ಬಾಬುರಾಯನಕೊಪ್ಪಲು ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಸಮವಸ್ತ್ರ ಹಾಗೂ ಸಿಹಿ ವಿತರಿಸಲಾಯಿತು.
ಮರವೇ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ಸಮವಸ್ತ್ರ ಹಾಗೂ ಸಹಿ ವಿತರಿಸಿ ಮಾತನಾಡಿ, ತಾಯಿ ಚಾಮುಂಡೇಶ್ವರಿ ಹುಟ್ಟುಹಬ್ಬದಂದು ಪಟ್ಟಣದ ಸರ್ಕಾರಿ ಶಾಲೆ ಎಲ್ಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಗುತ್ತಿದೆ ಎಂದರು.ಈಗಾಗಲೇ ಹಲವು ಶಾಲೆಗಳಲ್ಲಿ ಸಿಹಿ ವಿತರಿಸುವ ಜೊತೆಗೆ ಸಮವಸ್ತ್ರವನ್ನುನ ನೀಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ದೇವಿ ಕೃಪೆಯಿಂದ ಈ ಸೇವೆ ನಡೆಸಿಕೊಂಡು ಬಂದಿದ್ದೇವೆ. ಮುಂದೆಯೂ ಸಂಘಟನೆಯ ಹೆಸರಿನಲ್ಲಿ ಹಲವು ಸಾಮಾಜಿಕ ಸೇವೆಗಳ ಜೊತೆ ಬಡ ಶಾಲಾ ಮಕ್ಕಳಿಗೆ ಅನುಕೂಲ ವಾದ ಸಹಾಯ ಮಾಡಲಾಗುವುದು ಎಂದರು.ಈ ವೇಳೆ ಶಾಲೆ ಮುಖ್ಯ ಶಿಕ್ಷಕಿ ಹೇಮಲತಾ ಹರಿಯಾಣ ಸೇರಿದಂತೆ ಸಹ ಶಿಕ್ಷಕರು, ಮಂಡ್ಯ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್ ಜಗದೀಶ್ ಗೌಡ, ಭಾಗ್ಯಮ್ಮ, ವೀಣಾ ಬಾಯಿ, ನಂದಿನಿ ಬಾಯಿ, ಪ್ರಶಾಂತ್, ದ್ರಾಕ್ಷಾಯಿಣಿ, ಪ್ರಭಾಕರ್, ಕೂಡಲಕುಪ್ಪೆ ಕುಮಾರಣ್ಣ, ಮಹೇಂದ್ರ, ಚಂದ್ರಣ್ಣ ಸೇರಿದಂತೆ ಇತರರು ಇದ್ದರು.